AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವೊರ್ಲಿ ಲಿಂಕ್​ನಿಂದ ಗೇಟ್​ವೇ ಆಫ್​ ಇಂಡಿಯಾ; 36 ಕಿಮೀ ಈಜಿ ತಲುಪಿದ ಸುಚೇತಾ ಬರ್ಮನ್

Swimming : ಆ ಉಪ್ಪುನೀರಿನೊಳಗೆ, ಸುಡುಬಿಸಿಲಿನಲ್ಲಿ, ಅಪಾಯಕಾರಿ ಸಮುದ್ರ ಜೀವಿಗಳ ಮಧ್ಯೆ ನೀವು ಇಷ್ಟು ದೂರವನ್ನು ಈಜಿ ಕ್ರಮಿಸಿದ್ದು ನಿಜಕ್ಕೂ ಅಸಾಮಾನ್ಯ! ಎಂದು ಈ ಮಹಿಳೆಯನ್ನು ಅಭಿನಂದಿಸುತ್ತಿದೆ ನೆಟ್​ಮಂದಿ.

Viral Video: ವೊರ್ಲಿ ಲಿಂಕ್​ನಿಂದ ಗೇಟ್​ವೇ ಆಫ್​ ಇಂಡಿಯಾ; 36 ಕಿಮೀ ಈಜಿ ತಲುಪಿದ ಸುಚೇತಾ ಬರ್ಮನ್
ಈಜುಗಾರ್ತಿ ಸುಚೇತಾ ದೇಬ್ ಬರ್ಮನ್​
Follow us
ಶ್ರೀದೇವಿ ಕಳಸದ
|

Updated on: Aug 07, 2023 | 5:34 PM

Mumbai : ವರ್ಲಿ ಸಮುದ್ರದ ಲಿಂಕ್​ನಿಂದ ಮುಂಬೈನ ಗೇಟ್​ವೇ ಆಫ್ ಇಂಡಿಯಾ ​ತನಕ ಅಂದರೆ ಸುಮಾರು 36 ಕಿ.ಮೀ ಈಜಿ ಇದೀಗ ಸುದ್ದಿಯಲ್ಲಿದ್ದಾರೆ ಈಜುಗಾರ್ತಿ ಸುಚೇತಾ ದೇಬ್​ ಬರ್ಮನ್​ (Sucheta Deb Burman). ಆ. 4ರಂದು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಇದೀಗ ಅದು ವೈರಲ್ ಆಗುತ್ತಿದೆ. ಇವರ ಈ ಸಾಧನೆಯನ್ನು ನೋಡಿದ ನೆಟ್ಟಿಗರು ಅಚ್ಚರಿಗೆ ಒಳಗಾಗಿದ್ದಾರೆ. ಇವರ ಪ್ರಯತ್ನವನ್ನು ಶ್ಲಾಘಿಸುತ್ತಿದ್ದಾರೆ. ಸುಮಾರು 62,000 ಜನರು ಈ ವಿಡಿಯೋಗೆ ಲೈಕ್ ಹಾಕಿದ್ದಾರೆ. ಈತನಕ ಸುಮಾರು 6 ಲಕ್ಷ ಜನರು ಈ ವಿಡಿಯೋ ನೋಡಿದ್ದು ಅನೇಕರು ತಮ್ಮ ವಿಚಾರ, ಪ್ರಶ್ನೆಗಳನ್ನು ಈ ವಿಡಿಯೋದಡಿ ಹಂಚಿಕೊಂಡಿದ್ದಾರೆ.

View this post on Instagram
ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

A post shared by Sucheta Deb Burman (@suchetadebburman)

ನಿಜವಾಗಿಯೂ ಇದು ಸ್ಫೂರ್ತಿದಾಯಕವಾಗಿದೆ ಎಂದು ಅನೇಕರು ಹೇಳಿದ್ದಾರೆ. ಸಮುದ್ರದ ನೀರಿನಿಂದ ನಿಮ್ಮ  ಚರ್ಮಕ್ಕೆ ಹಾನಿಯಾಗಿಲ್ಲವೆ? ಎಂದು ಕೇಳಿದ್ದಾರೆ ಒಬ್ಬರು. ಖಂಡಿತ! ಬಿಸಿಲಿನಿಂದಾಗಿ ಚರ್ಮವೂ ಕಪ್ಪಗಾಗಿದೆ, ಬೆನ್ನೂ ಸ್ವಲ್ಪ ಸುಟ್ಟುಹೋಗಿದೆ ಎಂದಿದ್ದಾರೆ ಸುಚೇತನಾ. ನಾನು ಕೂಡ ಒಬ್ಬ ಈಜುಗಾರ, 36 ಕಿ.ಮೀ. ಈಜಬೇಕೆಂದರೆ ಇದರ ಹಿಂದಿನ ತಯಾರಿ ಎಷ್ಟು ಕಷ್ಟಕರವಾಗಿರುತ್ತದೆ ಎಂದು ನನಗೆ ಅರ್ಥವಾಗುತ್ತದೆ. ನಾನು 7.5 ಕಿ.ಮೀ ಈಜಲು ಪ್ರತೀ ದಿನ 6 ಗಂಟೆಗಳ ಕಾಲ ಒಟ್ಟು 3 ತಿಂಗಳುಗಳ ತನಕ ಈಜು ಅಭ್ಯಾಸ ಮಾಡುತ್ತಿದ್ದೆ. ನಿಮ್ಮ ಈ ಸಾಧನೆಗೆ ಗೌರವ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಚೆನ್ನೈ; ಮೀನುಗಾರರ ಬದುಕನ್ನು ಮ್ಯೂರಲ್ ಆರ್ಟ್​ನಲ್ಲಿ ಹಿಡಿದಿಟ್ಟ​ ಮೆಕ್ಸಿಕೋದ ಪಾವೊಲಾ ಡೆಲ್ಫಿನ್​

ಶಾರ್ಕ್ ಮತ್ತು ಮೊಸಳೆಗಳಿಗೆ ನಿಮ್ಮ ಈಜುವಿಕೆಯ ಬಗ್ಗೆ ಗೊತ್ತಿತ್ತೆ, ಅಥವಾ ಅಥವಾ ಅವುಗಳು ನಿಮ್ಮನ್ನು ಹಿಡಿಯದಷ್ಟು ವೇಗದಲ್ಲಿ ನೀವು ಸಾಗಿದಿರೆ? ಎಂದು ಕೇಳಿದ್ದಾರೆ ಇನ್ನೊಬ್ಬರು. ನಿಮ್ಮ ಶಕ್ತಿ ಮತ್ತು ಸಾಧನೆಯ ಬಗ್ಗೆ ಅಪಾರ ಹೆಮ್ಮೆ ಅಭಿಮಾನ ಉಂಟಾಗುತ್ತಿದೆ. ನೀವು ಮತ್ತಷ್ಟು ಸಾಧನೆಯಲ್ಲಿ ತೊಡಗಿಕೊಂಡು ನಿಮ್ಮ ಕನಸನ್ನು ನನಸು ಮಾಡಿಕೊಳ್ಳಿ ಎಂದು ಹಾರೈಸಿದ್ದಾರೆ ಅನೇಕರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ