Viral Video: ನಾಯಿಗಾಯನ; ತೀರ್ಪುಗಾರರನ್ನು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ ಈ ವಿಡಿಯೋ

Singing : ನಾಯಿಯಂತೆ ಹಾಡುವುದನ್ನು ಕಲಿ ಬೊಗಳುವುದನ್ನು ಬಿಟ್ಟು ಎಂದು ಮನುಷ್ಯನಿಗೆ ಹೇಳುವ ಕಾಲ ಬಂದರೂ ಬಂದೀತೇ ಇನ್ನು. ರಿಯಾಲಿಟಿ ಷೋ ಒಂದರಲ್ಲಿ ನಡೆದ ನಾಯಿಯ ಸಂಗೀತ ಸಭೆ ಕೇಳಿ.

Viral Video: ನಾಯಿಗಾಯನ; ತೀರ್ಪುಗಾರರನ್ನು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ ಈ ವಿಡಿಯೋ
ರಿಯಾಲಿಟಿ ಷೋ ಒಂದರಲ್ಲಿ ಹಾಡುತ್ತಿರುವ ನಾಯಿ
Follow us
ಶ್ರೀದೇವಿ ಕಳಸದ
|

Updated on: Aug 05, 2023 | 11:16 AM

Dog : ಸುತ್ತಲೂ ಕಿಕ್ಕಿರಿದ ಪ್ರೇಕ್ಷಕರು ನಟ್ಟನಡುವೆ ತೀರ್ಪುಗಾರರು. ವೇದಿಕೆಯ ಮೇಲಿರುವ ಈ ನಾಯಿ ಎಲ್ಲರನ್ನೂ ಒಮ್ಮೆ ಕಣ್ತುಂಬಿಕೊಂಡು ಗಾಯನವನ್ನು ಶುರು ಮಾಡುತ್ತದೆ. ಕೀಬೋರ್ಡ್​ನ ಸ್ವರಗಳಿಗೆ ತಕ್ಕಂತೆ ತನ್ನ ಧ್ವನಿಯನ್ನು ಸೇರಿಸುತ್ತಾ ಹೋಗುತ್ತದೆ. ಆರಂಭದಲ್ಲಿ ಇದು ತುಸು ಢಾಳಾಗಿಯೇ ಶೋಕಗೀತೆಯ ಛಾಯೆಯನ್ನು ಹೊಮ್ಮಿಸುತ್ತದೆ. ಕ್ರಮೇಣ ಧ್ವನಿಯಲ್ಲಿ ಮಾಧುರ್ಯವನ್ನು (Melody) ತಂದುಕೊಳ್ಳುತ್ತ ತೀರ್ಪುಗಾರರನ್ನು, ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by FUNNY ANIMALS (@doggokittens)

ಆಟೋ ಟ್ಯೂನ್ ಬಳಸುತ್ತಿರುವ ಇತರೇ ಗಾಯಕರಿಗಿಂತ ಈ ನಾಯಿಯ ಗಾಯನ ಅತ್ಯುತ್ತಮವಾಗಿದೆ ಎಂದಿದ್ದಾರೆ ಈ ವಿಡಿಯೋ ನೋಡಿದ ನೆಟ್ಟಿಗರು. ಈ ಗಾಯಕರಿಗೆ ನಾನು ಆಸ್ಕರ್, ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು ಇಚ್ಛಿಸುತ್ತೇನೆ ಎಂದು ಒಬ್ಬರು ಹೇಳಿದ್ದಾರೆ. ನಿಜಕ್ಕೂ ಇದು ಅದ್ಭುತವಾದ ವಿಕಾಸ, ಇನ್ನೇನು ಕೆಲ ವರ್ಷಗಳಲ್ಲೇ ಇವರುಗಳೆಲ್ಲ ಮಾತನಾಡಲು ಶುರು ಮಾಡಬಹುದೇನೋ ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಮಕ್ಕಳಿಂದಾಗಿ ಫಜೀತಿಗೆ ಬಿದ್ದ ಕರಡಿಯಮ್ಮ; ಅಪ್ಪನೆಲ್ಲಿ ಎನ್ನುತ್ತಿರುವ ನೆಟ್ಟಿಗರು

ಬೆಕ್ಕುಗಳಿಗಿಂತ ನಿಜಕ್ಕೂ ನಾಯಿಗಳು ದೇವತೆಗಳೇ. ಬೆಕ್ಕುಗಳಿಗೆ ನಿಷ್ಠೆಯಿಲ್ಲ, ಕೃತಜ್ಞತೆಯಿಲ್ಲ, ಸ್ವಾರ್ಥತನ ಬೇರೆ. ಹುಲಿಸಿಂಹಗಳ ಜಾತಿಗೆ ಸೇರಿದ ಬೆಕ್ಕು ನಿಜಕ್ಕೂ ಸಾಕುಪ್ರಾಣಿಯೇ ಅಲ್ಲ. ಆದರೆ ನಾಯಿ ಅಪ್ಪಟ ಸಾಕುಪ್ರಾಣಿ ಎಂದಿದ್ದಾರೆ ಒಬ್ಬರು. ನಿಜಕ್ಕೂ ಈ ನಾಯಿಯ ಗಾಯನ ಕೇಳಿ ನಾನಂತೂ ಅಚ್ಚರಿಗೆ ಒಳಗಾಗಿದ್ದೇನೆ. ಅದೆಷ್ಟು ಸೂಕ್ಷ್ಮತೆಯಿಂದ ಅದು ಧ್ವನಿಯ ಏರಿಳಿತವನ್ನು ಹೊಮ್ಮಿಸುತ್ತದೆ. ಇದಕ್ಕೆ ಹೇಗೆ ತರಬೇತಿ ನೀಡಿದ್ದಾರೆಯೋ ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral: ಆನ್​ಲೈನ್​ ಆರ್ಡರ್​; ಈ ಸ್ಟಿಕರ್​ಗೆ ಕೂದಲು ಅಂಟಿಕೊಂಡಿರುವುದು ಹೇಗೆ?

ಸೂಕ್ಷ್ಮ ಸಂವೇದನೆಯುಳ್ಳ ನಾಯಿಗಳಿಗೆ ಮನುಷ್ಯನ ಸಾಂಗತ್ಯ ಸದಾ ಬೇಕು. ಹಾಗೆಯೇ ಮನುಷ್ಯನಿಗೂ. ಉಳಿದ ಸಾಕುಪ್ರಾಣಿಗಳಿಗಿಂತ ನಾಯಿಯೊಂದಿಗೆ ಮನುಷ್ಯ ಹೆಚ್ಚು ಭಾವನಾತ್ಮಕವಾಗಿ ಬೆರೆಯಬಲ್ಲ. ಸಾಧ್ಯವಾದ ಕೌಶಲಗಳನ್ನು ಕಲಿಸಿಕೊಡಬಲ್ಲ. ನೆಟ್ಟಿಗರೊಬ್ಬರು ಹೇಳಿದಂತೆ ನಾಳೆ ನಾಯಿಗಳೂ ಮಾತು ಕಲಿತರೆ ಹೇಗಿರುತ್ತದೆ ಕಲ್ಪಿಸಿಕೊಳ್ಳಿ! ಹಾಡಿಕೊಂಡಿರುವುದೇ ವಾಸಿ ಅಲ್ಲವೆ? ಮಾತು ಬಂದರೆ ಹಾಡು ಮರೆಯುತ್ತದೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ