Viral Video: ದಕ್ಷಿಣ ಕೊರಿಯಾದಿಂದ ಕಾವಾಲಾ ಕಾವಿನೊಂದಿಗೆ ಊ ಅಂಟಾವಾ ಮ್ಯಾಷಪ್​

Jailer : ಕಾವಾಲಾ ಹಾಡಿನ ಟ್ರೆಂಡ್​ ದಿನೇದಿನೇ ಕಾವೇರುತ್ತಿದೆ. ಇದೀಗ ದಕ್ಷಿಣ ಕೊರಿಯಾದ ಕೆ ಪಾಪ್ ಕಲಾವಿದರು ಕಾವಾಲಾ ಮತ್ತು ಊ ಅಂಟಾವಾ ಮ್ಯಾಷಪ್ ಮಾಡಿದ್ದಾರೆ. ನೆಟ್ಟಿಗರು ಬಹುವಾಗಿ ಮೆಚ್ಚಿಕೊಂಡಿದ್ದು, ಭಾರತ ಮತ್ತು ಭಾರತೀಯ ಹಾಡುಗಳ ಬಗ್ಗೆ ಕಲಾವಿದರಿಗೆ ಇರುವ ಪ್ರೀತಿಯ ಬಗ್ಗೆ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ.

Viral Video: ದಕ್ಷಿಣ ಕೊರಿಯಾದಿಂದ ಕಾವಾಲಾ ಕಾವಿನೊಂದಿಗೆ ಊ ಅಂಟಾವಾ ಮ್ಯಾಷಪ್​
ಕಾವಾಲಾ, ಊ ಅಂಟಾವಾ ಮ್ಯಾಷಪ್​ ದಕ್ಷಿಣ ಕೊರಿಯಾದ ಕಲಾವಿದರಿಂದ.
Follow us
ಶ್ರೀದೇವಿ ಕಳಸದ
|

Updated on:Aug 18, 2023 | 2:32 PM

Kaavaalaa : ಕಾವಾಲಾ ಹಾಡು ಭರ್ಜರಿ ಟ್ರೆಂಡ್​ನಲ್ಲಿದೆ. ರಜಿನಿಕಾಂತ್​ (Rajinikanth) ಅಭಿಮಾನಿ ಮತ್ತು ಜಪಾನಿನ ರಾಯಭಾರಿಯಾಗಿರುವ ಹಿರೋಷಿ ಸುಝುಕಿ ಜೈಲರ್​ ಸಿನೆಮಾದ ಕಾವಾಲಾ ಹಾಡಿಗೆ ನರ್ತಿಸಿದ್ದನ್ನು ನಿನ್ನೆಯಷ್ಟೇ ನೋಡಿದ್ದಿರಿ. ಇದೀಗ ದಕ್ಷಿಣ ಕೊರಿಯಾದ ಅವೂರಾ ಎಂಬ ಕಲಾವಿದರು ಕಾವಾಲಾದೊಂದಿಗೆ ಊ ಅಂಟಾವಾ ಮಾವಾ ಹಾಡಿನ ಮ್ಯಾಷಪ್​ ಮಾಡಿದ್ದಾರೆ. ಎರಡು ಭಾರತೀಯ ಸಿನೆಮಾ ಹಾಡುಗಳಿಗೆ ಈ ಕೊರಿಯನ್​ ಕಲಾವಿದರು ನರ್ತಿಸಿದ ರೀತಿಯನ್ನು ನೆಟ್ಟಿಗರು ಬೆರಗಿನಿಂದ ನೋಡುತ್ತಿದ್ದಾರೆ.

ಇದನ್ನೂ ಓದಿ : Viral Video: ಸೂರತ್​ನ ಹುರಿದ ಕಡಲೆಕಾಳು ಫ್ಯಾಕ್ಟರಿ; ಕಾರ್ಮಿಕರ ಮೈಕೈ ತುಂಬಾ ಕೊಳಕು ಎಂದ ನೆಟ್ಟಿಗರು

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಕೆ-ಪಾಪ್ ಕಲಾವಿದ ಅವೂರಾ ಇನ್​ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಪೋಸ್ಟ್​ ಮಾಡಿದ್ದಾರೆ. ಜೈಲರ್​ನ ಕಾವಾಲಾ ಜೊತೆ ಪುಷ್ಪಾದ ಊ ಅಂಟಾವಾ ಮ್ಯಾಷಪ್ ನಿಜಕ್ಕೂ ಚೆನ್ನಾಗಿ ಸಿಂಕ್ ಆಗಿದೆ ಎನ್ನುವುದು ಅನೇಕರ ಅಭಿಪ್ರಾಯವಾಗಿದೆ. ಆ. 9 ರಂದು ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈತನಕ ಸುಮಾರು 6 ಲಕ್ಷ ಜನರು ನೋಡಿದ್ದಾರೆ. ಸುಮಾರು 97,000 ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral Video: ಮಹಾರಾಷ್ಟ್ರ; 8 ವರ್ಷದ ಬಾಲಕನ ವಿರುದ್ಧ ಅತ್ಯಾಚಾರ, ಅಟ್ರಾಸಿಟಿ, ಪೋಕ್ಸೋ ಪ್ರಕರಣ ದಾಖಲು; ನೆಟ್ಟಿಗರ ಆಕ್ರೋಶ

ಕೊರಿಯನ್ನರು ಭಾರತೀಯ ಹಾಡುಗಳಿಗೆ ನರ್ತಿಸುತ್ತಿರುವುದು ನಿಜಕ್ಕೂ ನನಗೆ ಹೆಮ್ಮೆ ಎನ್ನಿಸುತ್ತಿದೆ. ಭಾರತ ಮತ್ತು ಭಾರತೀಯ ಹಾಡುಗಳ ಬಗ್ಗೆ ಪ್ರೀತಿ ತೋರಿಸಿದ್ದಕ್ಕೆ ಧನ್ಯವಾದ ಎಂದಿದ್ದಾರೆ ಒಬ್ಬರು. ನಿಜಕ್ಕೂ ಇದು ಬಹಳ ಸುಂದರವಾಗಿ ಮೂಡಿ ಬಂದಿದೆ ಎಂದಿದ್ದಾರೆ ಇನ್ನೊಬ್ಬರು. ನಾನು ಈ ವಿಡಿಯೋ ಅನ್ನು 100ಕ್ಕೂ ಹೆಚ್ಚು ಬಾರಿ ನೋಡಿದ್ದೇನೆ ಎಂದಿದ್ದಾರೆ ಮತ್ತೊಬ್ಬರು.

ಕೇರಳದ ರೂಪದರ್ಶಿ ಪ್ರಿಯಾಂಕಾ ಶೆಣೈ ಮೆನನ್ ಈ ಹಾಡಿಗೆ ಹೆಜ್ಜೆ ಹಾಕಿದಾಗ

ಪ್ರಿಯಾಂಕಾರ ವಿಡಿಯೋ ಅನ್ನು ಈತನಕ 3 ಮಿಲಿಯನ್​ಗಿಂತಲೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಇದೇ ಹಾಡಿಗೆ ಸೋನಾ ಎಂಬ ನೃತ್ಯ ಕಲಾವಿದೆ ನರ್ತಿಸಿದ್ದನ್ನು ನೆಟ್ಟಿಗರು ಬಹುವಾಗಿ ಮೆಚ್ಚಿಕೊಂಡಿದ್ದರು. ತಮನ್ನಾಳ ನೆಕ್ಸ್ಟ್ ನೀವೇ ಎಂದು ಕೊಂಡಾಡಿದ್ದರು. ಅಂತೂ ತಮನ್ನಾಳ ಈ ನೃತ್ಯ ಶಿಲ್ಪಾ ರಾವ್​ ಹಾಡು ಜಗತ್ತಿನ ತುಂಬಾ ಕಿಚ್ಚು ಹಚ್ಚಿದೆ.

ಏನಂತೀರಿ ನೀವು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 2:31 pm, Fri, 18 August 23