AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಜಪಾನ್; ವಿಶ್ವದ ಅತ್ಯಂತ ದುಬಾರಿ ಖಾದ್ಯ ಸುಶಿಯ ಬೆಲೆ ರೂ 2 ಲಕ್ಷ; ಏನೇನೆಲ್ಲಾ ಇದೆ ಇದರಲ್ಲಿ?

Sushi : ಒಂದು ದೋಸೆಗೆ ಅಮೆರಿಕದಲ್ಲಿ ನಾಲ್ಕು ಸಾವಿರವಂತೆ! ಎಂದು ಆಗಾಗ ಮಾತನಾಡಿಕೊಳ್ಳುತ್ತಿರುತ್ತೇವೆ. ಆದರೆ ಜಪಾನಿನ ಖಾದ್ಯ ಸುಶಿಗೆ ಕೇವಲ ರೂ. 2 ಲಕ್ಷ. ಚಿನ್ನ ಬೆಳ್ಳಿ ವಜ್ರ ವೈಢೂರ್ಯ ಹಾಕಿ ತಯಾರಿಸಿದ್ದಾರೋ ಏನೊ? ಅಂತ ಯಾರಿಗೂ ಅನುಮಾನ ಬರುವುದು ಸಹಜ. ಹಾಗಿದ್ದರೆ ಓದಿ, ವಿಶ್ವದಾಖಲೆ ಬರೆದಿರುವ ಈ ಖಾದ್ಯದ ವೈಶಿಷ್ಯ.

Viral: ಜಪಾನ್; ವಿಶ್ವದ ಅತ್ಯಂತ ದುಬಾರಿ ಖಾದ್ಯ ಸುಶಿಯ ಬೆಲೆ ರೂ 2 ಲಕ್ಷ; ಏನೇನೆಲ್ಲಾ ಇದೆ ಇದರಲ್ಲಿ?
ರೂ. 2 ಲಕ್ಷ ಬೆಲೆಬಾಳುವ ಜಪಾನೀ ಖಾದ್ಯ ಸುಶಿ
Follow us
ಶ್ರೀದೇವಿ ಕಳಸದ
|

Updated on: Aug 11, 2023 | 5:02 PM

Japan : ಸುಶಿ (Sushi) ಜಪಾನಿನಲ್ಲಿ ತಯಾರಿಸಲಾಗುವ ಪ್ರಸಿದ್ಧ ಖಾದ್ಯ. ಇದೀಗ ಇದು ಭಾರೀ ಸುದ್ದಿಯಲ್ಲಿದೆ. ಇಲ್ಲಿಯ ಒಸಾಕಾದ ರೆಸ್ಟೋರೆಂಟ್​ನಲ್ಲಿ ವಿಶ್ವದ ಅತ್ಯಂತ ದುಬಾರಿ ಸುಶಿ ತಯಾರಿಸಲಾಗಿದೆ. ಇದನ್ನು ತಯಾರಿಸಲು ಬೇಕಾದಂಥ ಕೆಲ ಪದಾರ್ಥಗಳನ್ನು ಹೊರದೇಶಗಳಿಂದಲೂ ಆಮದು ಮಾಡಿಕೊಳ್ಳಲಾಗಿದೆ. ಹಾಗಿದ್ದರೆ ಇದರ ಬೆಲೆ ಎಷ್ಟಿರಬಹುದು ಊಹಿಸಿ. ಈ ಬೆಲೆಯಲ್ಲಿ ನೀವು ಎರಡು ದ್ವಿಚಕ್ರವಾಹನಗಳನ್ನು ಖರೀದಿಸಬಹುದು ಅಥವಾ ಚಿನ್ನವನ್ನೂ ಖರೀದಿಸಬಹುದು. ಈಗ ಕೇಳಿ, ಒಂದು ಪ್ಲೇಟ್​ ಸುಶಿಯ ಬೆಲೆ ಬರೋಬ್ಬರಿ ರೂ. 2 ಲಕ್ಷ! ಅಬ್ಬಾ, ಅಚ್ಚರಿಯಾಗುತ್ತಿದೆಯಾ? ಹಾಗಿದ್ದರೆ ಇಷ್ಟು ಬೆಲೆ ಹೊಂದಿರುವ ಈ ಸುಶಿಯ ವೈಶಿಷ್ಟ್ಯ ಏನೆಂದು  ತಿಳಿದುಕೊಳ್ಳಬೇಕೆಂಬ ಕುತೂಹಲ ಉಂಟಾಗುತ್ತಿದೆಯಾ?

ಇದನ್ನೂ ಓದಿ : Viral: ಹೈದರಾಬಾದ; ನನಗೆ ಹಸಿವಾಗಿದೆ ಎಂದು ಮೆಟ್ರೋನಲ್ಲಿ ಆಕೆ ಹೇಳಿದಳು, ಮುಂದೇನಾಯಿತು?

ಜಪಾನ್‌ನ ಒಸಾಕಾದಲ್ಲಿರುವ ಸುಶಿ ಕಿರಿಮೋನ್ ಎಂಬ ರೆಸ್ಟೊರೆಂಟ್ ‘ಕಿವಾಮಿ ಒಮಾಕಾಸೆ’ ಎಂಬ ಖಾದ್ಯವನ್ನು  ತಯಾರಿಸಿದೆ. ಇದು ಸುಶಿಯ 20 ತುಣುಕುಗಳನ್ನು ಒಳಗೊಂಡಿದೆ. ಗಿನ್ನೀಸ್​ ವಿಶ್ವದಾಖಲೆಯ ಪ್ರಕಾರ, ಸುಶಿಯನ್ನು ಸಾಂಪ್ರದಾಯಿಕ ಪಾಕಪದ್ಧತಿಯಲ್ಲಿ ತಯಾರಿಸಲಾಗಿದೆ. ಜಪಾನ್ ಒಳಗೊಂಡಂತೆ ಇತರೇ ದೇಶಗಳ ಪದಾರ್ಥಗಳನ್ನು ಇದಕ್ಕೆ ಬಳಸಲಾಗಿದೆ. ನಿಗಿರಿ, ಸಾಶಿಮಿ ಮತ್ತು ಮಕಿ ಎಂಬ ಖಾದ್ಯಗಳನ್ನು ಇದು ಒಳಗೊಂಡಿದ್ದು ಅಂತಿಮ ಹಂತದಲ್ಲಿ ಸುಶಿಯ ಮೇಲೆ ಚಿನ್ನದ ರೇಕುಗಳನ್ನು ಸಿಂಪಡಿಲಾಗುತ್ತದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸುಶಿಗಾಗಿ ಮ್ಯಾಟ್ಸುಟೇಕ್​ ಅಣಬೆಗಳನ್ನು ಚೀನಾದಿಂದ ತರಿಸಲಾಗುತ್ತದೆ. ಇಟಲಿಯಿಂದ ಕಪ್ಪು ಟ್ರಫಲ್ಸ್​ ಮತ್ತು ಉತ್ತರ ಅಟ್ಲಾಂಟಿಕ್​ನಿಂದ ತಿಮಿಂಗಲ ಮಾಂಸವನ್ನು ತರಿಸಲಾಗುತ್ತದೆ. ಬಾಣಸಿಗ ಏಜೆಲಿಟೋ ಅರನೇಟಾ ಈ ಹಿಂದೆ ವಿಶ್ವದ ಅತ್ಯಂತ ದುಬಾರಿ ಸುಶಿಯನ್ನು ತಯಾರಿಸಿ ದಾಖಲೆ ಮಾಡಿದ್ದರು.ಇದರ ಬೆಲೆ ಅಂದಾಜು ರೂ. 1 ಲಕ್ಷ ಇತ್ತು. ಈ ಖಾದ್ಯವು ಐದು ವಜ್ರಗಳ ಹೊದಿಕೆಗಳನ್ನು ಮತ್ತು 24 ಕ್ಯಾರೆಟ್​ನ ಚಿನ್ನದ ರೇಕುಗಳಿಂದ ಅಲಂಕರಿಸಲಾಗಿತ್ತು.

ಇದನ್ನೂ ಓದಿ : Viral: ವಿಶ್ವ ದಾಖಲೆ; ಈ ಚಹಾ ಕಿತ್ಲಿಯ ಬೆಲೆ ರೂ. 24 ಕೋಟಿ; ಇಲ್ಲಿದೆ ಇದರ ವೈಶಿಷ್ಟ್ಯ

ನಿಮಗೂ ಈಗ ಸುಶಿ ತಿನ್ನುವ ಹುಕಿ ಉಂಟಾಗುತ್ತಿದೆಯಾ? ಹತ್ತಿರದ ರೆಸ್ಟೋರೆಂಟ್​​​ಗಳ ಹುಡುಕಾಟ ನಡೆಸಬೇಕೆನ್ನಿಸಿದೆಯಾ? ಅಥವಾ ರೂ. 2 ಲಕ್ಷ ಕೊಟ್ಟು ಜಪಾನಿಗೆ ಹೋಗಿ ಈ ಸುಶಿಯನ್ನು ತಿನ್ನಲು ತಯಾರಿದ್ದೀರಾ, ಏನಂತೀರಿ?

ಮತ್ತಷ್ಟು ವೈರಲ್​ ನ್ಯೂಸ್​​​ಗಾಗಿ ಕ್ಲಿಕ್ ಮಾಡಿ

ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್​ಗೆ ಏನೂ ಅನಿಸಲ್ಲ: ಅಶೋಕ
ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್​ಗೆ ಏನೂ ಅನಿಸಲ್ಲ: ಅಶೋಕ
ಚಿಕ್ಕಪ್ಪನ ಮಗಳ ಮದುವೆ ಅಟೆಂಡ್ ಮಾಡಿ ಸುಹಾಸ್ ಬಜ್ಪೆಗೆ ಹೋಗಿದ್ದ: ಮೋಹನ್
ಚಿಕ್ಕಪ್ಪನ ಮಗಳ ಮದುವೆ ಅಟೆಂಡ್ ಮಾಡಿ ಸುಹಾಸ್ ಬಜ್ಪೆಗೆ ಹೋಗಿದ್ದ: ಮೋಹನ್
Karnataka SSLC Results: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ಲೈವ್​ ನೋಡಿ
Karnataka SSLC Results: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ಲೈವ್​ ನೋಡಿ
ಸೋನು ನಿಗಮ್​ ವಿವಾದಾತ್ಮಕ ಹೇಳಿಕೆ; ವಿಡಿಯೋ ಇಲ್ಲಿದೆ
ಸೋನು ನಿಗಮ್​ ವಿವಾದಾತ್ಮಕ ಹೇಳಿಕೆ; ವಿಡಿಯೋ ಇಲ್ಲಿದೆ
ರಸ್ತೆ ಮೇಲೆ ಅಂಟಿಸಿದ್ದ ಪಾಕ್ ಬಾವುಟ ತೆಗೆಯಲು ಯತ್ನಿಸಿದ ವಿದ್ಯಾರ್ಥಿನಿ
ರಸ್ತೆ ಮೇಲೆ ಅಂಟಿಸಿದ್ದ ಪಾಕ್ ಬಾವುಟ ತೆಗೆಯಲು ಯತ್ನಿಸಿದ ವಿದ್ಯಾರ್ಥಿನಿ
ಹಿಂದೂ ಕಾರ್ಯಕರ್ತ ಸುಹಾಸ್​ ಕೊಲೆ ಬಗ್ಗೆ ಎಡಿಜಿಪಿ ಹಿತೇಂದ್ರ ಮಹತ್ವದ ಹೇಳಿಕೆ
ಹಿಂದೂ ಕಾರ್ಯಕರ್ತ ಸುಹಾಸ್​ ಕೊಲೆ ಬಗ್ಗೆ ಎಡಿಜಿಪಿ ಹಿತೇಂದ್ರ ಮಹತ್ವದ ಹೇಳಿಕೆ