Viral: ವಿಶ್ವ ದಾಖಲೆ; ಈ ಚಹಾ ಕಿತ್ಲಿಯ ಬೆಲೆ ರೂ. 24 ಕೋಟಿ; ಇಲ್ಲಿದೆ ಇದರ ವೈಶಿಷ್ಟ್ಯ
Teapot : ಬಂಗಾರ, ವಜ್ರ, ಮಾಣಿಕ್ಯ, ರೂಬಿ ಮತ್ತು ಆನೆಯ ದಂತದಿಂದ ತಯಾರಿಸಿದ ಈ ಕಿತ್ತಲಿ ಅಥವಾ ಟೀಪಾಟ್ ಇದೀಗ ಗಿನ್ನೀಸ್ ವಿಶ್ವ ದಾಖಲೆಗೆ ಸೇರಿದೆ. ಲಂಡನ್ನ ಎನ್. ಸೇಥಿಯಾ ಫೌಂಡೇಷನ್ ಇದರ ಒಡೆತನವನ್ನು ಹೊಂದಿದೆ. ನೆಟ್ಟಿಗರಂತೂ ಈ ಬೆಲೆಬಾಳುವ ಕಿತ್ತಲಿಯನ್ನು ನೋಡಿ ತಮಾಷೆಯಿಂದ ಪ್ರತಿಕ್ರಿಯಿಸುತ್ತಿದ್ದಾರೆ.
GWR : ಅಲ್ಯೂಮಿನಿಯಮ್, ಹಿತ್ತಾಳೆ, ಸ್ಟೀಲ್, ಗ್ಲಾಸ್, ಮಣ್ಣು, ಸಿರ್ಯಾಮಿಕ್ ಚಹಾ ಕಿತ್ಲಿಯನ್ನು ನೋಡಿದ್ದಿರಿ ಮತ್ತು ಬಳಸಿದ್ದೀರಿ. ಆದರೆ ಬಂಗಾರ ವಜ್ರ ವೈಢೂರ್ಯದಿಂದ ಅಲಂಕರಿಸಿದ ಟೀಪಾಟ್ (Teapot) ಅಥವಾ ಕಿ ಕಿತ್ಲಿಯಲ್ಲಿರುವ ಚಹಾ ಕುಡಿದಿದ್ದೀರೇ? ಹೋಗಲಿ ನೋಡಿದ್ದಿರೇ? ಇದೀಗ ನೆಟ್ಟಿಗರ ಗಮನವೆಲ್ಲಾ ಬೆಲೆಬಾಳುವ, ಹೊಳೆಯುವ ಕಿತ್ಲಿಯ ಸುತ್ತವೇ! ಇದನ್ನು ಎಲ್ಲಿಂದ ಕದ್ದುಕೊಂಡು ಬರಲಾಗಿದೆ ಎಂದು ಕೆಲ ನೆಟ್ಟಿಗರು ಕಿಚಾಯಿಸುತ್ತಿದ್ದಾರೆ. ಇದರಲ್ಲಿರುವ ಚಹಾದ ಪರಿಮಳ, ರುಚಿ ಬೇರೆ ಥರ ಇರುತ್ತದೆಯೇ? ಎಂದು ಕೆಲವರು ಕಾಲೆಳೆಯುತ್ತಿದ್ದಾರೆ. ಆದರೆ ಇದು ಲಂಡನ್ನ ಎನ್. ಸೇಥಿಯಾ ಫೌಂಡೇಶನ್ನ ಒಡೆತನದಲ್ಲಿದ್ದು ಇದೀಗ ಗಿನ್ನೀಸ್ ವಿಶ್ವ ದಾಖಲೆಯನ್ನು ಸೃಷ್ಟಿಸಿದೆ. ಹಾಗಿದ್ದರೆ ಅಂಥಾ ವಿಶೇಷ ಏನಿದೆ ಇದರಲ್ಲಿ?
ಲಂಡನ್ನ ಎನ್. ಸೇಥಿಯಾ ಫೌಂಡೇಷನ್ ಮತ್ತು ನ್ಯೂಬಿ ಟೀಸ್ ಸಹಯೋಗದಲ್ಲಿ ಈ ಆಕರ್ಷಕ ಅಮೂಲ್ಯ ಮತ್ತು ಅಸಾಧಾರಣ ಕಿತ್ಲಿಯನ್ನು ತಯಾರಿಸಲಾಗಿದೆ. ಇದರ ಬೆಲೆ ಅಂದಾಜು ರೂ. 24 ಕೋಟಿ. 2016ರಲ್ಲಿ ಇದನ್ನು ತಯಾರಿಸಲಾಗಿದ್ದು ವಿಶ್ವದ ಅತ್ಯಂತ ಬೆಲೆಬಾಳುವ ಕಿತ್ಲಿ ಎಂಬ ಹೆಗ್ಗಳಿಕೆಗೆ ಇದೀಗ ಇದು ಪಾತ್ರವಾಗಿದೆ.
This is the most valuable teapot in the world.
Owned by the N Sethia Foundation in the UK, the teapot is made from 18-carat yellow gold with cut diamond covering the entire body and a 6.67-carat ruby in the centre.
The teapot’s handle is made from fossilised mammoth ivory.
It… pic.twitter.com/TFZZF63YiW
— Guinness World Records (@GWR) August 9, 2023
ಗಿನ್ನೀಸ್ ವಿಶ್ವ ದಾಖಲೆಗಳ ಪ್ರಕಾರ, ಈ ಕಿತ್ಲಿಯನ್ನುಇಟಲಿಯ ಆಭರಣ ವ್ಯಾಪಾರಿ ಫುಲ್ವಿಯೋ ಸ್ಕ್ಯಾವಿಯಾ ತಯಾರಿಸಿದ್ದಾರೆ. ಇದರ ಹಿಡಿಕೆಯನ್ನು ಆನೆಯ ದಂತದಿಂದ (Mammoth Teeth) ತಯಾರಿಸಲಾಗಿದೆ. ಕಿತ್ಲಿಯು 18 ಕ್ಯಾರೆಟ್ ಬಂಗಾರ ಮತ್ತು ಬೆಳ್ಳಿಯಿಂದ ಮಾಡಲ್ಪಟ್ಟಿದೆ. ಹೊರಾವರಣಕ್ಕೆ 1658 ವಜ್ರಗಳು ಮತ್ತು 386 ಥಾಯ್ ಮತ್ತು ಬರ್ಮೀಸ್ ಮಾಣಿಕ್ಯಗಳಿಂದ ಅಲಂಕರಿಸಲಾಗಿದೆ.
ಇದನ್ನೂ ಓದಿ : Viral: ಹೈದರಾಬಾದ; ನನಗೆ ಹಸಿವಾಗಿದೆ ಎಂದು ಮೆಟ್ರೋನಲ್ಲಿ ಆಕೆ ಹೇಳಿದಳು, ಮುಂದೇನಾಯಿತು?
ಆ. 9ರಂದು ಗಿನ್ನೀಸ್ ವಿಶ್ವ ದಾಖಲೆಯ ಅಧಿಕೃತ ಟ್ವಿಟರ್ ಪುಟದಲ್ಲಿ ಈ ಪೋಸ್ಟ್ ಅನ್ನು ಹಂಚಿಕೊಂಡಿದೆ. ಈತನಕ 7.4 ಲಕ್ಷ ಜನರು ಇದನ್ನು ನೋಡಿದ್ದಾರೆ. ಅನೇಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕಿತ್ಲಿಯನ್ನು ಎಲ್ಲಿಂದ ಕದ್ದು ತಂದಿದೆ ಈ ಫೌಂಡೇಷನ್? ಎಂಬ ಕುತೂಹಲ ನನ್ನಲ್ಲಿ ಉಂಟಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಲಂಡನ್ನಲ್ಲಿರುವ ಪ್ರಾಚೀನ ವಸ್ತುಗಳನ್ನು ವಸಾಹತುಶಾಹಿ ದೇಶಗಳಿಂದ ಕದ್ದು ತರಲಾಗುತ್ತಿದೆ ಎಂದು ಅನ್ನಿಸುತ್ತಿದೆ ಎಂದಿದ್ದಾರೆ ಒಬ್ಬರು.
ಇದನ್ನೂ ಓದಿ : Viral Video: ದೆಹಲಿ; ಪೊಲೀಸರಿಗೆ ಕಪಾಳಮೋಕ್ಷ ಮಾಡಿದ ಮಹಿಳೆ; ಕ್ರಮ ಕೈಗೊಳ್ಳಿ ಎಂದ ನೆಟ್ಟಿಗರು
ಈ ಕಿತ್ಲಿಯಲ್ಲಿರುವ ಚಹಾ ಸೇವಿಸಿದರೆ ಏನಾದರೂ ವಿಶೇಷ ಅನುಭವ ಉಂಟಾಗುತ್ತದೆಯೇ? ಏನಿದರ ಔಚಿತ್ಯ, ಎಂದಿದ್ದಾರೆ ಕೆಲವರು. ಎನ್. ಸೇಥಿಯಾ ಫೌಂಡೇಷನ್ ನನ್ನನ್ನು ದತ್ತಕ್ಕೆ ತೆಗೆದುಕೊಳ್ಳಲಿ ಎಂದಿದ್ದಾರೆ ಇನ್ನೊಬ್ಬರು. ಒಟ್ಟಾರೆಯಾಗಿ ಇದನ್ನು ನೋಡಿದ ಮತ್ತು ಓದಿದ ನಿಮ್ಮ ಅಭಿಪ್ರಾಯವೆನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:45 pm, Fri, 11 August 23