Viral Video: ಸೆಲ್ಫೀ ತೆಗೆದುಕೊಳ್ಳುತ್ತಿರುವ ಗಾಂಧೀಜಿ, ಭಗತ್, ಬೋಸ್​, ಝಾನ್ಸೀ, ಪಾಂಡೆ, ತಿಲಕ್

Artificial Intelligence : ಟ್ರೆಂಡ್ ಮತ್ತು ತಂತ್ರಜ್ಞಾನ ಎಂಬ ನೆಪದಲ್ಲಿ ಮನಸಿಗೆ ಬಂದ ಕಲ್ಪನೆಗಳನ್ನೆಲ್ಲಾ ಹೀಗೆ ಹರಿಬಿಟ್ಟರೆ ಹೇಗೆ? ಈ ಡಿಜಿಟಲ್​ ಫುಟ್​ಪ್ರಿಂಟ್​ ಹೀಗೇ ಉಳಿಯುತ್ತವೆ. ಮುಂದಿನ ಪೀಳಿಗೆ ಇದೆಲ್ಲವನ್ನೂ ನೋಡಿ ಇದೇ ಇತಿಹಾಸವೆಂದು ತಪ್ಪಾಗಿ ಕಲ್ಪಿಸಿಕೊಳ್ಳುತ್ತದೆ. ವಾಸ್ತವದ ಬಗ್ಗೆ ಸ್ವಲ್ಪ ಯೋಚಿಸಿ ನಿಮ್ಮ ನಿಮ್ಮ ಕೆಲಸವನ್ನು ಘನತೆಯಿಂದ ಮಾಡಿ ಎಂದು ನೆಟ್ಟಿಗರು ಎಐ ಕಲಾವಿದರಿಗೆ ಬುದ್ಧಿ ಹೇಳಿದ್ದಾರೆ.

Viral Video: ಸೆಲ್ಫೀ ತೆಗೆದುಕೊಳ್ಳುತ್ತಿರುವ ಗಾಂಧೀಜಿ, ಭಗತ್, ಬೋಸ್​, ಝಾನ್ಸೀ, ಪಾಂಡೆ, ತಿಲಕ್
ಎಐ ಕಲಾವಿದರ ಕಲ್ಪನೆಯಲ್ಲಿ ರೂಪುಗೊಂಡ ಗಾಂಧೀಜಿ ಮತ್ತು ಝಾನ್ಸೀ ರಾಣಿ ಲಕ್ಷ್ಮೀಬಾಯಿ
Follow us
ಶ್ರೀದೇವಿ ಕಳಸದ
|

Updated on: Aug 17, 2023 | 4:59 PM

Freedom Fighters: 77ನೇ ಸ್ವಾತಂತ್ರ್ಯೋತ್ಸವವನ್ನು ಎಐ ಕಲಾವಿದರು ತಮ್ಮದೇ ಆದ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆಚರಿಸಿ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ ಎಂದರೆ ಬಾರ್ಬಿಯ ಗುಲಾಬಿ ಜ್ವರದಿಂದ ಇವರು ಹೊರಬಂದಿರುವಂತೆ ಕಾಣುತ್ತಿದೆ. ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ಸೆಲ್ಫೀ ತೆಗೆದುಕೊಳ್ಳುವುದನ್ನು ಈ ಕಲಾವಿದರು ಕಲ್ಪಿಸಿಕೊಂಡಿದ್ದಾರೆ. ಎಐ (AI) ಇವರ ಕಲ್ಪನೆಯನ್ನು ಸಮರ್ಥವಾಗಿ ಅಭಿವ್ಯಕ್ತಗೊಳಿಸಲು ಸಹಾಯ ಮಾಡಿದೆ. ಮಹಾತ್ಮಾ ಗಾಂಧೀ (Mahatma Gandhiji) ಭಗತ್ ಸಿಂಗ್​, ಸುಭಾಷ್​ ಚಂದ್ರ ಬೋಸ್​, ಝಾನ್ಸೀರಾಣಿ ಲಕ್ಷ್ಮೀಬಾಯಿ, ಮಂಗಲ್ ಪಾಂಡೆ, ಬಾಲಗಂಗಾಧರ ತಿಲಕ್ ಮುಂತಾದವರನ್ನು ಈ ಎಐ ಸರಣಿಯಲ್ಲಿ ನೋಡಬಹುದಾಗಿದೆ.

ಇದನ್ನೂ ಓದಿ : Viral: ದೆಹಲಿಯ ಗ್ರೇಟರ್ ಕೈಲಾಶ್​ನಲ್ಲಿ ಬೆಡ್ ಜೊತೆ ಟಾಯ್ಲೆಟ್ ಬಾಡಿಗೆಗೆ ಲಭ್ಯ!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

AI ಕಲಾವಿದ ದಿವ್ಯಾಂಶ ಸೋನಿ ಈ ಚಿತ್ರಗಳನ್ನು ಸೃಷ್ಟಿಸಿದ್ದಾರೆ. ಹೈಪರ್​-ರಿಯಲಿಸ್ಟಿಕ್ ಕಲಾಕೃತಿಗಳನ್ನು ಇನ್​ಸ್ಟಾಗ್ರಾಂನ ಕೆಲವರು ಶ್ಲಾಘಿಸಿದ್ದಾರೆ. ಇನ್ನೂ ಕೆಲವರು ತಕರಾರು ತೆಗೆದಿದ್ದಾರೆ. ಆಸ್ಕರ್ ಐಸಾಕ್​ನ ಮಂಗಲ್ ಪಾಂಡೆ ಎಂದು ಒಬ್ಬರು ಹೇಳಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರು Z ಜನರೇಷನ್​ನವರಾಗಿದ್ದರೆ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಸೆಲ್ಫಿಗಳನ್ನು ಈಗಾಗಲೇ ಪೋಸ್ಟ್​ ಮಾಡಬೇಕಿತ್ತಲ್ಲವೆ? ಎಂದು ಕೇಳಿದ್ದಾರೆ ಇನ್ನೊಬ್ಬರು.

ಸೆಲ್ಫಿ ತೆಗೆದುಕೊಳ್ಳುತ್ತಿರುವ ಸ್ವಾತಂತ್ರ್ಯಯೋಧರನ್ನು ನೋಡಿ

View this post on Instagram

A post shared by IFP (@ifp.world)

ಮುಸ್ಲಿಮರು ಸಿಖ್ಖರು ಮತ್ತು ಕ್ರಿಶ್ಚಿಯನ್ನರು ಸ್ವಾತಂತ್ರ್ಯ ಚಳವಳಿಯ ಪ್ರಮುಖ ಭಾಗವಾಗಿದ್ದರು ಎಂಬುದನ್ನು ಭಾರತೀಯರು ಏಕೆ ಮರೆಯುತ್ತಾರೆ? ಮುಹಮ್ಮದ್ ಅಲಿ ಜಿನ್ನಾ, ಲಿಯಾಕತ್ ಅಲಿ ಖಾನ್, ಫಾತಿಮಾ ಜಿನ್ನಾ,  ಅಲ್ಲಮಾ ಇಕ್ಬಾಲ್ ಇವರೆಲ್ಲ ನೆನಪಾಗುವುದಿಲ್ಲವ? ನೀವು ಮುಸ್ಲಿಂ ವಿರೋಧಿತನವನ್ನೇ ಉಸಿರಾಡುತ್ತಿದ್ದೀರಿ ಎಂದಿದ್ದಾರೆ ಒಬ್ಬರು. ಭಗತ್​ ಸಿಂಗ್​, ತಿಲಕ್​ ಯಾಕೋ ಬೇರೆ ಥರ ಕಾಣುತ್ತಿದ್ದಾರೆ ಎನ್ನಿಸುತ್ತಿದ್ದಾರೆ ಕೆಲವರು.

ಇದನ್ನೂ ಓದಿ : Viral Video: ಕಾವಾಲಾ ಕಾವು; ರಜಿನಿ ಅಭಿಮಾನಿ ಜಪಾನ್ ರಾಯಭಾರಿ ಯೂಟ್ಯೂಬರ್​ನೊಂದಿಗೆ ಡ್ಯಾನ್ಸ್

ಸದ್ಯ ಗಾಂಧೀಜಿ ಕೈಯಲ್ಲಿ ಸೆಲ್ಫಿ ಸ್ಟಿಕ್​ ಕೊಟ್ಟಿಲ್ಲ! ಎಂದಿದ್ದಾರೆ ಕೆಲವರು. ಇಂಥ ನಿಮ್ಮ ಕಲ್ಪನೆಗಳನ್ನು ಪೋಸ್ಟ್ ಮಾಡುವುದನ್ನು ನಿಲ್ಲಿಸಿ. ಮುಂದಿನ ಪೀಳಿಗೆಗೆ ಇದೆಲ್ಲವೂ ತಪ್ಪು ಸಂದೇಶವನ್ನು ಕೊಡುತ್ತದೆ, ನಿಮ್ಮ ನಿಮ್ಮ ಕಾರ್ಯಕ್ಷೇತ್ರಗಳಲ್ಲಿ ಘನತೆಯಿಂದ ತೊಡಗಿಕೊಳ್ಳಿ ಎಂದಿದ್ದಾರೆ ಇನ್ನೊಬ್ಬರು. ಅನವಶ್ಯಕವಾಗಿ ಇದೆಲ್ಲವನ್ನೂ ಚಿತ್ರಿಸಿದ್ದೀರಿ, ಇದು ಸರಿಯಲ್ಲ ಎಂದಿದ್ದಾರೆ ಅನೇಕರು.

ಇದನ್ನು ನೋಡಿದ, ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್