AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಬ್ಯಾಕ್​ಪ್ಯಾಕ್​ ಹೊತ್ತು ಪ್ರವಾಸಕ್ಕೆ ಹೊರಟ ಪೆಂಗ್ವಿನ್​​ಗಳ ವಿಡಿಯೋ

Backpack : ಇವರೆಲ್ಲ ಎಲ್ಲಿಗೆ ಪ್ರವಾಸಕ್ಕೆ ಹೊರಟಿದ್ದಾರೆ? ಇಷ್ಟು ಮುದ್ದಾದ ಬ್ಯಾಕ್​ಪ್ಯಾಕ್​​ ನಮಗೂ ಬೇಕು ಜೊತೆಗೆ ಈ ಪೆಂಗ್ವಿನ್​​​ಗಳೂ ಎಂದು ನೆಟ್ಟಿಗರೆಲ್ಲ ಮತ್ತೆ ಮತ್ತೆ ಈ ವಿಡಿಯೋ ನೋಡುವಲ್ಲಿ ತಲ್ಲೀನರಾಗಿದ್ದಾರೆ.

Viral: ಬ್ಯಾಕ್​ಪ್ಯಾಕ್​ ಹೊತ್ತು ಪ್ರವಾಸಕ್ಕೆ ಹೊರಟ ಪೆಂಗ್ವಿನ್​​ಗಳ ವಿಡಿಯೋ
ಬಣ್ಣಬಣ್ಣದ ಬ್ಯಾಕ್​ಪ್ಯಾಕ್​ ಹೊತ್ತು ಪ್ರವಾಸಕ್ಕೆ ಹೊರಟಿರುವ ಪೆಂಗ್ವಿನ್​​ಗಳು!
ಶ್ರೀದೇವಿ ಕಳಸದ
|

Updated on: Aug 07, 2023 | 12:25 PM

Share

Penguin : ಬಣ್ಣಬಣ್ಣದ ಬ್ಯಾಕ್​ಪ್ಯಾಕ್​ (Backpack) ಹೊತ್ತ ಪೆಂಗ್ವಿನ್​ಗಳು ಎಲ್ಲಿಗೆ ಪ್ರವಾಸಕ್ಕೆ ಹೊರಟಿವೆ? ಎಂದು ಕೆಲವರು ಕುತೂಹಲ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಈ ಪುಟ್ಟ ಬ್ಯಾಗಿನೊಳಗೆ ಏನೆಲ್ಲ ಸಾಮಾನುಗಳಿರಬಹುದು ಎಂದು ಊಹಿಸುತ್ತಿದ್ದಾರೆ ಕೆಲವರು. ಎಲ್ಲಿ ಮತ್ತು ಹೇಗೆ ಇವರು ಪ್ರಯಾಣಿಸುತ್ತಾರೆ ಎಂದು ಒಂದಿಷ್ಟು ಜನ ಯೋಚಿಸುತ್ತಿದ್ದಾರೆ. ಏನೇ ಆಗಲಿ ಇದು ಬಹಳ ಮುದ್ದಾದ ವಿಡಿಯೋ. ಮತ್ತೆ ಮತ್ತೆ ನೋಡುತ್ತಿದ್ದೇನೆ ಎಂದು ಅನೇಕರು ಹೇಳಿದ್ದಾರೆ.

ಆ.5 ರಂದು ‘ಪೆಂಗ್ವಿನ್​​ಗಳು ಪ್ರವಾಸಕ್ಕೆ ಹೊರಡುತ್ತಿವೆ’ ಎಂಬ ಶೀರ್ಷಿಕೆಯಡಿ ಈ ವಿಡಿಯೋ ಅನ್ನು ಪೋಸ್ಟ್ ಮಾಡಲಾಗಿದ್ದು, ಈಗಾಗಲೇ 21.6 ಮಿಲಿಯನ್ ಜನರು ನೋಡಿದ್ದಾರೆ. 40,000ಕ್ಕಿಂತಲೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. 2.7 ಮಿಲಿಯನ್ ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಈ ವಿಡಿಯೋ ನೋಡಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral Video: ನಾಯಿಗಾಯನ; ತೀರ್ಪುಗಾರರನ್ನು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ ಈ ವಿಡಿಯೋ

ಇದು ಅತ್ಯಂತ ಅದ್ಭುತವಾದ ವಿಡಿಯೋ, ಇವರು ಎಲ್ಲಿ ಹೋಗುತ್ತಿದ್ದಾರೋ ನಾನೂ ಕೂಡ ಇಲ್ಲಿಗೆ ಹೋಗಲು ಬಯಸುತ್ತೇನೆ, ನನಗೂ ಇಂಥ ಪುಟ್ಟ ಬ್ಯಾಕ್​ಪ್ಯಾಕ್ ಬೇಕು ಎಂದಿದ್ದಾರೆ ಒಬ್ಬರು. ಎಂಥ ಮನೋಹರವಾದ ದೃಶ್ಯವಿದು ಎಂದು ಇನ್ನೊಬ್ಬರು ಹೇಳಿದ್ದಾರೆ. ನನ್ನ ಮಗಳು ಹಠ ಮಾಡುತ್ತಿದ್ದಳು, ಈ ವಿಡಿಯೋ ತೋರಿಸಿದೆ ಬಹಳ ಖುಷಿ ಪಟ್ಟಳು. ಆದರೆ ಇಂತ ಬ್ಯಾಗ್​ ಬೇಕು ಎಂದು ಮತ್ತೆ ಅಳಲು ಶುರು ಮಾಡಿದಳು. ಎಲ್ಲಿಂದ ತರುವುದು ಇಷ್ಟು ಪುಟ್ಟ ಬ್ಯಾಗ್​ ಎಂದು ಕೇಳಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಚುಂಬನವೃತ್ತಾಂತ; ಆಕೆ ಕೊಟ್ಟಿದ್ದನ್ನು ಆಕೆಗೇ ಮರಳಿಸಿತು ಹಾವು, ಮುಂದೆ?

ಈ ಬ್ಯಾಗ್​ ನಮಗೂ ಬೇಕು, ನಮಗೂ ಬೇಕು ಎಂದು ಒಕ್ಕೊರಲಿನಿಂದ ಹೇಳುತ್ತಿದ್ಧಾರೆ ನೆಟ್ಟಿಗರು. ಈ ಬ್ಯಾಗ್​ ಸಮೇತ ಈ ಮರಿಗಳು ನಮ್ಮನೆಗೆ ಬಂದರೆ ಬಹಳ ಖುಷಿ ಎಂದು ಕೆಲವರು ಹೇಳುತ್ತಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು