Viral: ‘ನನ್ನ ಮಾಜಿ ಪ್ರೇಮಿಯೊಂದಿಗೆ ಮಲಗಬೇಕು’ ಹೆಂಡತಿಯ ಕೊನೆಯ ಆಸೆ; ನೆಟ್ಟಿಗರ ಸಲಹೆ ಏನು?

Last Desire: 'ಕಳೆದ ಎಂಟು ತಿಂಗಳುಗಳಿಂದ ನನ್ನ ಹೆಂಡತಿ ಹಾಸಿಗೆ ಹಿಡಿದಿದ್ದಾಳೆ. ನಾಲ್ಕೈದು ತಿಂಗಳುಗಳಲ್ಲಿ ಆಕೆ ಗಾಲಿಕುರ್ಚಿಯನ್ನು ಅವಲಂಬಿಸಲಿದ್ದಾಳೆ. ಇದೀಗ ಈಕೆಯ ಕೊನೆಯ ಆಸೆ ನನ್ನಲ್ಲಿ ತಲ್ಲಣವನ್ನುಂಟು ಮಾಡಿದೆ.'

Viral: 'ನನ್ನ ಮಾಜಿ ಪ್ರೇಮಿಯೊಂದಿಗೆ ಮಲಗಬೇಕು' ಹೆಂಡತಿಯ ಕೊನೆಯ ಆಸೆ; ನೆಟ್ಟಿಗರ ಸಲಹೆ ಏನು?
ಸಾಂದರ್ಭಿಕ ಚಿತ್ರ
Follow us
ಶ್ರೀದೇವಿ ಕಳಸದ
|

Updated on:Aug 08, 2023 | 11:53 AM

Husband Wife : ‘ನನ್ನ ಮಾಜಿ ಪ್ರಿಯಕರನೊಂದಿಗೆ ಮಲಗಬೇಕು ಎನ್ನಿಸುತ್ತಿದೆ’ ಎಂದು ಗಂಡನ ಬಳಿ ಹೆಂಡತಿ ಹೇಳಿದಾಗ ಗಂಡನ ಮನಸ್ಸು ಎಂಥ ತಲ್ಲಣಕ್ಕೆ ಈಡಾಗಬಹುದು ಯೋಚಿಸಿ. ರೆಡ್ಡಿಟ್​ನಲ್ಲಿ (Reddit) ಈ ವಿಷಯವಾಗಿ ಭಾರೀ ಚರ್ಚೆ ನಡೆಯುತ್ತಿದೆ. ತನ್ನ ಸಾವಿನ ದಿನಗಳನ್ನು ಎಣಿಸುತ್ತಿರುವ ಹೆಂಡತಿಯೊಬ್ಬಳು ತನ್ನ ಗಂಡನಲ್ಲಿ ತನ್ನ ಈ ಕೊನೆಯ ಆಸೆಯನ್ನು ಈಡೇರಿಸುವಂತೆ ಕೇಳಿಕೊಂಡಿದ್ದಾಳೆ. ಸಂದಿಗ್ಧಕ್ಕೆ ಬಿದ್ದ ಗಂಡನಿಗೆ ಏನು ಮಾಡಬೇಕು ಎನ್ನುವುದು ತೋಚದೆ ನೆಟ್ಟಿಗರೆದುರು ಈ ವಿಷಯವನ್ನು ಅಕ್ಷರರೂಪದಲ್ಲಿ ತೆರೆದಿಟ್ಟಿದ್ದಾನೆ.

My dying wife asked me if I’d be okay if she had sex with her ex one last time. I said no. AITAH? (Taken from another page) by u/metallurgyhelp in AITAH

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ಹತ್ತು ವರ್ಷಗಳಿಂದ ನಾವಿಬ್ಬರೂ ಒಟ್ಟಿಗೆ ವಾಸಿಸುತ್ತಿದ್ದೇವೆ. ಆದರೆ ಮಾರಣಾಂತಿಕ ಕಾಯಿಲೆಗೆ ಈಡಾಗಿರುವ ನನ್ನ ಹೆಂಡತಿ  ಬಹಳವೆಂದರೆ 9 ತಿಂಗಳುಗಳ ಕಾಲ ಬದುಕಬಹುದು. ಆದರೆ ಅವಳಿಲ್ಲದ ಜೀವನವನ್ನು ನಾನು ಹೇಗೆ ಕಳೆಯಬಲ್ಲೆ ಎನ್ನುವುದು ಈತನಕ ಊಹಿಸಿಕೊಂಡೂ ಇಲ್ಲ ಯೋಚಿಸಿಯೂ ಇಲ್ಲ. ಆದರೆ ಅವಳ ಕೊನೆಯ ದಿನಗಳು  ಚೆನ್ನಾಗಿರಬೇಕು, ಅವಳ ಯಾವ ಆಸೆಯನ್ನೂ ಪೂರೈಸಬೇಕು. ಅದಕ್ಕಾಗಿ ನಾನು ನನ್ನ ಕೈಲಾದಷ್ಟು ಪ್ರಯತ್ನಿಸಬೇಕು ಎನ್ನುವ ತುಮುಲಕ್ಕೆ ಬಿದ್ದಿದ್ದೇನೆ.’

ಇದನ್ನೂ ಓದಿ : Viral Video: ಕಥಕ್​ನಲ್ಲಿ ಕಾಮ್ ಡೌನ್; ನಿಜಕ್ಕೂ ಇದು ಕಣ್ಣಿಗೆ ಕಿವಿಗೆ ಹಬ್ಬವೇ ಎನ್ನುತ್ತಿರುವ ನೆಟ್ಟಿಗರು

‘ಕಳೆದ ಎಂಟು ತಿಂಗಳುಗಳಿಂದ ಆಕೆ ಹಾಸಿಗೆ ಹಿಡಿದಿದ್ದಾಳೆ. ಇನ್ನು ನಾಲ್ಕೈದು ತಿಂಗಳುಗಳಲ್ಲಿ ಆಕೆ ಗಾಲಿಕುರ್ಚಿಯನ್ನು ಅವಲಂಬಿಸಬೇಕಾಗುತ್ತದೆ ಎಂದು ಡಾಕ್ಟರ್ ಹೇಳಿದ್ದಾರೆ. ಆದರೆ ಇಂಥ ಸ್ಥಿತಿಯಲ್ಲಿ ಆಕೆ, ‘ತನ್ನ ಮಾಜಿ ಪ್ರಿಯಕರನೊಂದಿಗೆ ಲೈಂಗಿಕವಾಗಿ ತೊಡಗಿಕೊಳ್ಳಬೇಕು’ ಎಂದು ನನ್ನಲ್ಲಿ ಕೇಳಿಕೊಂಡಿದ್ದಾಳೆ. ನಿಜಕ್ಕೂ ಇದು ನನ್ನಲ್ಲಿ ಆಘಾತವನ್ನುಂಟು ಮಾಡಿದೆ. ಯಾಕೆ ಹೀಗೆ ಬಯಸುತ್ತಿದ್ದೀ ಎಂದು ಆಕೆಯನ್ನು ಕೇಳಿದಾಗ, ತನಗೆ ದೈಹಿಕವಾಗಿ ತೃಪ್ತಿ ನೀಡುವಂಥ ವ್ಯಕ್ತಿ ಅವನೇ. ಲೈಂಗಿಕತೆ ಒಮ್ಮೊಮ್ಮೆ ಭಾವನಾತ್ಮಕವಾಗಿಯೂ ನಮ್ಮನ್ನು ಹೇಗೆ ಪೊರೆಯುತ್ತದೆ ಎನ್ನುವುದನ್ನು ಆಕೆ ವಿವರಿಸಿದಳು.’

ಇದನ್ನೂ ಓದಿ : Viral Video: ರಿಚ್ಚಿ ಸಿನೆಮಾದ ಅಂಕಿತಾ ಕುಂಡು ಹಾಡಿರುವ ‘ಮೊಗದಲ್ಲಿ’ ನಾಳೆ ಬಿಡುಗಡೆ

‘ಇದಾದ ನಂತರ ನನ್ನೊಳಗೆ ನಡೆಯುತ್ತಿರುವ ತುಮುಲವನ್ನು ವಿವರಿಸುವಲ್ಲಿ ನಾನು ಸೋಲುತ್ತಿದ್ದೇನೆ. ಸಾವಿಗೆ ಹತ್ತಿರವಾಗುತ್ತಿರುವ ಆಕೆ ನನ್ನ ಬಗ್ಗೆ ಏನೇ ಹೇಳಿದರೂ, ಅವಳಿಚ್ಛೆಯಂತೆ ಆಕೆ ಬದುಕಲು ಅನುವು ಮಾಡಿಕೊಡಬೇಕಾದ ಅನಿವಾರ್ಯತೆ ಉಂಟಾಗಿದೆ. ಈ ವಿಷಯವಾಗಿ ಏನು ಹೇಳಬೇಕು ಎನ್ನುವುದು ನನಗೆ ಗೊತ್ತಿದೆ, ಆದರೆ ಇದು ಸರಿಯೋ ತಪ್ಪೋ ಎನ್ನುವ ಗೊಂದಲವಿದೆ. ಆಕೆಯ ಇಂಗಿತದಿಂದಾಗಿ ನನಗೆ ಬಹಳ ನೋವಾಗಿದೆ. ಈ ಬಗೆಗಿನ ಮಾತುಕತೆಯಲ್ಲಿ ಆಕೆಯನ್ನೂ ನೋಯಿಸಿದ್ದೇನೆ ಎನ್ನಿಸುತ್ತಿದೆ. ಆದರೆ ಇದಕ್ಕೆ ನನ್ನ ಒಪ್ಪಿಗೆ ಇಲ್ಲ.

ಇದನ್ನೂ ಓದಿ : Viral Video: ವೊರ್ಲಿ ಲಿಂಕ್​ನಿಂದ ಗೇಟ್​ವೇ ಆಫ್​ ಇಂಡಿಯಾ; 36 ಕಿಮೀ ಈಜಿ ತಲುಪಿದ ಸುಚೇತಾ ಬರ್ಮನ್

ಇದನ್ನು ಓದಿದ ನೆಟ್ಟಿಗರು ತಮಗೆ ತೋಚಿದಂತೆ ಸಲಹೆಗಳನ್ನು ನೀಡಿದ್ದಾರೆ. ಅವಳ ಸಂತೋಷವನ್ನು ನೀವು ಬಯಸುತ್ತಿದ್ದರೆ ಅವಳಿಗೆ ವಿಚ್ಛೇದನ ನೀಡಿ ಎಂದಿದ್ದಾರೆ ಒಬ್ಬರು. ಅವಳ ಕೊನೆಯ ದಿನಗಳನ್ನು ಆಕೆ ಅವಳಿಚ್ಛೆಯಂತೆ ಕಳೆಯಲಿ, ಶಾಂತಿ ಮತ್ತು ಸಮಾಧಾನದಿಂದ ಮುಕ್ತಿ ಕಾಣಲಿ ಎಂದಿದ್ದಾರೆ ಇನ್ನೊಬ್ಬರು. ಈಗಾಗಲೇ ನಿಮ್ಮ ಮನಸ್ಸು ಮುರಿದಿರುತ್ತದೆ, ನೀವು ವಿಚ್ಛೇದನ ನೀಡಿ ಅವಳಿಚ್ಛೆಯಂತೆ ಆಕೆ ನಿಮ್ಮಿಚ್ಛೆಯಂತೆ ನೀವು ಬದುಕಿ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಚೆನ್ನೈ; ಮೀನುಗಾರರ ಬದುಕನ್ನು ಮ್ಯೂರಲ್ ಆರ್ಟ್​ನಲ್ಲಿ ಹಿಡಿದಿಟ್ಟ​ ಮೆಕ್ಸಿಕೋದ ಪಾವೊಲಾ ಡೆಲ್ಫಿನ್​

ಇನ್ನೂ ಕೆಲವರು ಈಕೆ ಕೃತಘ್ನಳು, ಸಾವಿಗೆ ಹತ್ತಿರವಾಗುತ್ತಿದ್ದಾಗಲೂ ತನ್ನ ಸ್ವಾರ್ಥವನ್ನು ಬಯಸುತ್ತಿದ್ದಾಳೆ. ಅಷ್ಟೇ ಅಲ್ಲದೆ ಜೊತೆಗಿರುವ ಗಂಡನನ್ನು ಗೌರವಿಸುತ್ತಿಲ್ಲ. ಇದು ದೌರ್ಜನ್ಯಕ್ಕೆ ಸಮಾನ ಎನ್ನುತ್ತಿದ್ದಾರೆ. ಇದನ್ನು ಓದಿದ ನೀವು ಏನು ಹೇಳುತ್ತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:50 am, Tue, 8 August 23

Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್