AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬಿಸ್ಮಿಲ್ಲಾಖಾನ್​​ರನ್ನು ನೆನಪಿಸಿದ ಸರ್ದಾರ್ಜೀಯ ಮಿಮಿಕ್ರಿ; ಶಭಾಷ್​ ಎಂದ ನೆಟ್ಟಿಗರು

Artist : ಎಲ್ಲಿದ್ರೀ ಸರ್ದಾರ್ಜೀ ಇಷ್ಟು ದಿನ, ಎಂಥಾ ಪ್ರತಿಭೆ ನಿಮ್ಮದು? ಇನ್​ಸ್ಟಾಗ್ರಾಂ ಅಕೌಂಟ್ ಇದೆಯೇ ನಿಮ್ಮದು? ಭಾರತದ ಅಪ್ಪಟ ಪ್ರತಿಭೆ ಎಂದರೆ ಇದು...ಅಂತೆಲ್ಲ ನೆಟ್ಟಿಗರು ಖುಷಿಯಿಂದ ಈ ಮಿಮಿಕ್ರಿ ಕಲಾವಿದರನ್ನು ಶ್ಲಾಘಿಸುತ್ತಿದ್ದಾರೆ. ಇವರು ಯಾವೆಲ್ಲದರ ಧ್ವನಿಯನ್ನು ಅನುಕರಿಸಿದ್ಧಾರೆ ಎನ್ನುವ ಕುತೂಹಲ ನಿಮ್ಮಲ್ಲೂ ಹುಟ್ಟಿರಬೇಕಲ್ಲವೆ? ಕೇಳಿ.

Viral Video: ಬಿಸ್ಮಿಲ್ಲಾಖಾನ್​​ರನ್ನು ನೆನಪಿಸಿದ ಸರ್ದಾರ್ಜೀಯ ಮಿಮಿಕ್ರಿ; ಶಭಾಷ್​ ಎಂದ ನೆಟ್ಟಿಗರು
ರೈಲಿನಲ್ಲಿ ಮಿಮಿಕ್ರಿ ಮಾಡುತ್ತಿರುವ ಸರ್ದಾರ್ಜೀ
ಶ್ರೀದೇವಿ ಕಳಸದ
|

Updated on: Aug 09, 2023 | 1:54 PM

Share

Mimicry : ಕುದುರೆ, ಏಸ್ರಾಜ್​, ಶೆಹನಾಯೀ  ಮತ್ತಿತರೇ ತಂತೀವಾದ್ಯಗಳ ಧ್ವನಿಯನ್ನು ಅನುಕರಿಸಿ ರೈಲು ಪ್ರಯಾಣಿಕರನ್ನು ರಂಜಿಸಿದ ಸರ್ದಾರ್ಜಿಯ (Sardarji) ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಭಾರತದ ಅಪ್ಪಟ ಪ್ರತಿಭೆ, ಪ್ರತಿಭೆ ಎಂದರೆ ಇದೇ, ನಿಮ್ಮ ಸೃಜನಶೀಲತೆಗೆ ನಾವಂತೂ ಫಿದಾ, ನಿಮ್ಮ ಈ ಕೌಶಲವನ್ನು ಮುಂದುವರಿಸಿ ಇನ್ನಷ್ಟು ಧ್ವನಿಗಳನ್ನು ಅನುಕರಿಸಿ ಅಂತೆಲ್ಲ ನೆಟ್ಟಿಗರು ಇವರನ್ನು ಪ್ರೋತ್ಸಾಹಿಸುತ್ತ ಕೊಂಡಾಡುತ್ತಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by SINGING_LOVERS__♠️ (@singing_lovers__)

ಈ ವಿಡಿಯೋ ಈಗಾಗಲೇ 7 ಮಿಲಿಯನ್ ಜನರು ನೋಡಿದ್ದು ಸುಮಾರು 2 ಲಕ್ಷ ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ಎಷ್ಟೊಂದು ನೈಜತೆಯಿಂದ ನೀವು ಧ್ವನಿಯನ್ನು ಅನುಕರಿಸುತ್ತೀರಿ, ಅದ್ಭುತ! ಎಂದಿದ್ದಾರೆ ಒಬ್ಬರು. ಈ ಕಲಾವಿದರ ಇನ್​ಸ್ಟಾ ಅಕೌಂಟ್​ ಇದೆಯೇ? ಮತ್ತಷ್ಟು ಕೇಳಬೇಕೆನ್ನಿಸುತ್ತಿದೆ ಎಂದು ಕೆಲವರು ಹೇಳಿದ್ದಾರೆ.

ಇದನ್ನೂ ಓದಿ : Viral Video: ನ್ಯೂಯಾರ್ಕ್​; ಮೆಟ್ರೋದಲ್ಲಿ ಕುಟುಂಬವೊಂದರ ಮೇಲೆ ದಾಳಿ ಮಾಡಿದ ಹದಿಹರೆಯದ ಹುಡುಗಿಯರು

ಇವರ ಶೆಹನಾಯಿ ಉಸ್ತಾದ್​ ಬಿಸ್ಮಿಲ್ಲಾ ಖಾನರನ್ನು  ನೆನಪಿಸಿತು ಎಂದಿದ್ದಾರೆ ಒಬ್ಬರು. ನಮ್ಮ ಊರಿನ ರೈಲಿನಲ್ಲಿಯೂ ಈ ಸರ್ದಾರ್ಜೀ ಬರಬಾರದೆ? ಎಂದಿದ್ದಾರೆ ಇನ್ನೊಬ್ಬರು. ಕುದುರೆಯ ಧ್ವನಿಯನ್ನು ಚೆನ್ನಾಗಿ ಅನುಕರಿಸಿದ್ದೀರಿ ಎಂದಿದ್ದಾರೆ ಮತ್ತೊಬ್ಬರು. ನಿಜಕ್ಕೂ ಇಂಥ ಪ್ರತಿಭೆಯನ್ನು ನಾನು ಈತನಕ ನೋಡಿದ್ದಿಲ್ಲ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: 11 ವರ್ಷದ ಮಗ ವಿಮಾನ ಹಾರಿಸುತ್ತಿದ್ದ, ಅಪ್ಪ ಮದ್ಯ ಸೇವಿಸುತ್ತಿದ್ದ; ವೈರಲ್ ವಿಡಿಯೋ

ಇವರು ವೃತ್ತಿಪರ ಕಲಾವಿದರೆ? ಅಥವಾ ಪ್ರಯಾಣದ ಮಧ್ಯೆ ಬೆಸರ ಕಳೆಯಲು ಹೀಗೆ ಧ್ವನಿ ಅನುಕರಣೆ ಮಾಡಿದ್ಧಾರೆಯೇ? ಎಂದು ಕೇಳಿದ್ದಾರೆ ಒಬ್ಬರು. ಸರ್ದಾರ್ಜಿಗಳು ಜೋಕ್ ಹೇಳಲು ಮಾತ್ರ ಎಂದುಕೊಂಡಿದ್ದೆವು ಇದೀಗ ಇವರು ಇಷ್ಟೊಂದು ಸೃಜನಶೀಲರು ಎಂದು ಗೊತ್ತಿರಲಿಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ. ಅದಕ್ಕೆ ಪ್ರತಿಯಾಗಿ ಇನ್ನೊಬ್ಬರು, ಹಾಗೆ ಯಾಕೆ ಬ್ರ್ಯಾಂಡ್ ಮಾಡುತ್ತೀರಿ? ಎಲ್ಲ ಕ್ಷೇತ್ರದಲ್ಲಿಯೂ ಅವರು ತಮ್ಮ ಛಾಪನ್ನು ಒತ್ತಿದ್ದಾರೆ, ಒತ್ತುತ್ತಿದ್ಧಾರೆ ಎಂದಿದ್ಧಾರೆ ಮತ್ತೊಬ್ಬರು.

ಇದನ್ನೂ ಓದಿ : Viral: ಆನ್​ಲೈನ್​ ವಂಚನೆ; ಆಟೋ ಚಾಲಕನಿಂದ ರೂ 23000 ಸುಲಿಗೆ ಮಾಡಿದ 20ರ ಯುವತಿ

ಒಟ್ಟಾರೆಯಾಗಿ ಸರ್ದಾರ್ಜಿಯ ಈ ಪ್ರತಿಭೆ ನೆಟ್ಟಿಗರಿಗೆ ಗುಂಗು ಹಿಡಿಸಿದೆ. ಮತ್ತೆ ಮತ್ತೆ ಈ ವಿಡಿಯೋ ನೋಡುತ್ತಿದ್ದೇವೆ. ನಮ್ಮ ಮನೆಯ ಮಕ್ಕಳಿಗೂ ಈ ವಿಡಿಯೋ ತೋರಿಸಿ ಖುಷಿಪಡುತ್ತಿದ್ದೇವೆ ಎಂದಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ 

Follow Us
ಪ್ರಧಾನಿ ಮೋದಿ ಹೇಳಿಕೆಗೆ ಖಾಸಗಿ ಶಾಲಾ ಒಕ್ಕೂಟದಿಂದ ಆಕ್ಷೇಪ
ಪ್ರಧಾನಿ ಮೋದಿ ಹೇಳಿಕೆಗೆ ಖಾಸಗಿ ಶಾಲಾ ಒಕ್ಕೂಟದಿಂದ ಆಕ್ಷೇಪ
ನೀಟ್: ರಾಜ್ಯದಲ್ಲಿ ಅಕ್ರಮವಾಗಿದೆಯಾ? ಬಂಗಾರಪ್ಪ ಏನಂದ್ರು ನೋಡಿ
ನೀಟ್: ರಾಜ್ಯದಲ್ಲಿ ಅಕ್ರಮವಾಗಿದೆಯಾ? ಬಂಗಾರಪ್ಪ ಏನಂದ್ರು ನೋಡಿ
ಪ್ರಧಾನಿ ಮೋದಿ ಹೇಳಿದ್ದಕ್ಕೆ BMTC ಬಸ್​ನಲ್ಲಿ ಬಂದೆ ಎಂದ ಪ್ರಯಾಣಿಕ!
ಪ್ರಧಾನಿ ಮೋದಿ ಹೇಳಿದ್ದಕ್ಕೆ BMTC ಬಸ್​ನಲ್ಲಿ ಬಂದೆ ಎಂದ ಪ್ರಯಾಣಿಕ!
ವಿಶ್ವಾಸ ಮತ ಯಾಚನೆಯಲ್ಲಿ ಭಾಗಿಯಾಗದಂತೆ TVK ಶಾಸಕನಿಗೆ ಕೋರ್ಟ್​ ನಿರ್ಬಂಧ
ವಿಶ್ವಾಸ ಮತ ಯಾಚನೆಯಲ್ಲಿ ಭಾಗಿಯಾಗದಂತೆ TVK ಶಾಸಕನಿಗೆ ಕೋರ್ಟ್​ ನಿರ್ಬಂಧ
ವಿಧಾನಸಭೇಲಿ ಸಿಎಂ ವಿಜಯ್ ಕಾಲೆಳೆದ ಉದಯನಿಧಿ ಬಿಚ್ಚಿಟ್ಟರು ಹಳೇ ಕಾಲದ ರಹಸ್ಯ!
ವಿಧಾನಸಭೇಲಿ ಸಿಎಂ ವಿಜಯ್ ಕಾಲೆಳೆದ ಉದಯನಿಧಿ ಬಿಚ್ಚಿಟ್ಟರು ಹಳೇ ಕಾಲದ ರಹಸ್ಯ!
ನಿದ್ದೆಯ ಮಂಪರಿನಲ್ಲಿ ಡಿವೈಡರ್​​ಗೆ ಗುದ್ದಿದ ಟ್ರಕ್​ ಡ್ರೈವರ್
ನಿದ್ದೆಯ ಮಂಪರಿನಲ್ಲಿ ಡಿವೈಡರ್​​ಗೆ ಗುದ್ದಿದ ಟ್ರಕ್​ ಡ್ರೈವರ್
ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ
ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ
Live: ಅಸ್ಸಾಂ ಸಿಎಂ ಆಗಿ ಹಿಮಂತ್ ಬಿಸ್ವಾ ಶರ್ಮಾ ಪದಗ್ರಹಣದ ನೇರಪ್ರಸಾರ
Live: ಅಸ್ಸಾಂ ಸಿಎಂ ಆಗಿ ಹಿಮಂತ್ ಬಿಸ್ವಾ ಶರ್ಮಾ ಪದಗ್ರಹಣದ ನೇರಪ್ರಸಾರ
ಶೃಂಗೇರಿ ವೋಟ್ ಟ್ಯಾಂಪರಿಂಗ್ ಆರೋಪ: FSL​ನಲ್ಲಿ ಎಲ್ಲ ಗೊತ್ತಾಗಲಿದೆ: ಪರಮೇಶ್
ಶೃಂಗೇರಿ ವೋಟ್ ಟ್ಯಾಂಪರಿಂಗ್ ಆರೋಪ: FSL​ನಲ್ಲಿ ಎಲ್ಲ ಗೊತ್ತಾಗಲಿದೆ: ಪರಮೇಶ್
ಸುಪ್ರೀಂ ಕೋರ್ಟ್ ಆದೇಶವನ್ನು ಒಪ್ಪಿಕೊಳ್ಳುತ್ತೇನೆ ಎಂದ ಜೀವರಾಜ್
ಸುಪ್ರೀಂ ಕೋರ್ಟ್ ಆದೇಶವನ್ನು ಒಪ್ಪಿಕೊಳ್ಳುತ್ತೇನೆ ಎಂದ ಜೀವರಾಜ್