Viral Video: ಬಾಳೆಹಣ್ಣಿಗೆ ಇನ್ನುಮುಂದೆ ಕರ್ಮಫಲವೆಂದು ಮರುನಾಮಕರಣ ಮಾಡಬೇಕೆ?

Karma : ಕೊರೊನಾದ ಮೂಲಕ ಇಷ್ಟೊಂದು ಆನ್​ಲೈನ್ ಕ್ರಾಂತಿ ಆಗುತ್ತದೆ ಎಂದು ಯಾರಿಗಾದರೂ ಗೊತ್ತಿತ್ತೆ? ಇಂದು ಕೋಟ್ಯಂತರ ವಿಡಿಯೋ ಕಂಟೆಂಟರುಗಳು ಬೆಳಗಾಗುವಷ್ಟೊತ್ತಿಗೆ ಧುತ್ತನೆ ಪ್ರತ್ಯಕ್ಷರಾಗಿಬಿಡುತ್ತಾರೆ. ಪರದೆಯ ಮೇಲೆ ಮನರಂಜನೆ ಕೊಡುವುದೇ ಅವರ ಉದ್ಯೋಗವಾದಂತಿದೆ. ಈ ರೀಲ್ಸ್ ನೋಡಿ ಒಂದು ಬಾಳೆಹಣ್ಣಿನ ಎರಡು ಕಥೆಗಳಿವೆ ಇಲ್ಲಿ.

Viral Video: ಬಾಳೆಹಣ್ಣಿಗೆ ಇನ್ನುಮುಂದೆ ಕರ್ಮಫಲವೆಂದು ಮರುನಾಮಕರಣ ಮಾಡಬೇಕೆ?
ದೀಪು ಸೀತು ಸಂಸಾರ
Follow us
ಶ್ರೀದೇವಿ ಕಳಸದ
|

Updated on:Aug 18, 2023 | 5:26 PM

Reel : ಎಲ್ಲರೂ ಒಬ್ಬರಿಗೊಬ್ಬರು ಬಹಳ ಪ್ರೀತಿಸುತ್ತಾರೆ ಈ ಕುಟುಂಬದಲ್ಲಿ. ಮಾಡಿದ್ದುಣ್ಣೋ ಮಾರಾಯಾ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ. ಇಂಥ ಜನರಿಗೆ ಹೀಗೇಯೇ ಆಗಬೇಕು. ಪಾಪ ತಾನೇ ಆ ಬಾಳೆಹಣ್ಣು (Banana) ತಿನ್ನುವಂತಾಯಿತು. ಅವರ ಕರ್ಮ ಅವರನ್ನು ಸುತ್ತುಕೊಂಡು ಬರುತ್ತದೆ ಎನ್ನುವುದು ಇಂಥದಕ್ಕೇ. ಸುತ್ತೀ ಬಳಸಿ ಬಾಳೆಹಣ್ಣು ಆಕೆಯ ಬಳಿಯೇ ಬಂದಿತು. ಕರ್ಮ ವಾಪಾಸಾಗುತ್ತದೆ ಎಂದು ಸುಮ್ಮನೇ ಹೇಳಿದ್ದಲ್ಲ. ಕಲಿಯುಗದಲ್ಲಿ ಕರ್ಮವನ್ನು ಅನುಭವಿಸುವುದು ಎಂದರೆ ಇದೇ… ಈ ವಿಡಿಯೋ ನೋಡಿದ ನೆಟ್ಟಿಗರು ಹೀಗೆ ಸಾಲಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಮನುಷ್ಯನ ಪೊಳ್ಳುತನವನ್ನು, ಹುಳುಕುತನವನ್ನು ಈ ವಿಡಿಯೋ ಸಾಣೆ ಹಿಡಿದಿದೆ ಎನ್ನುತ್ತಿದ್ದಾರೆ.

ಇದನ್ನೂ ಓದಿ : Viral Video: ವಾಟ್ ಝುಮ್ಕಾ ತಮಿಳು ವರ್ಷನ್​; ‘ಸದ್ಯದಲ್ಲೇ ಜಾಕ್​ಪಾಟ್ ಹೊಡೆಯುತ್ತೀರಿ ಮೇಡಮ್!’

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಿಡಿಯೋ ಅನ್ನು ಜು. 24ರಂದು ಹಂಚಿಕೊಳ್ಳಲಾಗಿದೆ. ಈತನಕ 1 ಮಿಲಿಯನ್​ಗಿಂತಲೂ ಹೆಚ್ಚು ಜನ ಇದಕ್ಕೆ ಲೈಕ್ ಹಾಕಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿ ಈ ಪರಿಕಲ್ಪನೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಭೂಮಿ ದುಂಡಗಿದೆ. ಎಲ್ಲಿಂದ ಶುರುವಾಗಿರುತ್ತದೆಯೋ ಮರಳಿ ಅಲ್ಲಿಗೇ ಬರುತ್ತದೆ ಎಂದು ಬಿದ್ದುಬಿದ್ದು ನಗುತ್ತಿದ್ದಾರೆ ನೆಟ್ಟಿಗರು.

ಬಾಳೆಹಣ್ಣು ಎಂಬ ಕರ್ಮಫಲ! ಏನಿದೆ ಈ ವಿಡಿಯೋದಲ್ಲಿ, ನೋಡಿಬಿಡಿ

ನೋಡಿದಿರಲ್ಲ ವಿಡಿಯೋ? ನಿಜಕ್ಕೂ ಈ ಕುಟುಂಬದಲ್ಲಿ ಪರಸ್ಪರರು ಎಷ್ಟೊಂದು ಪ್ರೀತಿಸುತ್ತಾರೆ ಎಂದು ತಮಾಷೆ ಮಾಡಿದ್ದಾರೆ ಒಬ್ಬರು. ಹೆಂಡತಿ ಗಂಡನನ್ನು ತುಸು ಜಾಸ್ತಿಯೇ ಪ್ರೀತಿಸುತ್ತಾಳೆ ಎನ್ನಿಸುವುದಿಲ್ಲವೆ? ಎಂದು ಕೇಳಿದ್ದಾರೆ ಮತ್ತೊಬ್ಬರು. ಅಹಮದಾಬಾದ್​ ಮೂಲದ ದೀಪು ಸೀತು ಎಂಬ ವಿಡಿಯೋ ಕ್ರಿಯೇಟರುಗಳು ಇವರು. ಇನ್ಕ್ರೀಸಿಂಗ್​ ಹ್ಯಾಪಿನೆಸ್​ ಇಂಡೆಕ್ಸ್ ಆಫ್​ ಇಂಡಿಯಾ ಎಂಬ ಟ್ಯಾಗ್​ಲೈನ್​ ಇವರ ಇನ್​ಸ್ಟಾ ಅಕೌಂಟಿನದು. ಬಾಳೆಹಣ್ಣನ್ನಿಟ್ಟುಕೊಂಡೇ ಇವರು ಮತ್ತೊಂದು ವಿಡಿಯೋ ಸೃಷ್ಟಿಸಿದ್ದಾರೆ.

ನೆಕ್ಲೇಸ್​ ಯಾವಾಗ ಕೊಡಿಸುತ್ತೀರಿ ಎಂದು ಆಕೆ ಕೇಳಿದಾಗ ಅವ ಏನು ಹೇಳುತ್ತಾನೆ ನೋಡಿ

ಹೆಚ್ಚು ಖರ್ಚು ಮಾಡದೆ, ಪರಿಕರಗಳ ಬಗ್ಗೆ ಯೋಚಿಸದೆ, ಸಂಭಾಷಣೆಯ ಗೋಜಿಗೂ ಹೋಗದೆ, ಮನೆಯಲ್ಲಿಯೇ ಕುಳಿತು ಮೌನವಾಗಿ ಜನರನ್ನು ನಗಿಸಿದೆ ಈ ಜೋಡಿ. ಬಾಳೆಹಣ್ಣು ತಿನ್ನುತ್ತ ಅದನ್ನೇ ಪ್ರತಿಮೆಯನ್ನಾಗಿಸಿಕೊಂಡು ನೆಕ್ಲೇಸ್ ಯಾವಾಗ ಎಂದು ಕೇಳುತ್ತಾಳೆ. ಆತ, ಹರಿದ ಕಾಲುಚೀಲವನ್ನು ಗುರುತು ಮಾಡಿ ತನ್ನ ಪರಿಸ್ಥಿತಿ ಹೇಳಿಕೊಳ್ಳುತ್ತಾನೆ. ಇವರ ಸೃಜನಶೀಲ ರೀತಿಗೆ ನೆಟ್ಟಿಗರು ಶಭಾಷ್ ಎಂದಿದ್ದಾರೆ.

ಈ ವಿಡಿಯೋಗಳನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 5:25 pm, Fri, 18 August 23