ವಿಡಿಯೋ ಕ್ಲಿಪ್: ಪಾರದರ್ಶಕವಾಗಿ ಕಾಣುವ ಗಾಜಿನ ಮೀನು… ಕಣ್ಣು ಬಿಟ್ಟರೆ ಉಳಿದ ಭಾಗಗಳೂ ಪಾರದರ್ಶಕವಾ!? ಸಮುದ್ರ ವಿಜ್ಞಾನಿಗಳ ಗಮನ ಸೆಳೆಯುತ್ತಿದೆ
ಈ ಮೀನಿನ ಕಣ್ಣುಗಳನ್ನು ಹೊರತುಪಡಿಸಿ ಬೇರೆ ಯಾವುದೇ ಅಂಗಗಳು ಗೋಚರಿಸುವುದಿಲ್ಲ! ಈ ವಿಡಿಯೋದಲ್ಲಿ ಕಾಣುತ್ತಿರುವ ಮೀನು ಸಂಪೂರ್ಣವಾಗಿ ಪಾರದರ್ಶಕವಾಗಿದೆ. ದೇಹದ ಉಳಿದ ಭಾಗಗಳು ಕಾಣಿಸುತ್ತಿಲ್ಲ. ಇದನ್ನು ನೋಡಿ ಹಲವು ನೆಟ್ಟಿಗರು ಶಾಕ್ ಆಗಿದ್ದಾರೆ. ಇದು ನಿಜಕ್ಕೂ ನಿಸರ್ಗದ ಪವಾಡ ಅಂತ ಕೆಲವರು ಹೇಳುತ್ತಾರೆ.
Viral Video: ನಮ್ಮ ವೈವಿಧ್ಯಮಯ ಜಗತ್ತಿನಲ್ಲಿ, ಅನೇಕಾನೇಕ ಆಕರ್ಷಕ ಜೀವಿಗಳು ಹೆಚ್ಚಿನ ಜನರಿಗೆ ತಿಳಿದಿಲ್ಲ. ಉದಾಹರಣೆಗೆ, ಆಫ್ರಿಕಾದ ಕಾಡುಗಳಲ್ಲಿ ಕಂಡುಬರುವ ಅದ್ಭುತ ಪ್ರಾಣಿಗಳ ಬಗ್ಗೆ ಭಾರತದ ಜನರಿಗೆ ತಿಳಿದಿಲ್ಲದಿರಬಹುದು. ಆಫ್ರಿಕನ್ನರು ಭಾರತದ ವಿಶಿಷ್ಟ ವನ್ಯಜೀವಿಗಳೊಂದಿಗೆ ಸಂಪರ್ಕ ಹೊಂದಿಲ್ಲದಿರಬಹುದು. ಆದರೆ, ಸಾಮಾಜಿಕ ಜಾಲತಾಣಗಳು ದಾಂಗುಡಿಯಿಡುತ್ತಿದ್ದಂತೆ ಈ ವಿಚಿತ್ರ ಜೀವಿಗಳ ಕುರಿತಾದ ಅನೇಕ ಆಕರ್ಷಕ ಚಿತ್ರಗಳು ಮತ್ತು ವಿಡಿಯೋಗಳು ಹೊರಬರುತ್ತಿವೆ. ಅಂತಹ ಚಿತ್ರಗಳು ಪ್ರಕೃತಿಯ ಅದ್ಭುತ ಸೃಷ್ಟಿಗಳ ಬಗ್ಗೆ ಜನರಿಗೆ ಜ್ಞಾನವನ್ನು ನೀಡುತ್ತವೆ. ಇಂತಹ ಪಾರದರ್ಶಕ ಮೀನಿನ (Transparent Fish) ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ನೋಡುಗರಲ್ಲಿ ಅಪಾರ ಕೌತುಕವನ್ನು ಮೂಡಿಸುತ್ತಿದೆ.
ಈ ವಿಡಿಯೋ ಕ್ಲಿಪ್ ಅಪರೂಪದ ಪಾರದರ್ಶಕ ಮೀನಿನ ವೀಡಿಯೊ ವೈರಲ್ ಆಗಿದ್ದು, ಕಣ್ಣುಗಳನ್ನು ಹೊರತುಪಡಿಸಿ ಅದರ ಯಾವುದೇ ಅಂಗಗಳು ಗೋಚರಿಸುವುದಿಲ್ಲ. ವಿಡಿಯೋದಲ್ಲಿ, ಒಬ್ಬ ವ್ಯಕ್ತಿ ತನ್ನ ಕೈಯಲ್ಲಿ ಪಾರದರ್ಶಕ ಮೀನನ್ನು ಕ್ಯಾಮೆರಾದ ಕಡೆಗೆ ತೋರಿಸುತ್ತಿರುವುದು ಕಂಡುಬರುತ್ತದೆ. ಈ ಮೀನು ಸಂಪೂರ್ಣವಾಗಿ ಪಾರದರ್ಶಕವಾಗಿ ಕಾಣುತ್ತದೆ. ಅದರ ಕಣ್ಣುಗಳನ್ನು ಹೊರತುಪಡಿಸಿ, ದೇಹದ ಯಾವುದೇ ಭಾಗವು ಗೋಚರಿಸುವುದಿಲ್ಲ. ಇದರಿಂದ ಅನೇಕರು ಅಚ್ಚರಿಗೊಂಡಿದ್ದಾರೆ. ಇದು ಪ್ರಕೃತಿಯ ಪವಾಡ ಎಂದು ಬಣ್ಣಿಸಲಾಗಿದೆ. ಇಲ್ಲಿ ಎಷ್ಟೋ ಜೀವಿಗಳು ನಮ್ಮ ಕಣ್ಣಿಂದ ನೋಡಿದರೂ ನಂಬಲಾಗದಂತಹವು.
ಈ ಮೀನಿನ ಅಂಗಗಳು ಕೂಡ ಪಾರದರ್ಶಕವಾಗಿವೆಯಾ!?
Transperant fish, cannot see any organs, except the eyes.pic.twitter.com/wFCEzOA1yk
— The Best (@ThebestFigen) August 1, 2023
ನಾವು ವಿಡಿಯೋದಲ್ಲಿ ನೋಡುತ್ತಿರುವ ಮೀನು ಸಂಪೂರ್ಣವಾಗಿ ಪಾರದರ್ಶಕವಾಗಿದೆ. ಅದರ ಕಣ್ಣುಗಳು ಮಾತ್ರ ಕಾಣುತ್ತವೆ. ಉಳಿದ ದೇಹ ಮತ್ತು ಹೊಟ್ಟೆ ಕಾಣಿಸುತ್ತಿಲ್ಲ. ಇದನ್ನು ನೋಡಿ ಹಲವು ನೆಟ್ಟಿಗರು ಶಾಕ್ ಆಗಿದ್ದಾರೆ. ಇದು ನಿಜಕ್ಕೂ ನಿಸರ್ಗದ ಪವಾಡ ಅಂತ ಕೆಲವರು ಹೇಳುತ್ತಾರೆ. ಅಬ್ಬಾ.. ಇದೆಲ್ಲಾ ಮಾಯೆ…! ಎಂದು ಇತರರು ಹೇಳುತ್ತಾರೆ. ವೀಡಿಯೊವನ್ನು ಟ್ವಿಟರ್ ಹ್ಯಾಂಡಲ್ @ThebestFigen ಬಳಸಿ ಆಗಸ್ಟ್ 1 ರಂದು ಪೋಸ್ಟ್ ಮಾಡಲಾಗಿದೆ. ಶೀರ್ಷಿಕೆಯಲ್ಲಿ ಮೀನು ಪಾರದರ್ಶಕವಾಗಿದೆ ಮತ್ತು ಕಣ್ಣುಗಳನ್ನು ಹೊರತುಪಡಿಸಿ ಬೇರೆ ಯಾವುದೇ ಭಾಗವು ಗೋಚರಿಸುವುದಿಲ್ಲ ಎಂದು ಬರೆಯಲಾಗಿದೆ.
ಈ ವಿಡಿಯೋ ಕ್ಲಿಪ್ ಈಗಾಗಲೇ 17 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 40 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ವಿಡಿಯೋ ನೋಡಿದ ಹಲವರು ಪ್ರತಿಕ್ರಿಯೆ ಕೂಡ ನೀಡಿದ್ದಾರೆ. ಮೀನಿನ ಅಂಗಗಳು ಕೂಡ ಪಾರದರ್ಶಕವಾಗಿವೆ ಎಂದು ಕೆಲವರು ಹೇಳುತ್ತಾರೆ! ಇದು ತುಂಬಾ ಆಸಕ್ತಿದಾಯಕವಾಗಿದೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಇನ್ನು ಕೆಲವರು ತಮಾಷೆಯ ಕಾಮೆಂಟ್‌ಗಳನ್ನೂ ಮಾಡಿದ್ದಾರೆ. ಅದೆಲ್ಲಾ ಹಾಗಿರಲಿ, ಈ ರೀತಿಯ ಮೀನುಗಳನ್ನು ನೀವು ಎಂದಾದರೂ ನೋಡಿದ್ದೀರಾ?
ಹೆಚ್ಚಿನ ವೈರಲ್ ವಿಡಿಯೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:20 pm, Wed, 9 August 23