AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಇದು ಮಸಾಲೆ ಸುದ್ದಿ; ಇಂದೇ ನೋಡಿ ಈ ‘ಏಲಕ್ಕಿ ಮಹಾತ್ಮೆ’

Spice : ನಿಜಕ್ಕೂ ನಮಗೆ ಈ ಏಲಕ್ಕಿ ಹೇಗೆ ತಯಾರಾಗುತ್ತದೆ ಎನ್ನುವುದೇ ಗೊತ್ತಿರಲಿಲ್ಲ. ಈ ವಿಡಿಯೋ ನೋಡಿ ಬಹಳ ಅಚ್ಚರಿಯಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ಗಮನ ಸೆಳೆದಿದ್ದು ಈ ಎಸ್ಟೇಟ್ ಕಾರ್ಮಿಕರ ಮುಖದಲ್ಲಿರುವ ಖುಷಿ. ಈ ವಿಡಿಯೋ ಮಾಡಿದ್ದಕ್ಕೆ ಧನ್ಯವಾದ ಎಂದು ಈ ಬ್ಲಾಗರ್​ಗೆ ಹೇಳುತ್ತಿದ್ದಾರೆ ನೆಟ್ಟಿಗರು.

Viral Video: ಇದು ಮಸಾಲೆ ಸುದ್ದಿ; ಇಂದೇ ನೋಡಿ ಈ 'ಏಲಕ್ಕಿ ಮಹಾತ್ಮೆ'
ಏಲಕ್ಕಿ ಬೀಜ ಏಲಕ್ಕಿಕಾಯಿಯಾಗುವ ಪರಿ
ಶ್ರೀದೇವಿ ಕಳಸದ
|

Updated on:Aug 09, 2023 | 4:40 PM

Share

Cardamom : ಪಾಯಸದಲ್ಲಿ, ಉಂಡೆಯಲ್ಲಿ, ಚಹಾದಲ್ಲಿ, ಸಿಹಿತಿಂಡಿಗಳಲ್ಲಿ (Sweets) ಬಗೆಬಗೆಯ ಖಾದ್ಯಗಳಲ್ಲಿ ಬಂದು ಬೀಳುವ ಈ ಪುಟ್ಟ ಏಲಕ್ಕಿಯ ಘಮಕ್ಕೆ ಮಾರುಹೋಗದವರು ಯಾರಿಲ್ಲ? ಭೂಮಿಯಿಂದ ಅಡುಗೆಮನೆಯತನಕದ ಇದರ ಪ್ರಯಾಣ ಹೇಗಿರುತ್ತದೆ ಎನ್ನುವುದು ನಿಮಗೆ ಗೊತ್ತಿದೆಯೇ? ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಘಮಘಮಿಸುವ ಏಲಕ್ಕಿಯ ಮಹಾತ್ಮೆ ನಿಜಕ್ಕೂ ದೊಡ್ಡದೇ! ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಏಲಕ್ಕಿ ಫ್ಯಾಕ್ಟರಿಗೆ ದಾಂಗುಡಿ ಇಟ್ಟಿದ್ದಾರೆ ಈ ಇನ್​ಸ್ಟಾಗ್ರಾಮಿ ಹೆಣ್ಣುಮಗಳು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by The Chai Box (@thechaibox)

ಈ ವಿಡಿಯೋ ಅನ್ನು ಈತನಕ ಸುಮಾರು 17,000 ಜನರು ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಅನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ನಮ್ಮ ಆಹಾರದ ಮೂಲವೇನು, ಅದು ಎಲ್ಲಿಂದ ಬರುತ್ತದೆ ಮತ್ತು ಯಾರು ಅದನ್ನು ಉತ್ಪಾದಿಸುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಲು ನನಗೆ ಸದಾ ಕುತೂಹಲ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : Viral: ಕ್ಯಾಬ್ ಡ್ರೈವರ್​ ಆದ ಮೇಲೆ ಹೆಚ್ಚು ಗಳಿಸುತ್ತಿದ್ದೇನೆ ಎಂದ ಎಂಜಿನಿಯರ್​

ಈತನಕ ಏಲಕ್ಕಿಯನ್ನು ಹೇಗೆ ಬೆಳೆಯುತ್ತಾರೆ ಎನ್ನುವುದೇ ಗೊತ್ತಿರಲಿಲ್ಲ, ಈಗ ಗಿಡದಿಂದ ಕಾರ್ಖಾನೆಯವರೆಗೆ ಇದರ ಪ್ರಯಾಣವನ್ನು ತೋರಿಸಿದ್ದೀರಿ, ಧನ್ಯವಾದ ನಿಮಗೆ! ಎಂದಿದ್ದಾರೆ ಮತ್ತೊಬ್ಬರು. ಈ ಕೆಲಸವನ್ನು ಅವರು ಎಷ್ಟು ಖುಷಿಯಿಂದ ಶ್ರದ್ಧೆಯಿಂದ ಮಾಡುತ್ತಿದ್ದಾರೆ ನೋಡಿ ಎಂದು ಇನ್ನೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : Viral: ‘ಭಯ ಒಳ್ಳೆಯದು’ ಸುನೀಲ್​ ಶೆಟ್ಟಿ ಲಿಂಕ್ಡ್​ಇನ್​ ಪೋಸ್ಟ್​ ವೈರಲ್​

ಇದು ನನ್ನಿಷ್ಟದ ಮಸಾಲೆ ಪದಾರ್ಥ, ಆದರೆ ಇದು ಹೇಗೆ ತಯಾರಾಗುತ್ತದೆ ಎಂದೇ ಗೊತ್ತಿರಲಿಲ್ಲ ಎಂದಿದ್ದಾರೆ ಅನೇಕರು. ಹೀಗೆಯೇ ಲವಂಗ, ದಾಲ್ಚಿನ್ನಿ, ಮರಾಠಿ ಮೊಗ್ಗು ಮುಂತಾದ ಮಸಾಲೆ ಪದಾರ್ಥಗಳ ವಿಡಿಯೋ ಕೂಡ ಅಪ್​ಲೋಡ್ ಮಾಡಿ ಎನ್ನುತ್ತಿದ್ದಾರೆ ಕೆಲವರು. ಏಲಕ್ಕಿ ಇಲ್ಲದೆ ನನ್ನ ಊಟವೂ ಇಲ್ಲ ಚಹಾ ಕೂಡ ಇಲ್ಲ, ನನ್ನ ಬ್ಯಾಗಿನ ಪುಟ್ಟ ಡಬ್ಬಿಯಲ್ಲಿ ಏಲಕ್ಕಿ ಇಟ್ಟುಕೊಂಡೇ ಓಡಾಡುತ್ತೇನೆ. ಆದರೆ ಇದರ ಹಿಂದೆ ಇಷ್ಟೊಂದು ಶ್ರಮ ಇದೆ ಎಂದು ಗೊತ್ತಿರಲಿಲ್ಲ ಎಂದಿದ್ದಾರೆ ಒಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:39 pm, Wed, 9 August 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ