Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಆನ್​ಲೈನ್​ ವಂಚನೆ; ಆಟೋ ಚಾಲಕನಿಂದ ರೂ 23000 ಸುಲಿಗೆ ಮಾಡಿದ 20ರ ಯುವತಿ

Auto Driver : ಕಾಲೇಜಿಗೆ ಶುಲ್ಕ ಕಟ್ಟಬೇಕಿರುವುದರಿಂದ ನಗದು ಹಣ ಕೊಡಿ ನಾನು ಆನ್​ಲೈನ್​ನಲ್ಲಿ ಪಾವತಿಸುತ್ತೇನೆ ಎಂದು ಹೇಳಿದ್ದಾಳೆ. ಆಟೋ ಡ್ರೈವರ್​ ಹಣ ಕೊಟ್ಟಿದ್ದಾನೆ. ಆದರೆ ಆಕೆ ನಕಲಿ ರಸೀದಿ ತೋರಿಸಿ ಪರಾರಿಯಾಗಿದ್ಧಾಳೆ.

Viral: ಆನ್​ಲೈನ್​ ವಂಚನೆ; ಆಟೋ ಚಾಲಕನಿಂದ ರೂ 23000 ಸುಲಿಗೆ ಮಾಡಿದ 20ರ ಯುವತಿ
ಸಾಂದರ್ಭಿಕ ಚಿತ್ರ
Follow us
ಶ್ರೀದೇವಿ ಕಳಸದ
|

Updated on: Aug 09, 2023 | 10:56 AM

Bengaluru : ಐಟಿ ಸಿಟಿ ಎಂದು ಜಗತ್ಪ್ರಸಿದ್ದವಾಗಿರುವ ಬೆಂಗಳೂರು ಏನಾದರೂ ಒಂದು ಕಾರಣಕ್ಕೆ, ಅದರಲ್ಲಿಯೂ ತಂತ್ರಜ್ಞಾನಕ್ಕೆ ಸಂಬಂಧಿಸಿ ಸುದ್ದಿಯಲ್ಲಿದ್ದೇ ಇರುತ್ತದೆ. ಆಟೋ, ಕ್ಯಾಬ್​ ಡ್ರೈವರುಗಳ ವರ್ತನೆ, ವಂಚನೆಗೆ ಸಂಬಂಧಿಸಿದಂತೆ ನಿತ್ಯವೂ ಸುದ್ದಿಯನ್ನು ಓದುತ್ತಿರುತ್ತೀರಿ. ಆದರೆ ಯುವತಿಯೊಬ್ಬಳು ಆಟೋ ಡ್ರೈವರ್​ಗೆ ವಂಚನೆ ಮಾಡಿದ ಸುದ್ದಿ ಇದೀಗ ವೈರಲ್ ಆಗುತ್ತಿದೆ. 20 ವರ್ಷದ ಈ ಯುವತಿ 58 ವರ್ಷದ ಆಟೋ ಡ್ರೈವರ್​ನಿಂದ ರೂ. 23,400 ಹಣ ಸುಲಿಗೆ ಮಾಡಿ ಪರಾರಿಯಾಗಿದ್ದಾಳೆ. ಆನ್​ಲೈನ್​ ವಂಚನೆಯಡಿ ಈಕೆಯ ವಿರುದ್ಧ ಡ್ರೈವರ್ ಪೊಲೀಸ್​ ಠಾಣೆಯಲ್ಲಿ (Police Station) ದೂರು ದಾಖಲಿಸಿದ್ದಾನೆ.

ಇದನ್ನೂ ಓದಿ : Viral: ಒಂದೇ ಆಟೋ ಒಬ್ಬನೇ ಡ್ರೈವರ್​ ಒಂದೇ ಸಮಯಕ್ಕೆ ಬೇರೆಬೇರೆ ಸ್ಥಳಗಳಲ್ಲಿ ಆಟೋ ಬುಕ್ ಆಗಿದ್ದು ಹೇಗೆ?

ಆಟೋ ಡ್ರೈವರ್ ಶಿವಕುಮಾರ ವಿ ಎಚ್, ತನ್ನ ಸ್ನೇಹಿತನೊಂದಿಗೆ ಮೊಬೈಲ್​ನಲ್ಲಿ ಸಂಭಾಷಣೆ ನಡೆಸಿದ್ದ ಹೊತ್ತಿನಲ್ಲಿ ಯುವತಿಯೊಬ್ಬಳು ಆಟೋದ ಬಳಿ ಬಂದಳು. ಶಿವಕುಮಾರ್ ತನ್ನ ಸ್ನೇಹಿತನಿಂದ ಪಡೆಯಬೇಕಾದ ಹಣದ ಬಗ್ಗೆ ಮಾತನಾಡುತ್ತ ಇಂಥ ಜಾಗದಲ್ಲಿ ಭೇಟಿಯಾಗಿ ಹಣ ಕೊಡುವೆ ಎಂದು ತಿಳಿಸಿದ. ಈ ಯುವತಿಯೂ ತಾನೂ ಅದೇ ಜಾಗಕ್ಕೆ ಹೊರಡಬೇಕಿದೆ ಎಂದಳು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ದೆಹಲಿ ತಿರುಪತಿ ಎಕ್ಸ್​ಪ್ರೆಸ್​ ರೈಲಿನಲ್ಲಿ ‘ಜಿರಳೆದೇವೋಭವ’

ಆಟೋ ಡ್ರೈವರ್ ಶಿವಕುಮಾರ್, ‘ಬೆಳಗ್ಗೆ 9.45ರ ಸುಮಾರಿಗೆ ನನಗೆ ಹಣ ಕೊಡಬೇಕಾಗಿದ್ದ ಸ್ನೇಹಿತನೊಂದಿಗೆ ನಾನು ಮಾತನಾಡುತ್ತಿದ್ದೆ. ಹನುಮಂತನಗರದ ಪಿಇಎಸ್ ಕಾಲೇಜು ಬಳಿ ಹಣ ಕೊಡುವುದಾಗಿ ಹೇಳುತ್ತಿದ್ದ. ಅದೇ ಹೊತ್ತಿಗೆ 20ರ ಹರೆಯದ ಯುವತಿಯೊಬ್ಬಳು ಆಟೋ ಬಳಿ ಬಂದು ನಮ್ಮ ಸಂಭಾಷಣೆಯನ್ನು ಕೇಳಿಸಿಕೊಳ್ಳುತ್ತ ನಿಂತಳು. ನಂತರ ತನ್ನನ್ನು ಪಿಇಎಸ್​ ಕಾಲೇಜಿಗೆ ಡ್ರಾಪ್ ಮಾಡುವಂತೆ ಹೇಳಿದಳು. ನಾನೂ ಅದೇ ಜಾಗಕ್ಕೆ ಹೋಗಬೇಕಾಗಿದ್ದರಿಂದ ತಕ್ಷಣ ಒಪ್ಪಿಕೊಂಡೆ.’

ಇದನ್ನೂ ಓದಿ : Viral Video: ಬಂಡೀಪುರ; ಕಾರ್ ಅಡ್ಡಗಟ್ಟಿ ಸಿನಿಮೀಯ ರೀತಿಯಲ್ಲಿ ದಾಳಿ ಮಾಡಲೆತ್ನಿಸಿದ ಪುಂಡರ ವಿಡಿಯೋ ವೈರಲ್ 

‘ಫೋನ್​ ಪೇ ಇದೆಯೇ? ಎಂದು ಆಕೆ ಕೇಳಿ ನನ್ನ ನಂಬರ್​ ಪಡೆದುಕೊಂಡಳು. ಪಿಇಎಸ್ ಕಾಲೇಜು ತಲುಪಿದಾಗ ಅಲ್ಲಿ ನನ್ನ ಸ್ನೇಹಿತ ಕಾಯುತ್ತಿದ್ದ. ಆಟೋ ಇಳಿಯುವಾಗ ಆಕೆ, ಕಾಲೇಜು ಶುಲ್ಕವನ್ನು ತುಂಬಬೇಕು ಹಾಗಾಗಿ ನನಗೆ ನಗದು ಹಣ ಬೇಕಾಗಿದೆ ಎಂದಳು. ಈಗ ಹಣ ಕೊಟ್ಟರೆ ನಂತರ ನನ್ನ ಫೋನ್​ಪೇಗೆ ವರ್ಗಾಯಿಸುವುದಾಗಿ ಹೇಳಿದಳು. ಮೊದಲು ನೀವು ಹಣವನ್ನು ನನ್ನ ಫೋನ್​ಪೇಗೆ ವರ್ಗಾಯಿಸಿದ ನಂತರವೇ ಹಣ ಕೊಡುತ್ತೇನೆ ಎಂದು ಹೇಳಿದೆ.’

ಇದನ್ನೂ ಓದಿ : Viral Video: ‘ಲಿಪ್​ಸ್ಟಿಕ್ ಆಂಟೀ ಎಲ್ಲದಕ್ಕೂ ಸೈಲಂಟ್ ಸೈಲಂಟ್ ಅಂತಾರೆ’ ಸಿಟ್ಟಿಗೆದ್ದ ಪುಟ್ಟಿ

‘ಆಕೆ ಆಟೋ ಬಿಲ್​ ಸಮೇತ ರೂ. 23,500 ಹಣವನ್ನು ವರ್ಗಾಯಿಸಿದ್ದೇನೆ ಎಂದು ಆನ್​ಲೈನ್​ ರಸೀದಿ ತೋರಿಸಿದಳು. ಹಣ ಸಂದಾಯವಾದ ಬಗ್ಗೆ ನನ್ನ ಮೊಬೈಲಿಗೆ ಇನ್ನೂ ಮೆಸೇಜ್ ಬಂದಿಲ್ಲ ಸ್ವಲ್ಪ ಕಾಯಿರಿ ಎಂದೆ. ತಾನು ಕಾಲೇಜು ಫೀಸ್​ ತುಂಬಬೇಕು, ಏನಾದರೂ ತೊಂದರೆ ಇದ್ದರೆ ಫೋನ್ ಮಾಡಿ ಎಂದು ತನ್ನ ನಂಬರ್ ಕೊಟ್ಟಳು. ನಂತರ ಆಕೆ ಕಾಲೇಜಿನ ಆವರಣ ಪ್ರವೇಶಿಸಿದಳು. ಯಾವುದಕ್ಕೂ ಇರಲಿ ಎಂದು ನಾನು ಇದೆಲ್ಲ ನಡೆಯುತ್ತಿರುವಾಗ ಆಕೆಯ ಫೋಟೋವನ್ನು ನನ್ನ ಮೊಬೈಲ್​ನಿಂದ ತೆಗೆದಿಟ್ಟುಕೊಂಡಿದ್ದೆ.’

ಇದನ್ನೂ ಓದಿ : Viral: ‘ನನ್ನ ಮಾಜಿ ಪ್ರೇಮಿಯೊಂದಿಗೆ ಮಲಗಬೇಕು’ ಹೆಂಡತಿಯ ಕೊನೆಯ ಆಸೆ; ನೆಟ್ಟಿಗರ ಸಲಹೆ ಏನು? 

‘ನಂತರ ಆಕೆಯೊಂದಿಗೆ ಈ ವಿಷಯವಾಗಿ ಮಾತನಾಡಬೇಕೆಂದು ಕಾಲೇಜಿನ ಆವರಣದೊಳಗೆ ಹೋಗಲು ಪ್ರಯತ್ನಿಸಿದೆ. ಆದರೆ ಆ ಯತ್ನ ವಿಫಲವಾಯಿತು. ಉಪಾಯಗಾಣದೆ ಈ ಯುವತಿಯ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಿದೆ’ ಎಂದಿದ್ಧಾರೆ.

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ