Viral Video: ‘ಮೊದಲ ಸಲ ಉದ್ಯಾನಕ್ಕೆ ಬಂದ ಟೋಕೋ’ ನಾಯಿಯಾಗಲು ರೂ 12 ಲಕ್ಷ ವ್ಯಯಿಸಿದ ಜಪಾನಿಗ

Toco : 'ಹೊರಗೆ ಕಾಲಿಡಲು ಆರಂಭದಲ್ಲಿ ಭಯವಾಯಿತು. ಆದರೆ ಉದ್ಯಾನದಲ್ಲಿ ಜನರು ನನ್ನನ್ನು ಪ್ರೀತಿಯಿಂದ ಕಾಣತೊಡಗಿದರು, ಒಂದಿಷ್ಟು ನಾಯಿಗಳೂ ಸ್ನೇಹ ಹಸ್ತ ಚಾಚಿದವು. ಅಂತೂ ನನ್ನ ಜೀವಮಾನದ ಕನಸು ಈಡೇರಿದೆ'

Viral Video: 'ಮೊದಲ ಸಲ ಉದ್ಯಾನಕ್ಕೆ ಬಂದ ಟೋಕೋ' ನಾಯಿಯಾಗಲು ರೂ 12 ಲಕ್ಷ ವ್ಯಯಿಸಿದ ಜಪಾನಿಗ
ಟೋಕೊ ಸಾರ್ವಜನಿಕ ಉದ್ಯಾನದಲ್ಲಿ ಕಾಣಿಸಿಕೊಂಡಾಗಿನ ಸಂದರ್ಭ
Follow us
|

Updated on: Jul 31, 2023 | 11:28 AM

Japan : ಪ್ರತಿಯೊಬ್ಬರಿಗೂ ಜೀವಮಾನದಲ್ಲಿ ಕನಸುಗಳು ಇದ್ದೇ ಇರುತ್ತವೆ. ಸಾಧ್ಯವಾದಷ್ಟು ಕನಸುಗಳು ವಾಸ್ತವಕ್ಕೆ ಹತ್ತಿರವಾಗಿಯೇ ಇರುತ್ತವೆ. ಇನ್ನುಳಿದವು ಅವಾಸ್ತವ. ಆದರೆ ಈ ಅವಾಸ್ತವಿಕ ಕನಸುಗಳನ್ನೂ ಸಹ ಕೆಲವರು ನನಸಾಗಿಸಿಕೊಳ್ಳುತ್ತಾರೆಂದರೆ!? ಜಪಾನಿನ ವ್ಯಕ್ತಿಯೊಬ್ಬ ತನ್ನ ಜೀವಮಾನದ ಕನಸನ್ನು ನನಸು ಮಾಡಿಕೊಂಡು ಇದೀಗ ಭಾರೀ ಸುದ್ದಿಯಲ್ಲಿದ್ದಾನೆ. ತಾನು ನಾಯಿಯಂತೆ ಕಾಣಿಸಿಕೊಳ್ಳಬೇಕೆನ್ನುವ ತೀವ್ರ ಹಂಬಲವನ್ನು ನೆರವೇರಿಸಿಕೊಳ್ಳಲು ಆತ ಖರ್ಚು ಮಾಡಿದ್ದು ಬರೋಬ್ಬರಿ ರೂ. 12 ಲಕ್ಷ! ಟೋಕೋ (Toco, Border Collie) ತನ್ನ ಪೋಷಕರ ಜೊತೆ ಅಂತೂ ಸಾರ್ವಜನಿಕ ಉದ್ಯಾನದಲ್ಲಿ ಓಡಾಡಿಕೊಂಡು ಫೋಟೋ ವಿಡಿಯೋ ಮಾಡಿಸಿಕೊಂಡು ಒಂದಿಷ್ಟು ನಾಯಿಗಳೊಂದಿಗೆ ಗೆಳೆತನವನ್ನೂ ಕುದುರಿಸಿಕೊಂಡು ಬಂದಿದ್ದಾನೆ.

ಯೂಟ್ಯೂಬ್​ನಲ್ಲಿ 30,000 ಸಬ್​ಸ್ಕ್ರೈಬರ್ಸ್ ಹೊಂದಿರುವ ಟೋಕೋ ಉದ್ಯಾನದಲ್ಲಿ ಮೋಜು ಮಾಡುತ್ತ, ಆಹಾರಕ್ಕಾಗಿ ಸರ್ಕಸ್ಸು ಮಾಡುತ್ತ ನೆಟ್ಟಿಗರ ಗಮನ ಸೆಳೆದಿದ್ದಾನೆ. ಉದ್ಯಾನದಲ್ಲಿರುವ ಜನರು ಇವನನ್ನು ಅಚ್ಚರಿಯಿಂದ ನೋಡಿದ್ಧಾರೆ. ಇವ ನಮ್ಮವನೇ! ಎಂದು ನಾಯಿಗಳು ಹತ್ತಿರ ಬಂದು ಆಪ್ತತೆ ತೋರಿಸಿವೆ. ಚಿಕ್ಕಂದಿನಿಂದಲೂ ನಾನು ಪ್ರಾಣಿಯಾಗಬೇಕು ಎಂಬ ಕನಸನ್ನು ಹೊಂದಿದ್ದೆ. ಅದೀಗ ನನಸಾಗಿದೆ ಎಂದಿದ್ದಾನೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ಕಾವಾಲಾ; ತಮನ್ನಾಗೇ ಕಾಂಪಿಟಿಷನ್ನು ಬ್ರೋ; ಮಂಡೇ ಬ್ಲ್ಯೂಸ್​ ಮಂಡೆಯಿಂದಾನೇ ಮಾಯ! 

ನಾನು ನಾಯಿಯಾಗಿ ರೂಪಾಂತರಗೊಳ್ಳುವುದು ನನ್ನ ಸಹೋದ್ಯೋಗಿಗಳಿಗೆ ವಿಚಿತ್ರವೆನ್ನಿಸುತ್ತದೆ. ಹಾಗಾಗಿ ಅವರಿಗೆ ತಿಳಿಯಬಾರದೆಂದೇ ನಾನು ನನ್ನ ಮುಖವನ್ನು ಬಹಿರಂಗಪಡಿಸಲಾರೆ ಎಂದು ಪತ್ರಕರ್ತರಿಗೆ ಟೋಕೋ ತಿಳಿಸಿದ್ದಾನೆ. ಟೋಕೋನ ಬಗ್ಗೆ ಆತನ ಕುಟುಂಬದವರು ಮೊದಲಿಗೆ ಆಘಾತ ವ್ಯಕ್ತಪಡಿಸಿದರು. ಟೋಕೋ ಕೂಡ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಲ್ಲಿ ಭಯಗೊಂಡ.

ಇದನ್ನೂ ಓದಿ : Viral Video: ಟ್ವಿಟರ್ ಪ್ರಧಾನ ಕಚೇರಿಯ ಮೇಲೆ ಎಕ್ಸ್​ ಲೋಗೋ; ಭವಿಷ್ಯ ಉಜ್ವಲವಾಗಿದೆ ಎಂದ ನೆಟ್ಟಿಗರು

ಟಿವಿ ಜಾಹೀರಾತು, ಸಿನೆಮಾಗಳಿಗೆ ವೇಷಭೂಷಣ ತಯಾರಿಸುವ ಜಪಾನಿನ ಕಂಪೆನಿ ಝೆಪೆಟ್ಟೋ ಟೊಕೊಗೆ ನಾಯಿಯ ವೇಷವನ್ನು ವಿನ್ಯಾಸ ಮಾಡಿದೆ. ಇದನ್ನು ನೋಡಿದ ನೆಟ್ಟಿಗರು, ಖಂಡಿತ ಇದು ನಾಯಿಯಂತೆಯೇ ಕಾಣುತ್ತದೆ. ಮನುಷ್ಯನೆಂದು ಹೇಳಲು ಸಾಧ್ಯವೇ ಇಲ್ಲ ಎಂದಿದ್ದಾರೆ. ನೀವೇನಂತೀರಿ?

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಪ್ರತಾಪ್ ಕುಡಿತದ ದಾಸನಾಗಿದ್ದ, ಮಕ್ಕಳಿಲ್ಲದ ಕೊರಗು ಕಾಡುತಿತ್ತು: ಪಾಟೀಲ್
ಪ್ರತಾಪ್ ಕುಡಿತದ ದಾಸನಾಗಿದ್ದ, ಮಕ್ಕಳಿಲ್ಲದ ಕೊರಗು ಕಾಡುತಿತ್ತು: ಪಾಟೀಲ್
ಜು.12ಕ್ಕೆ ದರ್ಶನ್ ನಟನೆಯ ‘ಶಾಸ್ತ್ರಿ’ ಮರು ಬಿಡುಗಡೆ; ಏನಿದು ಪ್ಲ್ಯಾನ್?
ಜು.12ಕ್ಕೆ ದರ್ಶನ್ ನಟನೆಯ ‘ಶಾಸ್ತ್ರಿ’ ಮರು ಬಿಡುಗಡೆ; ಏನಿದು ಪ್ಲ್ಯಾನ್?
ಉಡುಪಿಯಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆಯ ವಿಡಿಯೋ ವೈರಲ್
ಉಡುಪಿಯಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆಯ ವಿಡಿಯೋ ವೈರಲ್
ರಷ್ಯಾಗೆ ಆಗಮಿಸಿದ ಮೋದಿಗೆ ಭಾರತೀಯರಿಂದ ನೃತ್ಯದ ಮೂಲಕ ಅದ್ದೂರಿ ಸ್ವಾಗತ
ರಷ್ಯಾಗೆ ಆಗಮಿಸಿದ ಮೋದಿಗೆ ಭಾರತೀಯರಿಂದ ನೃತ್ಯದ ಮೂಲಕ ಅದ್ದೂರಿ ಸ್ವಾಗತ
ಮಹಾರಾಷ್ಟ್ರ: ಉಕ್ಕಿದ ಹಿರಣ್ಯಕೇಶಿ ನದಿ, ಬೆಳಗಾವಿ ಗಡಿಭಾಗಕ್ಕೆ ಹರಿದ ನೀರು
ಮಹಾರಾಷ್ಟ್ರ: ಉಕ್ಕಿದ ಹಿರಣ್ಯಕೇಶಿ ನದಿ, ಬೆಳಗಾವಿ ಗಡಿಭಾಗಕ್ಕೆ ಹರಿದ ನೀರು
ದರ್ಶನ್​ರನ್ನು ನೋಡಲು ವಕೀಲನ ಜತೆ ಸೆಂಟ್ರಲ್ ಜೈಲಿಗೆ ಬಂದ ನಿರ್ಮಾಪಕ ಕೆ ಮಂಜು
ದರ್ಶನ್​ರನ್ನು ನೋಡಲು ವಕೀಲನ ಜತೆ ಸೆಂಟ್ರಲ್ ಜೈಲಿಗೆ ಬಂದ ನಿರ್ಮಾಪಕ ಕೆ ಮಂಜು
‘ನನಗೂ ಅಶ್ಲೀಲ ಮೆಸೇಜ್​ಗಳು ಬರುತ್ತವೆ’: ಕಹಿ ಸತ್ಯ ವಿವರಿಸಿದ ನಟಿ ಅಪೂರ್ವಾ
‘ನನಗೂ ಅಶ್ಲೀಲ ಮೆಸೇಜ್​ಗಳು ಬರುತ್ತವೆ’: ಕಹಿ ಸತ್ಯ ವಿವರಿಸಿದ ನಟಿ ಅಪೂರ್ವಾ
ಡಿಸಿಎಂಗಳ ಬಗ್ಗೆ ಕೇಳಿದಾಗ ರಾಜಣ್ಣ ವರಿಷ್ಠರು ತೆಪ್ಪಗಿರಲು ಹೇಳಿದ್ದಾರೆಂದರು
ಡಿಸಿಎಂಗಳ ಬಗ್ಗೆ ಕೇಳಿದಾಗ ರಾಜಣ್ಣ ವರಿಷ್ಠರು ತೆಪ್ಪಗಿರಲು ಹೇಳಿದ್ದಾರೆಂದರು
ಕೊಲೆ ಆರೋಪಿ ವಿನಯ್​ ನೋಡಲು ಜೈಲಿಗೆ ಬಂದ ಯುವತಿಗೆ ಭೇಟಿ ಸಾಧ್ಯವಾಗಲಿಲ್ಲ
ಕೊಲೆ ಆರೋಪಿ ವಿನಯ್​ ನೋಡಲು ಜೈಲಿಗೆ ಬಂದ ಯುವತಿಗೆ ಭೇಟಿ ಸಾಧ್ಯವಾಗಲಿಲ್ಲ
ಕೃಷ್ಣಾ ನದಿ ಪಾತ್ರದಲ್ಲಿ ಭಾರಿ ಮಳೆ, ಭರ್ತಿಯಾಗುತ್ತಿದೆ ಆಲಮಟ್ಟಿ ಜಲಾಶಯ
ಕೃಷ್ಣಾ ನದಿ ಪಾತ್ರದಲ್ಲಿ ಭಾರಿ ಮಳೆ, ಭರ್ತಿಯಾಗುತ್ತಿದೆ ಆಲಮಟ್ಟಿ ಜಲಾಶಯ