Viral Video: ವಾಟ್ ಝುಮ್ಕಾ: ರಣವೀರ್ ಸಿಂಗ್ ಮತ್ತು ಅಲಿಯಾ ಭಟ್ ಹಾಡಿಗೆ ವಧುವಿನ ಡ್ಯಾನ್ಸ್
Bollywood : ನಿನ್ನೆಯಷ್ಟೇ ನೆಟ್ಟಿಗರ ಪ್ರೀತಿಯ ದಾದೀಮಾ ಈ ಹಾಡಿಗೆ ಹೆಜ್ಜೆ ಹಾಕಿ ನೆಟ್ಟಿಗರ ಮನಸ್ಸನ್ನು ಅರಳಿಸಿದ್ದರು. ಇದೀಗ ವಧುವೊಬ್ಬಳು ತನ್ನ ಸ್ನೇಹಿತರೊಂದಿಗೆ ಹೆಜ್ಜೆ ಹಾಕಿದ್ದಾಳೆ. ವಾಟ್ ಝುಮ್ಕಾ ಹಾಡಿಗೆ ಅಲಿಯಾ ಭಟ್ ಮತ್ತು ರಣವೀರ್ ಸಿಂಗ್ ಅಭಿನಯಿಸಿದ್ದು ಇದೀಗ ಇದು ಟ್ರೆಂಡಿಂಗ್ನಲ್ಲಿದೆ. ನೆಟ್ಟಿಗರಂತೂ ಈ ನೃತ್ಯವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ.

Aliya Bhat: ರಣವೀರ್ ಸಿಂಗ್ ಮತ್ತು ಅಲಿಯಾ ಭಟ್ ನಟಿಸಿದ ವಾಟ್ ಝುಮ್ಕಾ ಹಾಡಿಗೆ ವಧುವೊಬ್ಬಳು ತನ್ನ ಗೆಳತಿಯರೊಂದಿಗೆ ನರ್ತಿಸಿದ ವಿಡಿಯೋ ಇದೀಗ ವೈರಲ್ ಆಗಿದೆ. ಇವರ ನೃತ್ಯಕೌಶಲವನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ (Rocky Aur Rani Ki Prem Kahani) ಚಿತ್ರದ ಈ ಗೀತೆ ಇತ್ತೀಚೆಗೆ ಟ್ರೆಂಡ್ ಆಗುತ್ತಿದೆ. ನಿನ್ನೆಯಷ್ಟೇ 65 ವರ್ಷದ ರವಿ ಬಾಲಾ ಶರ್ಮಾ ಇದೇ ಗೀತೆಗೆ ನರ್ತಿಸಿ ನೆಟ್ಟಿಗರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಇದೀಗ ಈ ರೀಲಿನಲ್ಲಿ ವಧು ಮತ್ತವಳ ಸ್ನೇಹಿತೆಯರು ಖುಷಿಯಿಂದ ನರ್ತಿಸಿರುವ ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಇದನ್ನೂ ಓದಿ : Viral Video: ಈ ಬಾರ್ಬಿ ಭಾರತದ ಬಡಕುಟುಂಬದಲ್ಲಿ ಜನಿಸಿದಾಕೆ, ಏನೀಗ? ಭಾವುಕರಾದ ನೆಟ್ಟಿಗರು
ಈ ವಿಡಿಯೋ ಅನ್ನು ಪೇಜ್ ಒನ್ ಕಹಾನಿ ಎಂಬ ಇನ್ಸ್ಟಾಗ್ರಾಂ ಪುಟವು ಹಂಚಿಕೊಂಡಿದೆ. ಆರು ದಿನಗಳ ಹಿಂದೆ ಹಂಚಿಕೊಂಡ ಈ ವಿಡಿಯೋ ಅನ್ನು ಲಕ್ಷ ಜನರು ನೋಡಿದ್ದಾರೆ. 8,000ಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.
ಇಲ್ಲಿದೆ ವಾಟ್ ಝುಮ್ಕಾ ಹಾಡಿಗೆ ವಧುವಿನ ನೃತ್ಯ
View this post on Instagram
ಈ ವಿಡಿಯೋ ನೋಡುತ್ತಿದ್ದರೆ, ನನ್ನ ಫ್ರೆಂಡ್ ಮದುವೆಯಲ್ಲಿ ನಾನೂ ಹೀಗೆಯೇ ಡ್ಯಾನ್ಸ್ ಮಾಡಬೇಕು ಎಂದೆನ್ನಿಸುತ್ತಿದೆ. ನಿಜಕ್ಕೂ ಈ ವಿಡಿಯೋ ಸ್ಫೂರ್ತಿ ಕೊಡುತ್ತಿದೆ ಎಂದಿದ್ದಾರೆ ಒಬ್ಬರು. ನನ್ನ ಮದುವೆಯ ಮೊದಲೇ ಈ ವಿಡಿಯೋ ನೋಡಿದ್ದರೆ ನಾನೂ ಹೀಗೆ ನರ್ತಿಸಬಹುದಿತ್ತು ಎಂದಿದ್ದಾರೆ ಇನ್ನೊಬ್ಬರು.
ಇದನ್ನೂ ಓದಿ : Viral Video: ಜೈಲರ್; ಕೊರಿಯನ್ ಕಾವಾಲಾ ರೀಲ್ 15 ಮಿಲಿಯನ್ ವೀಕ್ಷಣೆ
ಸದ್ಯಕ್ಕೆ ರಜಿನಿಕಾಂತ್ ಮತ್ತು ತಮನ್ನಾ ಅಭಿನಯದ ಜೈಲರ್ ಸಿನೆಮಾದ ಕಾವಾಲಾ ಮತ್ತು ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿಯ ವಾಟ್ ಝುಮ್ಕಾ ಹಾಡುಗಳು ಟ್ರೆಂಡಿಂಗ್ನಲ್ಲಿವೆ. ಯಾರೆಲ್ಲ ಹೇಗೆ ಈ ಹಾಡಿಗೆ ಹೆಜ್ಜೆ ಹಾಕುತ್ತಾರೆ ಎನ್ನುವುದನ್ನು ನೆಟ್ಟಿಗರು ಕುತೂಹಲದಿಂದ ಗಮನಿಸುತ್ತಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ