Viral Video: ‘ನಮ್ಮೇಲ್ ನಿಮ್ಗೆ ವಿಶ್ವಾಸ ಇದೆಯಲ್ವಾ?’ ಸಿಎಂ ಹಳೆಯ ಭಾಷಣಕ್ಕೆ ಲಿಪ್ಸಿಂಕ್ ಮಾಡಿದ ಯುವಕ
Speech : ಈ ವಿಡಿಯೋ ಅನ್ನು ಜೂ.30ರಂದು ಎಂ.ಎಸ್. ರಘು ಎಂಬುವವರು ಇನ್ಸ್ಟಾಗ್ರಾಮ್ಗೆ ಅಪ್ಲೋಡ್ ಮಾಡಿದ್ದಾರೆ. ಈತನಕ ಸುಮಾರು 2 ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ. 60,000ಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.
Siddaramaiah : ನಟರಾಗಬೇಕೆಂದರೆ ನಟನೆಯ ಕೋರ್ಸ್ ಮಾಡಲೇಬೇಕು. ಅವಕಾಶಕ್ಕಾಗಿ ನಿರ್ದೇಶಕರ ಮನೆಗೆ ಎಡತಾಕಬೇಕು. ಅನುಭವಕ್ಕಾಗಿ ಬಂದ ಪಾತ್ರಗಳನ್ನೆಲ್ಲಾ ನಿರ್ವಹಿಸಬೇಕು. ಅಂದುಕೊಂಡ ಅವಕಾಶಕ್ಕಾಗಿ ವರ್ಷಗಟ್ಟಲೆ ಕಾಯಲೇಬೇಕು ಎಂದುಕೊಂಡು ಕುಳಿತುಕೊಳ್ಳುವ ಕಾಲ ಇದಲ್ಲ. ಯಾವುದೇ ಪ್ರತಿಭೆಯನ್ನು ನೀವು ಹೊಂದಿದ್ದರೆ ಸ್ವಲ್ಪ ತಾಲೀಮು ಮಾಡಿಕೊಂಡು ನಿಮಿಷಗಳ ಲೆಕ್ಕದಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ (Social Media) ಅಪ್ಲೋಡ್ ಮಾಡುವ ಕಾಲ ಇದು. ಹೀಗೆ ಮಾಡಿದ ಒಂದು ರೀಲ್ ಇದೀಗ ವೈರಲ್ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಾವಧಿಯ ಮುನ್ನ ಮಾಡಿದ ಭಾಷಣದ ತುಣುಕಿಗೆ ಇನ್ಸ್ಟಾಗ್ರಾಮಿಗರೊಬ್ಬರು ಲಿಪ್ ಸಿಂಕ್ ಮಾಡಿದ ವಿಡಿಯೋ ಇದಾಗಿದೆ.
View this post on Instagram ಇದನ್ನೂ ಓದಿ
ಈ ವಿಡಿಯೋ ಅನ್ನು ಜೂ.30ರಂದು ಎಂ.ಎಸ್. ರಘು ಎಂಬುವವರು ಅಪ್ಲೋಡ್ ಮಾಡಿದ್ದಾರೆ. ಈತನಕ ಸುಮಾರು 2 ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ. ಸುಮಾರು 60,000ಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಕೆಲವರು ಈತನ ಆ್ಯಕ್ಟಿಂಗ್ ಬಗ್ಗೆ ಶ್ಲಾಘಿಸಿದ್ದಾರೆ. ಇನ್ನೂ ಕೆಲವರು ಪಕ್ಷಗಳ ಪರವಿರೋಧ ವಹಿಸಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : Viral Video: ಶ್ರೀಮಂತರು ಷೋಕಿಗಾಗಿ ನಾಯಿ ಸಾಕುತ್ತಾರೆ, ಅವರು ಪ್ರೀತಿಸುವುದಿಲ್ಲ; ನೆಟ್ಟಿಗರ ಚರ್ಚೆ
ಪಕ್ಕಾ ಸಿದ್ದರಾಮಯ್ಯನವರ ಅಭಿಮಾನಿಯಾಗಿ ಹೇಳುತ್ತಿದ್ದೀನಿ, ನಿಮ್ಮ ಆ್ಯಕ್ಟಿಂಗ್ ಸೂಪರ್ ಎಂದಿದ್ದಾರೆ ಒಬ್ಬರು. ನಿಮ್ಮ ಮೈಕ್ ಸೂಪರ್ ಎಂದು ಮತ್ತೊಬ್ಬರು ಹೇಳಿದ್ದಾರೆ. ಮೊದಲು ಆರ್ ಎಸ್ ಎಸ್, ಬಜರಂಗದಳದ ಬಗ್ಗೆ ತಿಳಿದುಕೋ, ಯಾರು ಹೆಂಗೆ ಏನು ಅಂತ ಅಂತ ಗೊತ್ತಾಗುತ್ತೆ. ಸುಮ್ಮನೆ ಲೈಕು ಫಾಲೋವರ್ಸ್ಗೋಸ್ಕರ ವಿಡಿಯೋ ಮಾಡಬೇಡ, ತಿಳಿದುಕೊಂಡು ವಿಡಿಯೋ ಮಾಡು ಎಂದು ಹೇಳಿದ್ದಾರೆ ಮಗದೊಬ್ಬರು. ನಿಮ್ಮ ಹತ್ತು ಕೇಜಿ ಅಕ್ಕಿ ನಮಗೆ ಬೇಡ ನಾವೇ ಖರೀದಿಸುತ್ತೇವೆ ಎಂದು ಇನ್ನೂ ಒಬ್ಬರು ಹೇಳಿದ್ದಾರೆ. ಬಹುಪಾಲು ಜನರು ಇವರ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ