Viral Video: ಮಹಾರಾಷ್ಟ್ರ; 8 ವರ್ಷದ ಬಾಲಕನ ವಿರುದ್ಧ ಅತ್ಯಾಚಾರ, ಅಟ್ರಾಸಿಟಿ, ಪೋಕ್ಸೋ ಪ್ರಕರಣ ದಾಖಲು; ನೆಟ್ಟಿಗರ ಆಕ್ರೋಶ

Atrocity Act: ತನ್ನ ವಿರುದ್ಧ ಅತ್ಯಾಚಾರ, ಅಟ್ರಾಸಿಟಿ, ಪೋಕ್ಸೋ ಪ್ರಕರಣಗಳನ್ನು ನೆರೆಮನೆಯ ಬೌದ್ಧ ಬೌದ್ಧ ಕುಟುಂಬವು ದಾಖಲಿಸಿದೆ ಎಂದು ಮಹಾರಾಷ್ಟ್ರದ 8 ವರ್ಷದ ಬಾಲಕ ಹೇಳುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸುಳ್ಳು ಪ್ರಕರಣ ದಾಖಲಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Viral Video: ಮಹಾರಾಷ್ಟ್ರ; 8 ವರ್ಷದ ಬಾಲಕನ ವಿರುದ್ಧ ಅತ್ಯಾಚಾರ, ಅಟ್ರಾಸಿಟಿ, ಪೋಕ್ಸೋ ಪ್ರಕರಣ ದಾಖಲು; ನೆಟ್ಟಿಗರ ಆಕ್ರೋಶ
8 ವರ್ಷದ ವೈಷ್ಣವ್​ ಸತ್ಯವಾನ್ ನಿಮ್ಸೆ
Follow us
ಶ್ರೀದೇವಿ ಕಳಸದ
|

Updated on:Aug 18, 2023 | 12:17 PM

Maharashtra: ‘ನನ್ನ ಹೆಸರು ವೈಷ್ಣವ್ ಸತ್ಯವಾನ್ ನಿಮ್ಸೆ. ವೈಷ್ಣವ್ ಸತ್ಯವಾನ್​ ಎಂಬ ಕೀರ್ತನಕಾರರ ಮಗನಾದ ನಾನು ಸಾಮಾನ್ಯ ವರ್ಗದಿಂದ ಬಂದವನು. ನನಗೀಗ ಎಂಟು ವರ್ಷ. ನನ್ನ ನೆರೆಮನೆಯ ಬೌದ್ಧ ಕುಟುಂಬವು ನನ್ನ ವಿರುದ್ಧ ಅತ್ಯಾಚಾರ ಪ್ರಕರಣ, ಅಟ್ರಾಸಿಟಿ ಪ್ರಕರಣ ಮತ್ತು ಪೋಕ್ಸೋ (Pocso Act) ಪ್ರಕರಣ ದಾಖಲಿಸಿದೆ. ನಾನು ಈಗ ಶಾಲೆ ತಪ್ಪಿಸಿ ಕೋರ್ಟ್​ಗೆ ಹಾಜರಾಗಬೇಕಿದೆ. ನನ್ನ ಶಾಲೆಯ ಶಿಕ್ಷಕರೇ, ಉಪಮುಖ್ಯಮಂತ್ರಿಗಳೇ, ಮುಖ್ಯಮಂತ್ರಿಗಳೇ ದಯವಿಟ್ಟು ಈ ವಿಷಯದ ಬಗ್ಗೆ ಗಮನ ಹರಿಸಿ, ನನ್ನ ತಿಳಿವಳಿಕೆಯನ್ನು ವಿಸ್ತರಿಸಿ’ ಈಗ ರೆಡ್ಡಿಟ್​ನಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಎಂಟು ವರ್ಷದ ಈ ಬಾಲಕ ಹೀಗೆ ಹಂಚಿಕೊಂಡಿದ್ದಾನೆ.

ಇದನ್ನೂ ಓದಿ : Viral Optical Illusion; ಇಷ್ಟೊತ್ತಾದರೂ ಏಳುತ್ತಲೇ ಇಲ್ಲ, ವಾಕಿಂಗ್​ಗೆ ತಡವಾಗುತ್ತಿದೆ ಇವರನ್ನು ಹುಡುಕಿ ಕಳಿಸುವಿರಾ?

ಈ ವಿಡಿಯೋ ನೋಡಿದ ನೆಟ್ಟಿಗರು ದಿಗ್ಭ್ರಾಂತರಾಗಿದ್ದಾರೆ. 8 ವರ್ಷದ ಮಗುವಿನ ವಿರುದ್ಧ ಇಂಥ ಪ್ರಕರಣಗಳನ್ನು ದಾಖಲಿಸಲು ಸಾಧ್ಯವೆ? ಇದರಿಂದ ಮಗುವಿನ ಮನಸ್ಸಿನ ಮೇಲೆ ಎಂಥ ಪರಿಣಾಮ ಉಂಟಾಗಬಹುದು? ಕಾನೂನಿನ ದುರುಪಯೋಗ ಪಡೆದುಕೊಳ್ಳುತ್ತಿರುವವರಿಗೆ ಧಿಕ್ಕಾರ ಎಂದಿದ್ದಾರೆ. ಈ ಮಗು ಶಾಲೆಯಲ್ಲಿರಲು ಅರ್ಹ ನ್ಯಾಯಾಲಯದಲ್ಲಿ ಅಲ್ಲ, 8 ವರ್ಷದ ಮಗುವಿನ ವಿರುದ್ಧ ಇಂಥ ಪ್ರಕರಣ? ದೇವರೇ, ಇನ್ನು ಮಾಧ್ಯಮ ಇದನ್ನು ಹೇಗೆ ನಿಭಾಯಿಸುತ್ತದೆಯೋ? ಎಂದು ಆತಂಕ ವ್ಯಕಪಡಿಸಿದ್ದಾರೆ ಒಬ್ಬರು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸತ್ಯವಾನ್​ ವೈಷ್ಣವ್​ ನಿಮ್ಸೆ ಮರಾಠಿಯಲ್ಲಿ ತನ್ನ ಸಂಕಷ್ಟ ಹಂಚಿಕೊಂಡ ವಿಡಿಯೋ

8yr old booked for rape and sc/st atrocity case by u/samsaracope in IndiaSpeaks

ಅರ್ಥವಾಯಿತು! ಇವರು, ಕಾನೂನನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಸುಳ್ಳು ಪ್ರಕರಣವನ್ನು ದಾಖಲಿಸಿದ ಆ ಕುಟುಂಬ ಸದಸ್ಯರನ್ನು ಜೈಲಿಗೆ ಕಳಿಸಿ ಬುದ್ಧಿ ಕಲಿಸಬೇಕು ಎಂದಿದ್ದಾರೆ ಮತ್ತೊಬ್ಬರು. ಮುಗ್ಧ ಮಗುವಿನ ಬಾಲ್ಯವನ್ನು ಹಾಳು ಮಾಡಿದ್ದಾರೆ, ನಾಚಿಕೆಯಾಗಬೇಕು ಅವರಿಗೆ ಎಂದಿದ್ದಾರೆ ಮತ್ತೊಬ್ಬರು. 8 ವರ್ಷದ ಮಗುವಿಗೆ ಲೈಂಗಿಕ ವಿಷಯಗಳ ಬಗ್ಗೆ ಏನು ತಿಳಿದಿರಲು ಸಾಧ್ಯ, ಇಂಥ ಸುಳ್ಳು ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾದರೂ ಹೇಗೆ? ಎಂದು ಕೇಳಿದ್ದಾರೆ ಮತ್ತೊಬ್ಬರು. ಇದೇನು ಹೊಸದಲ್ಲ, ಮಕ್ಕಳ ವಿರುದ್ಧ ಎಸ್‌ಸಿ/ಎಸ್‌ಟಿ ಅಟ್ರಾಸಿಟಿ ಕೇಸ್ ದಾಖಲಿಸಿದ ಬಗ್ಗೆ ಈ ಹಿಂದೆ ಕೂಡ ಓದಿದ್ದೇನೆ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : Viral Video: ಸೆಲ್ಫೀ ತೆಗೆದುಕೊಳ್ಳುತ್ತಿರುವ ಗಾಂಧೀಜಿ, ಭಗತ್, ಬೋಸ್​, ಝಾನ್ಸೀ, ಪಾಂಡೆ, ತಿಲಕ್

ದುರುಪಯೋಗಪಡಿಸಿಕೊಳ್ಳುವ ಇಂಥ ಕಾಯ್ದೆಗಳನ್ನೇ ತೆಗೆದುಹಾಕಿ, ಎಲ್ಲಾ ಜನರು ಒಂದೇ ಎನ್ನುವ ಭಾವನೆ ಮೂಡಿಸಿ ಎಂದಿದ್ದಾರೆ ಒಬ್ಬರು. ಮೀಸಲಾತಿ ಆರ್ಥಿಕತೆಗಿರಲಿ, ಜಾತಿ ಆಧಾರದ ಮೇಲೆ ಅಲ್ಲ ಎಂದಿದ್ದಾರೆ ಮತ್ತೊಬ್ಬರು. ಭಾರತದಲ್ಲಿ ಹಣಕಾಸಿನ ಜವಾಬ್ದಾರಿ ತಮಾಷೆಯ ವಿಷಯವಾಗಿದೆ. ನಾನು 5 ಲಕ್ಷಕ್ಕಿಂತಲೂ ಕಡಿಮೆ ಆದಾಯ ಹೊಂದಿದ್ದೇನೆ ಮತ್ತು ಕೋಟಿಗಟ್ಟಲೆ ಮೌಲ್ಯದ ಆಸ್ತಿ ಹೊಂದಿದ್ದೇನೆ ಎಂದು ಹೇಳಿಕೊಳ್ಳುವ ಅನೇಕ ಜನರನ್ನು ನಾನು ನೋಡಿದ್ದೇನೆ ಎಂದಿದ್ದಾರೆ ಇನ್ನೊಬ್ಬರು. ಅಪ್ರಾಪ್ತ ವಯಸ್ಕರ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಬಹುದೆ? ಹಾಗಿದ್ದರೆ ಹದಿಹರೆಯದ ಮಕ್ಕಳನ್ನೆಲ್ಲ ಬಂಧಿಸಬೇಕಾಗುತ್ತದೆ! ಎಂದಿದ್ದಾರೆ ಮತ್ತೊಬ್ಬರು.

ಈ ವಿಷಯವಾಗಿ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:06 pm, Fri, 18 August 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ