Viral Video: ವಾಟ್ ಝುಮ್ಕಾ ತಮಿಳು ವರ್ಷನ್​; ‘ಸದ್ಯದಲ್ಲೇ ಜಾಕ್​ಪಾಟ್ ಹೊಡೆಯುತ್ತೀರಿ ಮೇಡಮ್!’

Aliya Bhat : ಕಾವಾಲಾ ಹಾಡಿನೊಂದಿಗೆ ಇದೀಗ ವಾಟ್ ಝಮ್ಕಾ ಹಾಡು ಕೂಡ ಟ್ರೆಂಡ್​ನಲ್ಲಿದೆ. ವಾಟ್ ಝುಮ್ಕಾ ಹಾಡಿನ ಕೆಲ ಸಾಲುಗಳನ್ನು ತಮಿಳಿಗೆ ಅನುವಾದಿಸಿ ಹಾಡಿದ್ದಾರೆ ಕಲಾವಿದೆ ಶ್ರುತಿ ಶಂಕರ್​. ಇವರ ಸುಶ್ರಾವ್ಯ ಕಂಠಕ್ಕೆ, ಅನುವಾದಕ್ಕೆ ಮತ್ತು ಭಾವಾಭಿವ್ಯಕ್ತಿಗೆ ನೆಟ್ಟಿಗರು ಮಾರುಹೋಗುತ್ತಿದ್ದಾರೆ. ಈ ಹಾಡನ್ನು ಪೂರ್ತಿಯಾಗಿ ತಮಿಳಿಗೆ ಅನುವಾದಿಸಿ ಹಾಡಿ ಎನ್ನುತ್ತಿದ್ದಾರೆ.

Viral Video: ವಾಟ್ ಝುಮ್ಕಾ ತಮಿಳು ವರ್ಷನ್​; 'ಸದ್ಯದಲ್ಲೇ ಜಾಕ್​ಪಾಟ್ ಹೊಡೆಯುತ್ತೀರಿ ಮೇಡಮ್!'
ವಾಟ್ ಝುಮ್ಕಾ ಹಾಡುತ್ತಿರುವ ತಮಿಳು ಕಲಾವಿದೆ ಶ್ರುತಿ ಶಂಕರ್
Follow us
ಶ್ರೀದೇವಿ ಕಳಸದ
|

Updated on: Aug 18, 2023 | 4:11 PM

What Jhumka : ಆಲಿಯಾ ಭಟ್​ ಮತ್ತು ರಣವೀರ್ ಸಿಂಗ್ (Aliya Bhat and Ranveer Singh)​ ಅಭಿನಯದ ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿಯಲ್ಲಿನ ಹಾಡು ‘ವಾಟ್​ ಝುಮ್ಕಾ’. ಈ ಹಾಡು ಇದೀಗ ಟ್ರೆಂಡ್​ನಲ್ಲಿದೆ. ನಿನ್ನೆಯಷ್ಟೇ ವಧುವೊಬ್ಬಳು ತನ್ನ ಸ್ನೇಹಿತೆಯರೊಂದಿಗೆ ಈ ಹಾಡಿಗೆ ನರ್ತಿಸಿದ್ದನ್ನು ನೋಡಿದಿರಿ. ಇದೀಗ ಇದೇ ಹಾಡಿಗೆ ತಮಿಳು ಸಾಹಿತ್ಯವನ್ನು ಸಂಯೋಜಿಸಿ ಹಾಡಿದ್ದಾರೆ ತಮಿಳು ಕಲಾವಿದೆ ಶ್ರುತಿ ಶಂಕರ್. ಗಿಟಾರ್​ ಸಾಥಿಯೊಂದಿಗೆ ಈ ಹಾಡನ್ನು ಹಾಡಿದ್ದಾರೆ. ನೆಟ್ಟಿಗರು ಇವರ ಈ ರೀಲ್​ ಅನ್ನು ಮೆಚ್ಚಿಕೊಂಡಿದ್ದಾರೆ. ನಿಮ್ಮ ಈ ಆಲೋಚನೆ ಮತ್ತು ಪ್ರಸ್ತುತಿ ಅದ್ಭುತವಾಗಿದೆ ಎನ್ನುತ್ತಿದ್ದಾರೆ.

ಇದನ್ನೂ ಓದಿ : Viral: ತಾತ್ಕಾಲಿಕ ಸಂಗಾತಿಗಳ ಆಯ್ಕೆಯತ್ತ ಒಲವು ತೋರಿಸಿದ ಚೀನಾದ ಯುವಜನತೆ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಪೋಸ್ಟ್​ ಅನ್ನು ಆ. 9ರಂದು ಶ್ರುತಿ ಶಂಕರ್ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಕರಣ್ ಜೋಹರ್, ಆಲಿಯಾ ಭಟ್, ರಣವೀರ್ ಸಿಂಗ್, ಸಂಯು ಮೋಹನ್​ ಮತ್ತು ಪ್ರೀತಮ್​ ಅವರನ್ನು ಟ್ಯಾಗ ಮಾಡಿದ್ದಾರೆ. ಈತನಕ ಈ ವಿಡಿಯೋ ಅನ್ನು 1 ಲಕ್ಷಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ. ಸಾವಿರಾರು ಜನರು ಮೆಚ್ಚಿ ಪ್ರತಿಕ್ರಿಯಿಸಿದ್ದಾರೆ.

ವಾಟ್ ಝುಮ್ಕಾ! ಶ್ರುತಿ ಶಂಕರ್ ಅವರ ತಮಿಳು ವರ್ಷನ್ ಕೇಳಿ

ನೀವು ಮಸ್ತ್ ಹಾಡಿದ್ದೀರಿ, ಇಷ್ಟರಲ್ಲಿಯೇ ಜಾಕ್​ಪಾಟ್​ ಹೊಡೆಯುತ್ತೀರಿ ಎಂದಿದ್ದಾರೆ ಒಬ್ಬರು. ನಿಮ್ಮ ಈ ವರ್ಷನ್​ ಅನ್ನು ಪ್ರೀತಿಸುತ್ತಿದ್ದೇನೆ ಎಂದಿದ್ದಾರೆ ಇನ್ನೊಬ್ಬರು. ಮೂಲಹಾಡಿಗಿಂತ ಈ ಹಾಡು ಚೆನ್ನಾಗಿದೆ ಎಂದಿದ್ದಾರೆ ಮತ್ತೊಬ್ಬರು. ಆಹಾ ಎಂಥ ಮಧುರ ಧ್ವನಿ ಎಂದಿದ್ದಾರೆ ಮಗದೊಬ್ಬರು. ಸಿಹಿಯಾದ ಪ್ರಸ್ತುತಿ ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ದಕ್ಷಿಣ ಕೊರಿಯಾದಿಂದ ಕಾವಾಲಾ ಕಾವಿನೊಂದಿಗೆ ಊ ಅಂಟಾವಾ ಮ್ಯಾಷಪ್​

ಮೇಡಮ್ ದಯವಿಟ್ಟು ಈ ಹಾಡನ್ನು ಪೂರ್ತಿ ತಮಿಳು ವರ್ಷನ್​ನಲ್ಲಿ ಹಾಡಿ, ನಿಮ್ಮ ಮಧುರ ಧ್ವನಿಗೆ ಶರಣಾಗಿದ್ದೇನೆ ಎಂದಿದ್ದಾರೆ ಒಬ್ಬರು. ನಿಮ್ಮ ಧ್ವನಿ, ನಿಮ್ಮ ಅನುವಾದ, ನಿಮ್ಮ ಭಾವಾಭಿವ್ಯಕ್ತಿ ಎಲ್ಲವೂ ತುಂಬಾ ಹಿಡಿಸಿತು, ನೀವೊಬ್ಬ ನಟಿಯೂ ಹೌದು ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ