Viral: ಹೈದರಾಬಾದ; ನನಗೆ ಹಸಿವಾಗಿದೆ ಎಂದು ಮೆಟ್ರೋನಲ್ಲಿ ಆಕೆ ಹೇಳಿದಳು, ಮುಂದೇನಾಯಿತು?

Metro : ಬಸ್ಸಿನಲ್ಲಾಗಲಿ, ರೈಲಿನಲ್ಲಾಗಲಿ, ವಿಮಾನದಲ್ಲಾಗಲಿ ಹಸಿವಾದರೆ ನೀಗಿಸಿಕೊಳ್ಳಬಹುದು. ಆದರೆ ಮೆಟ್ರೋದಲ್ಲಿ? ಹೈದರಾಬಾದಿನ ಮಹಿಳೆಯೊಬ್ಬರಿಗೆ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾಗ ಹಸಿವಾಗಿದೆ. ಅದನ್ನು ಅವರು ತಮ್ಮ ಸ್ನೇಹಿತರ ಬಳಿ ಹಂಚಿಕೊಂಡಿದ್ದಾರೆ. ಇದನ್ನು ಗಮನಿಸಿದ ಪಕ್ಕದ ಮಹಿಳೆ ಏನು ಮಾಡಿದರು ಎನ್ನುವುದು ಇಲ್ಲಿದೆ.

Viral: ಹೈದರಾಬಾದ; ನನಗೆ ಹಸಿವಾಗಿದೆ ಎಂದು ಮೆಟ್ರೋನಲ್ಲಿ ಆಕೆ ಹೇಳಿದಳು, ಮುಂದೇನಾಯಿತು?
ಪ್ರಾತಿನಿಧಿಕ ಚಿತ್ರ
Follow us
ಶ್ರೀದೇವಿ ಕಳಸದ
|

Updated on:Aug 11, 2023 | 3:03 PM

Hyderabad : ‘ಆ ದಿನ ನಾನು ರಾಯದುರ್ಗದಿಂದ ಮೆಟ್ರೋ ರೈಲಿನಲ್ಲಿ ಮನೆಗೆ ಮರಳುತ್ತಿದ್ದೆ. ನನಗೆ ತುಂಬಾ ಹಸಿವಾಗಿತ್ತು. ಆಗ ನನ್ನ ಸ್ನೇಹಿತರ ಬಳಿ ಈ ವಿಷಯವನ್ನು ಹಂಚಿಕೊಂಡೆ. ಅಲ್ಲಿದ್ದ ಯಾರೋ ಒಬ್ಬರ ಬ್ಯಾಗಿನಿಂದ ಜ್ಯೂಸ್​ ಬಾಟಲಿ (Juice Bottle) ಕಂಡಿತು. ಅದನ್ನು ಸ್ನೇಹಿತರಿಗೆ ತೋರಿಸಿ, ಅದನ್ನು ಕದ್ದರೆ ಹೇಗೆ ಎಂದು ತಮಾಷೆ ಮಾಡಿದೆ. ಸದ್ಯ ಅವರು ನನ್ನನ್ನು ತಿರುಗಿ ನೋಡದ ಕಾರಣ ನಾನು ಬಚಾವಾದೆ. ಮುಂದೆ ಒಂದು ನಿಮಿಷದ ನಂತರ ನನ್ನ ಪಕ್ಕದಲ್ಲಿ ಕುಳಿತಿದ್ದ ಮಹಿಳೆ, ನಿಮಗೆ ಹಸಿವಾಗಿದೆಯೇ? ಎಂದು ಕೇಳಿದರು. ಅಚ್ಚರಿ ಎನ್ನಿಸಿದರೂ ಹೌದು ಎಂದೆ. ಆಗ ಆಕೆ ತನ್ನ ಊಟದ ಡಬ್ಬಿಯನ್ನು ಹೊರತೆಗೆದು ಇದರಲ್ಲಿ ಪುಳಿಯೋಗರೆ ಇದೆ, ಇನ್ನೂ ಚೆನ್ನಾಗಿದೆ ಎಂದರು.’

ಇದನ್ನೂ ಓದಿ : Viral Video: ದೆಹಲಿ; ಪೊಲೀಸರಿಗೆ ಕಪಾಳಮೋಕ್ಷ ಮಾಡಿದ ಮಹಿಳೆ; ಕ್ರಮ ಕೈಗೊಳ್ಳಿ ಎಂದ ನೆಟ್ಟಿಗರು 

‘ಹಾಗೆ ಹೇಳುತ್ತಲೇ ಇನ್ನೊಂದು ಡಬ್ಬಿಯನ್ನು ಹೊರತೆಗೆದು ದಾಳಿಂಬೆಯನ್ನು ನನ್ನ ಮುಂದೆ ಹಿಡಿದರು. ನಾನು ಹಿಂಜರಿಯುತ್ತಲೇ ಆಕೆಯ ಡಬ್ಬಿಯಲ್ಲಿದ್ದ ದಾಳಿಂಬೆಯನ್ನು ತೆಗೆದುಕೊಂಡು ತಿಂದೆ. ಇನ್ನೂ ಇದ್ದ ದಾಳಿಂಬೆಯ ಡಬ್ಬಿಯನ್ನು ನನಗೇ ಇಟ್ಟುಕೊಳ್ಳಲು ಕೊಟ್ಟರು. ಆದರೆ ನಾನು ಅವರಿಗೆ ಧನ್ಯವಾದ ಹೇಳಿ ಡಬ್ಬಿಯನ್ನು ಹಿಂದಿರುಗಿಸಿದೆ. ಆಕೆಯ ವಿನಮ್ರ ಮತ್ತು ಪ್ರೀತಿಯ ನಡೆ ನನ್ನನ್ನು ಬಹಳ ಪ್ರಭಾವಿಸಿತು. ನಾವೆಲ್ಲರೂ ನಮ್ಮ ನಮ್ಮ ಕರ್ತವ್ಯಗಳನ್ನು ಮಾಡಿದರೆ ಸಹಜವಾಗಿ ಮಾನವೀಯತೆ ನಮ್ಮನ್ನು ಬೆಸೆಯುತ್ತದೆ ಎನ್ನಿಸಿತು.’

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

Just something good in metro by u/Prudent-Action3511 in hyderabad

ಈ ಪೋಸ್ಟ್​ ಅನ್ನು ಸುಮಾರು 16 ಗಂಟೆಗಳ ಹಿಂದೆ ರೆಡ್ಡಿಟ್​ನಲ್ಲಿ ಮಾಡಲಾಗಿದೆ. ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗಿನ ಅನುಭವವೊಂದನ್ನು ಹೈದರಾಬಾದ್​ನ ಪ್ರಯಾಣಿಕರೊಬ್ಬರು ಹಂಚಿಕೊಂಡಿದ್ದಾರೆ. ಸುಮಾರು 400 ಜನರು ಇದನ್ನು ಲೈಕ್ ಮಾಡಿದ್ದಾರೆ. ನೂರಾರು ಜನರು ಈ ಪೋಸ್ಟ್​ಗೆ ಪ್ರತಿಕ್ರಿಯಿಸಿದ್ದಾರೆ. ಮಾನವೀಯತೆ ಇನ್ನೂ ಜೀವಂತವಾಗಿದೆ ಎಂದು ಶ್ಲಾಘಿಸಿದ್ದಾರೆ.

ಇದನ್ನೂ ಓದಿ : Viral: Barbie; ‘ಅಪ್ಪಾ, ಬಾರ್ಬಿಯಂತೆ ಅಲಂಕರಿಸಿಕೋ’ ಮಗಳ ಸವಾಲಿಗೆ ಸೈ ಎಂದ ಅಪ್ಪ

ಇಂಥ ಜನರು ಬೇಕು ಎಂದು ಒಬ್ಬರು ಹೇಳಿದ್ದಾರೆ. ಇದು ತುಂಬಾ ಮಧುರವಾದ ಅನುಭವ ಎಂದು ಮತ್ತೊಬ್ಬರು ಹೇಳಿದ್ದಾರೆ. ಮೆಟ್ರೋದಲ್ಲಿ ತಿನ್ನುವುದೆ? ಎಂದು ಇನ್ನೊಬ್ಬರು ತಮ್ಮ ಅಸಮ್ಮತಿ ಸೂಚಿಸಿದ್ದಾರೆ. ಹಸಿವಿಗೆ ಯಾರಪ್ಪಣೆ? ತಲೆತಿರುಗಿ ಬಿದ್ದಿದ್ದರೆ ನೀವು ಹೋಗಿ ರಕ್ಷಿಸುತ್ತಿದ್ದಿರೇ? ಎಂದು ಪ್ರತಿಯಾಗಿ ಕೇಳಿದ್ದಾರೆ ಮತ್ತೊಬ್ಬರು.

ಈ ಘಟನೆಯನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 3:01 pm, Fri, 11 August 23

‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು