Viral Video: ಹೀಲ್ಸ್ ಮತ್ತು ಸ್ಕರ್ಟ್ನಲ್ಲಿ ಡ್ಯಾನ್ಸ್ ಮಾಡಿದ ಪುರುಷ
High Heels ; ''ಹುಡುಗಿಯಾಗಿ ನನಗೆ ಹೈಹೀಲ್ಸ್ ಧರಿಸಿ ನಡೆಯೋದಕ್ಕೆ ಬರುವುದಿಲ್ಲ. ಅಂಥದ್ದರಲ್ಲಿ ಇವರು ಸ್ಕರ್ಟ್ ಮತ್ತು ಹೈಹೀಲ್ಸ್ ಹಾಕಿ ಎಷ್ಟೊಂದು ಸುಂದರವಾಗಿ ನರ್ತಿಸಿದ್ದಾರೆ!''
Dance : 2022ರ ಡಿಸೆಂಬರ್ನಲ್ಲಿ ಬಿಡುಗಡೆಯಾದ ‘ವೈಟ್ ಬ್ರೌನ್ ಬ್ಲ್ಯಾಕ್’ (White Brown Black) ಪಂಜಾಬಿ ಹಾಡನ್ನು ಕರಣ್ ಔಜ್ಲಾ, ಆ್ಯವಿ ಸ್ರಾ ಮತ್ತು ಜಾನಿ ಹಾಡಿದ್ದಾರೆ. ಕಳೆದ ಒಂದು ವರ್ಷದಿಂದ ಈ ಹಾಡು ಪಾರ್ಟಿಗಳಲ್ಲಿ ಮತ್ತು ವೇದಿಕೆಯ ಮೇಲೆ ಮಾಮೂಲಾಗಿದೆ. ಈ ಹಾಡಿಗೆ ಇದೀಗ ಎನ್ ಲೈ ಎಂಬ ಯುವಕ ಹೆಜ್ಜೆ ಹಾಕಿದ್ದಾನೆ. ಬರೀ ಹೆಜ್ಜೆ ಹಾಕಿದ್ದರೆ ಸುದ್ದಿಯಾಗುತ್ತಿರಲಿಲ್ಲ. ಸ್ಕರ್ಟ್ ಮತ್ತು ಹೈಹೀಲ್ಸ್ ಲ್ಸ್ ಧರಿಸಿ ಲೀಲಾಜಾಲವಾಗಿ ನರ್ತಿಸಿದ್ದರಿಂದ ವೈರಲ್ ಆಗಿದೆ. ಈತನ ನರ್ತನಾ ಕೌಶಲಕ್ಕೆ ನೆಟ್ಟಿಗರು ಶಭಾಷ್ ಎನ್ನುತ್ತಿದ್ದಾರೆ.
ಇದನ್ನೂ ಓದಿView this post on Instagram
ಮೇ 24ರಂದು ಈ ವಿಡಿಯೋ ಅನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ಈತನಕ 4 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. ಸುಮಾರು 1.6 ಲಕ್ಷ ಜನರು ಇದನ್ನು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ಈ ಹಾಡು ಮತ್ತು ನೀವಿದಕ್ಕೆ ಹೆಜ್ಜೆ ಹಾಕಿರುವ ರೀತಿ ಬಹಳ ಆಕರ್ಷಕವಾಗಿದೆ ಎಂದಿದ್ದಾರೆ ಅನೇಕರು. ನಾನಂತೂ ಮೂಕವಿಸ್ಮಿತನಾಗಿದ್ದೇನೆ ಎಂದಿದ್ದಾರೆ ಕೆಲವರು.
ಇದನ್ನೂ ಓದಿ : Viral Video: ನಮ್ಮೇಲ್ ನಿಮ್ಗೆ ವಿಶ್ವಾಸ ಇದೆಯಲ್ವಾ?; ಸಿಎಂ ಹಳೆಯ ಭಾಷಣಕ್ಕೆ ಲಿಪ್ಸಿಂಕ್ ಮಾಡಿದ ಯುವಕ
ಹುಡುಗಿಯಾದ ನನಗೆ ಹೈಹೀಲ್ಸ್ ಹಾಕಿಕೊಂಡು ನಡೆಯಲಿಕ್ಕೇ ಬರುವುದಿಲ್ಲ. ಅಂಥದ್ದರಲ್ಲಿ ಈ ಪುರುಷ ನರ್ತಿಸುತ್ತಿದ್ದಾನೆ ಎಂದರೆ, ಅಬ್ಬಾ ಗ್ರೇಟ್! ಎಂದಿದ್ದಾರೆ ಮತ್ತೊಬ್ಬರು. ನೀವು ಮಾಡಿರುವ ನೃತ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಹಾಗಿದೆ, ಇಂಥ ನೃತ್ಯಶಿಕ್ಷಕರು ಇಂದು ಬೇಕು ಎಂದಿದ್ಧಾರೆ ಮಗದೊಬ್ಬರು. ನನಗೆ ಇನ್ನೇನೂ ಬೇಡ, ಈ ಹುಡುಗ ಬೇಕು! ಎಂದಿದ್ದಾರೆ ಇನ್ನೂ ಒಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:45 am, Mon, 17 July 23