Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಅಮೇಝಾನ್​; ಆರ್ಡರ್ ಮಾಡಿದ್ದು ರೂ 90ಸಾವಿರ ಕ್ಯಾಮೆರಾ ಲೆನ್ಸ್; ತಲುಪಿದ್ದು ಕಿನೋವಾ ಬೀಜಗಳು

Online Fraud : ಇದು ಎಲ್ಲರಿಗೂ ಆಗುತ್ತಲೇ ಇದೆ. ಹಾಗಾಗಿ ದುಬಾರಿ ಬೆಲೆಯ ವಸ್ತುಗಳನ್ನು ನೇರ ಅಂಗಡಿಯಲ್ಲಿ ಖರೀದಿಸುವುದೇ ಮೇಲು ಎಂದು ಅನೇಕರು ಈ ಟ್ವೀಟ್​​ಗೆ ಸಲಹೆ ನೀಡಿದ್ದಾರೆ.

Viral: ಅಮೇಝಾನ್​; ಆರ್ಡರ್ ಮಾಡಿದ್ದು ರೂ 90ಸಾವಿರ ಕ್ಯಾಮೆರಾ ಲೆನ್ಸ್; ತಲುಪಿದ್ದು ಕಿನೋವಾ ಬೀಜಗಳು
ಸಿಗ್ಮಾ ಲೆನ್ಸ್​ ಬದಲಾಗಿ ಗ್ರಾಹಕರಿಗೆ ಕಿನೋವಾ ಬೀಜಗಳು ತಲುಪಿವೆ.
Follow us
ಶ್ರೀದೇವಿ ಕಳಸದ
|

Updated on:Jul 17, 2023 | 3:01 PM

Online Shopping : ಪ್ರತೀ ದಿನ ಲೆಕ್ಕವಿಲ್ಲದಷ್ಟು ಆನ್​ಲೈನ್​ ಶಾಪಿಂಗ್​ನ ಅವಾಂತರಗಳು ನಡೆಯುತ್ತಿರುತ್ತವೆ. ಆರ್ಡರ್ ಮಾಡುವುದೊಂದು ತಲುಪುವುದೊಂದು. ಇದೀಗ ಅಮೇಝಾನ್​ನಿಂದ ರೂ. 90,000 ಕ್ಯಾಮೆರಾ ಲೆನ್ಸ್​ ಅನ್ನು ಆರ್ಡರ್​ ಮಾಡಿದ ಒಬ್ಬರಿಗೆ ಲೆನ್ಸ್ ಬದಲಾಗಿ ಕಿನೋವಾ ಬೀಜಗಳು (ಹರಿವೆ ಸೊಪ್ಪಿನ ವರ್ಗಕ್ಕೆ ಸೇರಿದ ಬೀಜಗಳು) ತಲುಪಿವೆ. ಅರುಣಕುಮಾರ್ ಮೆಹೆರ್​ ಎಂಬುವವರು ತಮ್ಮ ಅನುಭವವನ್ನು ಟ್ವೀಟ್ ಮಾಡಿದ್ದಾರೆ, ‘ಅಮೇಝಾನ್​ನಿಂದ 90K INR ಕ್ಯಾಮೆರಾ ಲೆನ್ಸ್ ಆರ್ಡರ್ ಮಾಡಿದೆ. ಆದರೆ ಲೆನ್ಸ್​ ಬಾಕ್ಸಿನೊಳಗೆ ಕಿನೋವಾ ಬೀಜಗಳ (Quinoa Seeds)  ​ಪ್ಯಾಕೆಟ್ ಕಳುಹಿಸಲಾಗಿದೆ. ಅಮೇಝಾನ್​ ಮತ್ತು ಎಪ್ಪಾರಿಯೋ ರೀಟೇಲ್​ನ ದೊಡ್ಡ ಸ್ಕ್ಯಾಮ್​ ಇದು.’

ಅರುಣಕುಮಾರ್​ ಜು. 5ರಂದು ಅಮೇಝಾನ್​ನಿಂದ ಸಿಗ್ಮಾ 24/70 F 2.8 ಲೆನ್ಸ್​ ಆರ್ಡರ್​ ಮಾಡಿದ್ದರು. ಆದ ಸಮಸ್ಯೆಯನ್ನು ಅವರು ಅಮೇಝಾನ್​ಗೆ ಟ್ಯಾಗ್​ ಮಾಡಿ ಟ್ವೀಟ್ ಮಾಡಿದ್ದರು. ಅಮೇಝಾನ್​ ಈ ಬಗ್ಗೆ ತನಿಖೆ ನಡೆಸುತ್ತಿದೆ ಪ್ರತಿಕ್ರಿಯಿಸಿದೆಯಾದರೂ, ಅರುಣಕುಮಾರ್, ಲೆನ್ಸ್​ ಕಳುಹಿಸಿ ಇಲ್ಲವೆ ಹಣವನ್ನು ಮರುಪಾವತಿಸಿ ಎಂದು ಮರುಟ್ವೀಟ್ ಮಾಡಿದ್ದಾರೆ. ಜು.7ರಂದು ಮಾಡಿದ ಈ ಟ್ವೀಟ್ ಅನ್ನು 1.3 ಲಕ್ಷಕ್ಕಿಂತಲೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಸುಮಾರು 300 ಜನರು ರೀಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : Viral Video: ಹೀಲ್ಸ್ ಮತ್ತು ಸ್ಕರ್ಟ್​ನಲ್ಲಿ ಡ್ಯಾನ್ಸ್​ ಮಾಡಿದ ಪುರುಷ 

ಅನೇಕರು ತಮ್ಮ ಇಂಥ ಅನುಭವಗಳನ್ನು ಈ ಟ್ವೀಟ್​ನಡಿ ಹಂಚಿಕೊಂಡಿದ್ದಾರೆ. ಕೆಲವರು ಅಂಗಡಿಗೆ ಹೋಗಿ ಖರೀದಿಸುವುದು ಉತ್ತಮ ಎಂದಿದ್ದಾರೆ. ಕಳೆದ ವರ್ಷ ಸಿಗ್ಮಾ 150-600 ಲೆನ್ಸ್ ಆರ್ಡರ್ ಮಾಡಿದ್ದೆ, ನನಗೆ ಹೊಲಿಗೆ ಯಂತ್ರ ಕಳಿಸಿದ್ದರು ಎಂದಿದ್ದಾರೆ ಒಬ್ಬರು. ಇದೇನು ಹೊಸ ಸಮಸ್ಯೆಯಲ್ಲ, ನಾನು ಅನೇಕ ಬಾರಿ ಇದನ್ನು ಎದುರಿಸಿದ್ದೇನೆ. ಕೆಲವೊಮ್ಮೆ ಸಮಸ್ಯೆಗಳು ಪರಿಹಾರಗೊಂಡಿವೆ, ಇನ್ನೂ ಕೆಲವು ಹಾಗೇ ಇವೆ. ಆದ್ದರಿಂದ ಡೆಲಿವರಿ ಏಜೆಂಟರ್ ಮುಂದೆಯೇ ಬಾಕ್ಸ್​ ತೆರೆದು ನಂತರ ಅದನ್ನು ತೆಗೆದುಕೊಳ್ಳುತ್ತೇನೆ ಎಂದಿದ್ಧಾರೆ ಇನ್ನೊಬ್ಬರು.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:56 am, Mon, 17 July 23

ಸುತ್ತೂರು ಮಠದಲ್ಲಿ ಮಗುವಿಗೆ ನಾಮಕರಣ ಮಾಡಿದ ಸಿದ್ದರಾಮಯ್ಯ
ಸುತ್ತೂರು ಮಠದಲ್ಲಿ ಮಗುವಿಗೆ ನಾಮಕರಣ ಮಾಡಿದ ಸಿದ್ದರಾಮಯ್ಯ
‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋ ಫಿನಾಲೆ; ಗೆಲ್ಲೋದು ಯಾರು?
‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋ ಫಿನಾಲೆ; ಗೆಲ್ಲೋದು ಯಾರು?
ಮೌಢ್ಯಗಳನ್ನು ಅನುಸರಿಸಲ್ಲ ಅಂತ ಮತ್ತೊಮ್ಮೆ ಸಾಬೀತು ಮಾಡಿದ ಸಿದ್ದರಾಮಯ್ಯ
ಮೌಢ್ಯಗಳನ್ನು ಅನುಸರಿಸಲ್ಲ ಅಂತ ಮತ್ತೊಮ್ಮೆ ಸಾಬೀತು ಮಾಡಿದ ಸಿದ್ದರಾಮಯ್ಯ
ಮಂತ್ರಾಲಯ ರಾಯರ ಮಠದ ಹುಂಡಿಯಲ್ಲಿ 4 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹ
ಮಂತ್ರಾಲಯ ರಾಯರ ಮಠದ ಹುಂಡಿಯಲ್ಲಿ 4 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹ
ಪಹಲ್ಗಾಮ್ ದಾಳಿಕೋರ ಆಸಿಫ್ ಶೇಖ್ ಮನೆಯಲ್ಲಿ ಸ್ಫೋಟ, ಬೆಂಕಿ, ನೆಲಸಮ
ಪಹಲ್ಗಾಮ್ ದಾಳಿಕೋರ ಆಸಿಫ್ ಶೇಖ್ ಮನೆಯಲ್ಲಿ ಸ್ಫೋಟ, ಬೆಂಕಿ, ನೆಲಸಮ
ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್
ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ