Viral Video: ಹಿಮಾಚಲ ಪ್ರದೇಶ: ಅಪರೂಪದ ಬಿಳಿ ಹಾವು ಪತ್ತೆ, ವಿಡಿಯೋ ವೈರಲ್
Albino : ಸುರಿಯುತ್ತಿರುವ ಮಳೆಯ ನಡುವೆಯೇ ಈ ಹಾವು ಪೊದೆಯಲ್ಲಿ ಕಾಣಿಸಿಕೊಂಡಿದೆ. ಬಹಳ ಅಪರೂಪಕ್ಕೆ ಕಾಣಿಸಿಕೊಳ್ಳುವ ಈ ಹಾವಿನ ಬಗ್ಗೆ ಸ್ಥಳೀಯರಲ್ಲಿ ಭಯ ಮತ್ತು ಕುತೂಹಲ ಉಂಟಾಗಿದೆ.
Himachal Pradesh : ಹಿಮಾಚಲ ಪ್ರದೇಶದಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ (Rains) ಭಾರೀ ಅವಾಂತರಗಳು ಸೃಷ್ಟಿಯಾಗುತ್ತಲೇ ಇವೆ. ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿರುವ ವಿಡಿಯೋಗಳನ್ನು ನೋಡುತ್ತಿದ್ದರಂತೂ ಆತಂಕ ಉಂಟಾಗುತ್ತದೆ. ಈ ಎಲ್ಲದರ ಮಧ್ಯೆಯೇ ಬಿಳೀ ಹಾವೊಂದು (Albino Snake) ಆ ಪ್ರದೇಶದಲ್ಲಿ ಪತ್ತೆಯಾಗಿದ್ದು ಅದರ ವಿಡಿಯೋ ವೈರಲ್ ಆಗಿದೆ. ಚಂಬಾ ಜಿಲ್ಲೆಯ ಪೊದೆಗಳ ಬಳಿ ಈ ಹಾವು ಸಾಗುತ್ತಿದ್ದಾಗ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. ಕಳೆದ ವರ್ಷ ಪುಣೆಯಲ್ಲಿ ಅಲ್ಬಿನೋ ಹಾವು ಪತ್ತೆಯಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
दुर्लभ एल्बिनो सांप ?
वीडियो हिमाचल प्रदेश के चंबा जिले का बताया जा रहा है।#Himachal #Chamba #albinosnake #RareSnake pic.twitter.com/eHT9v3tke9
— Badka Himachali (@BadkaHimachali) July 29, 2023
ಈ ಹಾವಿನ ಕಣ್ಣುಗಳು ಸಾಮಾನ್ಯವಾಗಿ ಕೆಂಪು ಅಥವಾ ಗುಲಾಬಿ ಬಣ್ಣದಿಂದ ಕೂಡಿರುತ್ತವೆ. ಕೆಂಪು, ಕಪ್ಪು ಮತ್ತು ಕಂದುಬಣ್ಣಗಳ ಹಾವುಗಳ ಆನುವಂಶಿಕ ರೂಪಾಂತರದಿಂದಾಗಿ ಬಿಳಿ ಹಾವಾಗಿ ಜನಿಸುತ್ತವೆ. ಮೆಲಾನಿನ್ ಪಿಗ್ಮೆಂಟೇಷನ್ನಿಂದಾಗಿ ಇವು ಬಿಳೀಬಣ್ಣವನ್ನು ಹೊಂದುತ್ತವೆ. ಮನುಷ್ಯರು ಹೇಗೆ Albinism (ಬಿಳುಚು) ಗೆ ತುತ್ತಾಗುತ್ತಾರೋ ಹಾಗೆಯೇ ಹಾವುಗಳೂ. ಈತನಕ ಈ ವಿಡಿಯೋ ಅನ್ನು ಸುಮಾರು 120 ಜನರು ನೋಡಿದ್ದಾರೆ.
ಇದನ್ನೂ ಓದಿ : Viral Video: ತೊರೆದು ಜೀವಿಸಬಹುದೇ ನಿಮ್ಮ ಸಿರಿಕಂಠವ; 5 ಮಿಲಿಯನ್ ಕೇಳುಗರನ್ನು ತಲುಪಿದ ಈ ದಾಸರಪದ
ಅಲ್ಬಿನೋ ಹಾವುಗಳ ದೃಷ್ಟಿ ಕೂಡ ದುರ್ಬಲವಾಗಿರುತ್ತದೆ. ಎಷ್ಟೋ ಸಲ ಶಾಶ್ವತವಾಗಿ ಕುರುಡುತನಕ್ಕೆ ಜಾರುವ ಸಾಧ್ಯತೆ ಇರುತ್ತದೆ. ಏಕೆಂದರೆ ಅಲ್ಬಿನಿಸಂ ರೋಗವು ಇವುಗಳ ಕಣ್ಣಿನಲ್ಲಿರುವ ಮೆಲನಿನ್ ಮೇಲೆಯೂ ಪರಿಣಾಮ ಬೀರಿರುತ್ತದೆ. ಹಾಗಾಗಿ ಮನುಷ್ಯರಷ್ಟೇ ಅಲ್ಲ, ಪ್ರಾಣಿಗಳೂ ಕೂಡ ಈ ರೋಗದಿಂದ ಕುರುಡುತನಕ್ಕೆ ಈಡಾಗುವುದು ಸಹಜ.
ಇದನ್ನೂ ಓದಿ : Viral Video: ಮೊದಲ ಸಲ ಉದ್ಯಾನಕ್ಕೆ ಬಂದ ಟೋಕೋ; ನಾಯಿಯಾಗಲು ರೂ 12 ಲಕ್ಷ ವ್ಯಯಿಸಿದ ಜಪಾನಿಗ
ಇದಕ್ಕೊಂದು ಗುಡಿ ಕಟ್ಟಿ ಪೂಜೆ ಪುನಸ್ಕಾರ ಮಾಡಿ ಮತ್ತಷ್ಟು ವೈರಲ್ ಮಾಡಲು ಸದ್ಯ ಅಲ್ಲಿಯ ಜನರಿಗೆ ಪುರಸೊತ್ತಿಲ್ಲ. ಹಾಗಾಗಿ ಈ ಹಾವು ಸದ್ಯಕ್ಕೆ ಬಚಾವ್!
ನೀವೇನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ