Viral: ಅಮೇಝಾನ್; ಆರ್ಡರ್ ಮಾಡದೆಯೂ 100ಕ್ಕೂ ಹೆಚ್ಚು ಪಾರ್ಸೆಲ್ ಮಹಿಳೆಯನ್ನು ತಲುಪಿದಾಗ
Online Scam : ಏನೊಂದೂ ಸುಳಿವಿಲ್ಲದೆ ಇಷ್ಟೊಂದು ಪಾರ್ಸೆಲ್ಗಳು ವರ್ಜೀನಿಯಾದ ಈ ಮಹಿಳೆಯನ್ನು ತಲುಪಿದ್ದಾದರೂ ಹೇಗೆ? ಇದೇನು ಮಾರಾಟಗಾರರ ಹೊಸ ಸಂಚೆ? ಬಾಕ್ಸ್ಗಳಲ್ಲಿ ಏನಿದ್ದವು, ನಂತರ ಆಕೆ ಅವೆಲ್ಲವನ್ನೂ ಏನು ಮಾಡಿದಳು? ಓದಿ.
Amazon : ಆನ್ಲೈನ್ ಶಾಪಿಂಗ್ನ ತಕರಾರುಗಳು ಅವಾಂತರಗಳು ಒಂದೆರಡಲ್ಲ. ನಿತ್ಯವೂ ನೂರಾರು ಪ್ರಕರಣಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಲೇ ಇರುತ್ತವೆ. ಆದರೂ ಜನರಿಗೆ ಆನ್ಲೈನ್ ಶಾಪಿಂಗ್ನಿಂದ (Online Shopping) ತಪ್ಪಿಸಿಕೊಳ್ಳಲಾಗುತ್ತಿಲ್ಲ. ಇದೀಗ ಬೆಳಕಿಗೆ ಬಂದಿರುವ ಪ್ರಕರಣ ನಿಜಕ್ಕೂ ಹೌಹಾರುವಂತಿದೆ. ಒಂದಲ್ಲ ಎರಡಲ್ಲ 100ಕ್ಕೂ ಹೆಚ್ಚು ಪಾರ್ಸೆಲ್ಗಳು ಅಮೇಝಾನ್ನಿಂದ ವರ್ಜೀನಿಯಾದ ಪ್ರಿನ್ಸ್ ವಿಲಿಯಂ ಕೌಂಟಿಯ ಸಿಂಡಿ ಸ್ಮಿತ್ ಎನ್ನುವವರಿಗೆ ತಲುಪಿವೆ. ಆಕೆ ಒಂದೇ ಒಂದು ಸಾಮಾನು ಆರ್ಡರ್ ಮಾಡದೆಯೂ ಅಷ್ಟೊಂದು ಸಾಮಾನುಗಳು ಆಕೆಯನ್ನು ತಲುಪಿದ್ದಾದರೂ ಹೇಗೆ?
ಇದನ್ನೂ ಓದಿ : Viral Video: ಹಿಮಾಚಲ ಪ್ರದೇಶ: ಅಪರೂಪದ ಬಿಳಿ ಹಾವು ಪತ್ತೆ, ವಿಡಿಯೋ ವೈರಲ್
ಇದೊಂದು ಮಾರಾಟಗಾರರ ವಂಚನೆಯ ಹೊಸ ಸ್ವರೂಪ. ಅಮೇಝಾನ್ನ ಬಾಕ್ಸ್ಗಳು ಸಿಂಡಿ ಮನೆಯ ಅಂಗಳವನ್ನು ತುಂಬತೊಡಗಿದ್ದಂತೆ ಆಕೆ ನಿಜಕ್ಕೂ ದಿಗ್ಭ್ರಮೆಗೆ ಒಳಗಾದಳು. ಫೆಡ್ಎಕ್ಸ್, ಅಮೇಝಾನ್ ಮುಂತಾದ ಕಂಪೆನಿಗಳಿಂದ ಬಂದ ಬಾಕ್ಸ್ಗಳು ಆಕೆಯ ಮನೆ, ನೆಲಮಾಳಿಗೆಯ ಜಾಗವೆಲ್ಲಾ ಆವರಿಸಿದಾಗ ಡ್ರೈವರ್ಗಳು ಉಳಿದ ಬಾಕ್ಸ್ಗಳನ್ನು ಬಾಗಿಲಮುಂದೆಯೇ ಇಟ್ಟು ಹೋದರು.
‘1,000 ಹೆಡ್‌ಲ್ಯಾಂಪ್‌ಗಳು, 800 ಬೈನಾಕ್ಯುಲರ್‌ಗಳು, ಮಕ್ಕಳ ಆಟಿಕೆಗಳನ್ನು ಈ ಬಾಕ್ಸ್ಗಳು ಒಳಗೊಂಡಿವೆ. ಇವುಗಳನ್ನು ಹೇಗೆ ಮರಳಿಸುವುದು ಎಂದು ತಿಳಿಯದೆ ನೆರೆಹೊರೆಯವರಿಗೆ ಮತ್ತು ಅವಶ್ಯಕತೆ ಇದ್ದವರಿಗೆಲ್ಲ ಕೊಟ್ಟೆ. ಕಾರಿನಲ್ಲಿ ಹೇರಿಕೊಂಡು ಹಂಚಿಬಂದೆ. ಹೆಡ್ಲ್ಯಾಂಪ್ಗಳನ್ನು ಪಶುಚಿಕಿತ್ಸಾಲಯಗಳಿಗೆ ಕೊಟ್ಟುಬಂದೆ. ‘ಎಂದಿದ್ದಾರೆ ಸಿಂಡಿ.
ಇದನ್ನೂ ಓದಿ : Viral Video:ತೊರೆದು ಜೀವಿಸಬಹುದೇ ನಿಮ್ಮ ಸಿರಿಕಂಠವ; 5 ಮಿಲಿಯನ್ ಕೇಳುಗರನ್ನು ತಲುಪಿದ ಈ ದಾಸರಪದ
‘ಆನ್ಲೈನ್ ಮಾರಾಟಗಾರರು ಬೇರೆ ಬೇರೆ ವಿಧಾನಗಳಲ್ಲಿ ಜನರ ಹೆಸರು, ಫೋನ್ ನಂಬರ್, ವಿಳಾಸವನ್ನು ಸಂಗ್ರಹಿಸುತ್ತಾರೆ. ನಂತರ ತಮ್ಮ ವೆಬ್ಸೈಟ್ನಲ್ಲಿ ನಕಲಿ ರಿವ್ಯೂ ಬರೆದು ರೇಟಿಂಗ್ಸ್ ಹೆಚ್ಚಿಸಿಕೊಳ್ಳುತ್ತಾರೆ. ಇಂಥ ಬ್ರಷಿಂಗ್ ಸ್ಕ್ಯಾಮ್ಗೆ ನಾನು ಈಡಾಗಿರುವ ಸಾಧ್ಯತೆ ಇದೆ ಎಂದು ಆರಂಭದಲ್ಲಿ ಅಂದುಕೊಂಡೆ” ಎಂದು ಮನಿಕಂಟ್ರೋಲ್ಗೆ ಸಿಂಡಿ ತಿಳಿಸಿದ್ದಾರೆ.
ಇದನ್ನೂ ಓದಿ : Viral Video:ಮೊದಲ ಸಲ ಉದ್ಯಾನಕ್ಕೆ ಬಂದ ಟೋಕೋ; ನಾಯಿಯಾಗಲು ರೂ 12 ಲಕ್ಷ ವ್ಯಯಿಸಿದ ಜಪಾನಿಗ
ಆದರೂ ನಿಖರವಾಗಿ ಇದು ಎಂಥ ಮಾರಾಟ ಹಗರಣ ಇದರ ಸೂತ್ರದಾರರು ಯಾರು ಎನ್ನುವುದು ತಿಳಿದುಬಂದಿಲ್ಲ. ಇನ್ನು ಅಮೇಝಾನ್ ಸಪ್ಲೈ ಸೆಂಟರ್ನಿಂದ ಮಾರಾಟವಾದ ವಸ್ತುಗಳನ್ನು ಖಾಲಿಮಾಡಲು ಹೀಗೆ ಸಾಗಿಸುವ ಪ್ರಯತ್ನ ಮಾಡುತ್ತದೆ ಎನ್ನುವುದೂ ಕೇಳಿಬಂದಿದೆ.
ನೀವೇನಂತೀರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 6:05 pm, Mon, 31 July 23