Viral News: ಮಕ್ಕಳ ಬ್ಯಾಗ್ ತಲೆಯಡಿಗಿಟ್ಟು ತರಗತಿಯಲ್ಲೇ ನಿದ್ದೆಗೆ ಜಾರಿದ ಶಿಕ್ಷಕ
ಮಕ್ಕಳ ಬ್ಯಾಗ್ ತಲೆಯಡಿಗಿಟ್ಟು ಶಿಕ್ಷಕನೊರ್ವ ನಿದ್ದೆಗೆ ಜಾರಿದ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಇನ್ನಷ್ಟು ವಿವರ ಇಲ್ಲಿದೆ.
ಮಧ್ಯಪ್ರದೇಶ: ಛತ್ತರ್‌ಪುರ ಜಿಲ್ಲೆಯ ಲವಕುಶನಗರದ ಸರ್ಕಾರಿ ಶಾಲೆಯೊಂದರ ಮುಖ್ಯೋಪಾಧ್ಯಾಯರೊಬ್ಬರು ವಿದ್ಯಾರ್ಥಿಯ ಬ್ಯಾಗನ್ನು ದಿಂಬಿನಂತೆ ತಲೆಯಡಿಗಿಟ್ಟು ತರಗತಿಯಲ್ಲಿ ಮಲಗಿದ್ದಾರೆ. ತರಗತಿಯಲ್ಲಿ ಮಲಗಿರುವ ಪೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಲಾಗಿದ್ದು, ಇದೀಗಾ ಎಲ್ಲೆಡೆ ವೈರಲ್ ಆಗಿದೆ. ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮಕ್ಕಳ ಸಂಬಂಧಿಕರು ಆಗ್ರಹಿಸಿದ್ದಾರೆ. ಇದೀಗಾ ಮುಖ್ಯಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಮುಖ್ಯೋಪಾಧ್ಯಾಯರಾದ ರಾಜೇಶ್ ಕುಮಾರ್ ಅಡ್ಜಾರಿಯಾ ಅವರು ಮಕ್ಕಳ ಶಾಲಾ ಬ್ಯಾಗ್‌ಗಳನ್ನು ದಿಂಬಿನಂತೆ ಬಳಸಿ ನೆಲದ ಮೇಲೆ ಮಲಗಿರುವುದು ಕಂಡುಬಂದಿದೆ. ಕೆಲವು ಮಕ್ಕಳು ತರಗತಿಯ ಹೊರಗೆ ಆಟವಾಡುತ್ತಿರುವುದನ್ನು ಮತ್ತು ಕೆಲವು ವಿದ್ಯಾರ್ಥಿನಿಯರು ಶಾಲೆಯ ನೆಲವನ್ನು ಗುಡಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
ಇದನ್ನೂ ಓದಿ: ಜಿಗಿಯಿರಿ ಜಿಗಿಸಿರಿ; ‘ನಾನೇನೆಂಬುದರ ಅರಿವು ನನಗಿದೆ, ಹೊಸ ಕೌಶಲ ಕಲಿಯುತ್ತಿದ್ದೇನಷ್ಟೇ’
ತರಗತಿಯಲ್ಲಿ ಇಂತಹ ನಡವಳಿಕೆಗಳು ಇದೇ ಮೊದಲೇನಲ್ಲಾ ಇತ್ತೀಚೆಗಷ್ಟೇ ಮಹಿಳಾ ಶಿಕ್ಷಕರಿಬ್ಬರು ತರಗತಿಯಲ್ಲೇ ಹೊಡೆದಾಡಿಕೊಂಡಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಇದೀಗಾ ಇದಕ್ಕೆ ಪೂರಕ ಎಂಬಂತೆ ಈ ಘಟನೆ ನಡೆದಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: