Viral: Barbie; ‘ಅಪ್ಪಾ, ಬಾರ್ಬಿಯಂತೆ ಅಲಂಕರಿಸಿಕೋ’ ಮಗಳ ಸವಾಲಿಗೆ ಸೈ ಎಂದ ಅಪ್ಪ

Father Daughter : ನಿಮ್ಮ ಮಕ್ಕಳು ಹೀಗೆ ಹೇಳಿದರೆ ಏನು ಮಾಡುತ್ತೀರಿ? ಬಹಳವೆಂದರೆ ಗುಲಾಬಿ ಶರ್ಟ್​ ತೊಟ್ಟುಕೊಳ್ಳುತ್ತೀರಿ ತಾನೆ? ಆದರೆ ಈ ಅಪ್ಪಮಹಾಶಯ ಮಾತ್ರ ಮಗಳ ಆಸೆಯನ್ನು ಈಡೇರಿಸಲು ಬಾರ್ಬಿಯಂತೆ ಅಲಂಕರಿಸಿಕೊಂಡು ಬಾರ್ಬಿ ಸಿನೆಮಾ ನೋಡಲು ಥಿಯೇಟರ್​ಗೆ ಮಗಳನ್ನು ಕರೆದೊಯ್ದಿದ್ದಾರೆ!

Viral: Barbie; 'ಅಪ್ಪಾ, ಬಾರ್ಬಿಯಂತೆ ಅಲಂಕರಿಸಿಕೋ' ಮಗಳ ಸವಾಲಿಗೆ ಸೈ ಎಂದ ಅಪ್ಪ
ಮಗಳಿಗಾಗಿ ಬಾರ್ಬಿಯಂತೆ ಅಲಂಕರಿಸಿಕೊಂಡ ತಂದೆ
Follow us
ಶ್ರೀದೇವಿ ಕಳಸದ
|

Updated on:Aug 11, 2023 | 12:30 PM

Barbie : ಸುಮಾರು ಒಂದು ತಿಂಗಳಿಂದ ಗುಲಾಬಿ ಜ್ವರದ (Pink) ಕಥೆಗಳನ್ನು ಕೇಳುತ್ತಲೇ ಇದ್ದೀರಿ. ಈ ಕಥೆಗಳ ಪಟ್ಟಿಗೆ ಇದೀಗ ವೈರಲ್ ಆಗಿರುವ ಇದನ್ನೂ ಸೇರಿಸಿಕೊಳ್ಳಿ. ಈ ಪೋಸ್ಟ್​ನಲ್ಲಿ ಮಗಳೊಬ್ಬಳು ತನ್ನ ಅಪ್ಪನಿಗೆ ಈ ಗುಲಾಬಿ ಜ್ವರಕ್ಕೆ ತಳ್ಳಿದ ಪುರಾವೆ ಸಿಕ್ಕಿದೆ. ‘ಅಪ್ಪಾ ನನ್ನನ್ನು ಬಾರ್ಬಿ ಸಿನೆಮಾದ ಮೊದಲ ಪ್ರದರ್ಶನಕ್ಕೆ ಕರೆದೊಯ್ಯು ಎಂದು ಮಗಳು ಹೇಳಿದ್ದಾಳೆ. ಆದರೆ ವಿಷಯ ಇದಲ್ಲ. ಈ ಸಿನೆಮಾಗೆ ಹೋಗುವಾಗ ನೀನೂ ಗುಲಾಬಿ ಬಣ್ಣದ ಬಟ್ಟೆಯನ್ನೇ ಧರಿಸಬೇಕು ಎಂದು ಸವಾಲನ್ನು ಹಾಕಿದ್ದಾಳೆ. ಅಪ್ಪ ಒಂದಿನಿತು ಮುಜುಗರಕ್ಕೆ ಒಳಗಾಗದೆ ಮಗಳ ಮಾತನ್ನು ಗುಲಾಬಿಶಃ ಪಾಲಿಸಿದ್ದಾನೆ!

ಎಲಿಝರ್ ರೋಡ್ರಿಗಸ್ ಹೆರ್ನಾಂಡೇಝ್ ಎನ್ನುವವರು ತಮ್ಮ ಮಗಳಿಗಾಗಿ ಗುಲಾಬಿಯಲ್ಲಿ ತಾವು ಅರಳಿ ನಿಂತ ಫೋಟೋಗಳನ್ನು ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಈತನಕ ಈ ಪೋಸ್ಟ್​ ಅನ್ನು 2,000 ಜನರು ಹಂಚಿಕೊಂಡಿದ್ದಾರೆ. 1,500 ಜನರು ಲೈಕ್ ಮಾಡಿದ್ದಾರೆ. 1,100 ಜನರು ಪ್ರತಿಕ್ರಿಯಿಸಿದ್ದಾರೆ. ಈ ಪೋಸ್ಟ್ ಸ್ಪ್ಯಾನಿಷ್ ಮೂಲದಲ್ಲಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇವರು ಜಗತ್ತಿನ ಒಳ್ಳೆಯ ತಂದೆಯರ ಸಾಲಿನಲ್ಲಿ ನಿಲ್ಲುತ್ತಾರೆ ಎಂದು ಕೆಲವರು ಹೇಳಿದ್ದಾರೆ. ನಿಮ್ಮನ್ನು ನಿಮ್ಮ ಕುಟುಂಬವನ್ನು ದೇವರು ಆಶೀರ್ವದಿಸಲಿ ಎಂದು ಮತ್ತೊಂದಿಷ್ಟು ಜನ ಹೇಳಿದ್ದಾರೆ. ನಿಮ್ಮ ಮಗಳ ಪ್ರೀತಿ ಮತ್ತು ಖುಷಿಯ ಮುಂದೆ ಯಾವುದೂ ದೊಡ್ಡದಲ್ಲ ಎಂದಿದ್ದಾರೆ ಒಬ್ಬರು. ನಾನು ದೊಡ್ಡವನಾಗಿ ನನಗೂ ಒಬ್ಬಳು ಮಗ ಹುಟ್ಟಿದಾಗ ನಿಮ್ಮಂತೆಯೇ ಇರಲು ಬಯಸುತ್ತೇನೆ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಬೆಂಗಳೂರು; ಬೆಕ್ಕೇ ಬೆಕ್ಕೇ ಮುದ್ದಿನ ಮೂಟೆ ಅಮ್ಮನ ಬೆನ್ನೇರಿ ಹೊರಟಿಹೆ ಎಲ್ಲಿಗೆ?

ನನ್ನ ತಂದೆಯೂ ಹೀಗೆಯೇ ಇದ್ದರು, ಇತ್ತೀಚೆಗೆ ತೀರಿಕೊಂಡರು. ನಾನು ಎಷ್ಟು ದೊಡ್ಡವಳಾದರೂ ನಾನು ಹೇಳಿದ ಯಾವುದನ್ನೂ ಅವರು ಮಾಡದೇ ಇರುತ್ತಿರಲಿಲ್ಲ ಎಂದಿದ್ದಾರೆ ಮಗದೊಬ್ಬರು. ನಿಮ್ಮಂಥ ತಂದೆಯನ್ನು ಪಡೆದ ಮಗಳು ಧನ್ಯ ಎಂದಿದ್ದಾರೆ ಇನ್ನೊಬ್ಬರು. ಅರೆ ನೀವು ಬರೀ ಅಲಂಕರಿಸಿಕೊಂಡಿಲ್ಲ ಸಿನೆಮಾಗೂ ಇದೇ ವೇಷದಲ್ಲಿಯೇ ಹೋಗಿದ್ದೀರಿ, ಗ್ರೇಟ್​! ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಎಮಿಲಿಯಾನಾ ಹಾಡಿಗೆ ಸುನಿಧಿ ಚೌಹಾನ್​ ಡ್ಯಾನ್ಸ್​; ಕ್ಯಾ ಬಾತ್ ಹೈ ಎಂದ ನೆಟ್ಟಿಗರು

ಹೀಗೆ ಮಕ್ಕಳ ಖುಷಿಯನ್ನು ಕಾಯುವ ಅಪ್ಪ ಅಮ್ಮಂದಿರು ಎಲ್ಲ ಮಕ್ಕಳಿಗೂ ಸಿಗಲಿ ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮಕ್ಕಳ ಮುಗ್ಧತೆ, ಖುಷಿಗೆ ಅನುಸಾರವಾಗಿ ತಂದೆತಾಯಿಯರು ನಡೆದುಕೊಳ್ಳಬೇಕು, ಅಂದಾಗಲೇ ಕುಟುಂಬ ಸುಖಿಯಾಗಿರುತ್ತದೆ ಎಂದಿದ್ದಾರೆ ಮತ್ತೊಬ್ಬರು.

ಇದನ್ನು ಓದಿದ ನೀವೇನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​​​ಗಾಗಿ ಕ್ಲಿಕ್ ಮಾಡಿ

Published On - 12:29 pm, Fri, 11 August 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ