Sign In

By signing in or creating an account, you agree with Associated Broadcasting Company's Terms & Conditions and Privacy Policy.

Strict Action: ಔಷಧ ಗುಣಮಟ್ಟದಲ್ಲಿ ರಾಜಿ ಇಲ್ಲ; ಕಳಪೆ ಔಷಧ ತಯಾರಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ

India's Pharma Sector: ಗುಣಮಟ್ಟದ ಔಷಧ ತಯಾರಿಕೆ ಮೂಲಕ ಫಾರ್ಮಾ ವಲಯದಲ್ಲಿ ಭಾರತದ ಸ್ಥಾನಮಾನ ಗಟ್ಟಿಯಾಗಿಸಿ ಎಂದು ಕೇಂದ್ರ ಸಚಿವ ಮನಸುಖ್ ಮಾಂಡವೀಯ ಅವರು ಎಂಎಸ್​ಎಂಇ ಫಾರ್ಮಾ ಪ್ರತಿನಿಧಿಗಳಿಗೆ ಕರೆ ನೀಡಿದ್ದಾರೆ.

Strict Action: ಔಷಧ ಗುಣಮಟ್ಟದಲ್ಲಿ ರಾಜಿ ಇಲ್ಲ; ಕಳಪೆ ಔಷಧ ತಯಾರಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ
ಡಾ. ಮನಸುಖ್ ಮಾಂಡವೀಯ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 11, 2023 | 5:14 PM

ನವದೆಹಲಿ: ಆಫ್ರಿಕಾದ ಕೆಲ ದೇಶಗಳಲ್ಲಿ ಹಲವು ಮಂದಿಯ ಸಾವಿಗೆ ಭಾರತದ ಕೆಮ್ಮಿನ ಸಿರಪ್​ಗಳು (Couph Syrups) ಕಾರಣ ಎಂಬಂತಹ ವರದಿ ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚೆತ್ತುಕೊಂಡಿದೆ. ಭಾರತ ಈ ವಿಶ್ವದ ಫಾರ್ಮಸಿಯಾಗಬೇಕೆನ್ನುವ (World Pharmacy) ಅಭಿಲಾಷೆಗೆ ಈ ಬೆಳವಣಿಗೆ ಘಾಸಿ ತರುತ್ತಿದ್ದು, ಅದನ್ನು ಸರಿಮಾಡಲು ಸರ್ಕಾರ ಗಂಭೀರವಾಗಿದೆ. ಕಳಪೆ ಔಷಧ ತಯಾರಿಕೆಯನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ದೇಶದಲ್ಲಿ ಗುಣಮಟ್ಟದ ಔಷಧ ತಯಾರಾಗುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಫಾರ್ಮಾ ಕ್ಷೇತ್ರದ ಪ್ರಾಧಿಕಾರಗಳಿಂದ (Pharma Regulatory Authorities) ವ್ಯಾಪಕ ಪರಿಶೀಲನೆ ನಡೆಸಲಾಗುತ್ತಿದೆ. ಅನುಮಾನ ಬಂದ ಫಾರ್ಮಾ ಘಟಕಗಳನ್ನು ಆಯ್ದುಕೊಂಡು ತಪಾಸಣೆ ಕಾರ್ಯ ನಡೆಸಲಾಗುತ್ತಿದೆ.

105 ಔಷಧ ಸಂಸ್ಥೆಗಳ ಮೇಲೆ ಕ್ರಮ

ಕೇಂದ್ರ ಆರೋಗ್ಯ ಸಚಿವ ಡಾ. ಮನಸುಖ್ ಮಾಂಡವೀಯ ಇಂದು (ಜುಲೈ 11) ನೀಡಿರುವ ಮಾಹಿತಿ ಪ್ರಕಾರ ಈವರೆಗೆ 137 ಸಂಸ್ಥೆಗಳನ್ನು ತಪಾಸಿಸಲಾಗಿದೆ. ಇದರಲ್ಲಿ 105 ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. 105 ಸಂಸ್ಥೆಗಳ ಪೈಕಿ 31ರಲ್ಲಿ ಉತ್ಪಾದನೆ ನಿಲ್ಲಿಸಲಾಗಿದೆ. 50 ಸಂಸ್ಥೆಗಳಿಗೆ ಪರವಾನಿಗೆ ರದ್ದು ಮಾಡಲಾಗಿದೆ. 73 ಸಂಸ್ಥೆಗಳಿಗೆ ಶೋಕಾಸ್ ನೋಟೀಸ್ ಕೊಡಲಾಗಿದೆ. 21 ಸಂಸ್ಥೆಗಳಿಗೆ ಎಚ್ಚರಿಕೆಯ ಪತ್ರ ಕಳುಹಿಸಲಾಗಿದೆ.

ಇದನ್ನೂ ಓದಿTata iPhone Deal: ಕೋಲಾರದಲ್ಲಿ ವಿಸ್ಟ್ರಾನ್ ಐಫೋನ್ ಘಟಕ ಖರೀದಿ: ಮುಂದಿನ ತಿಂಗಳೇ ಟಾಟಾ ಡೀಲ್?

ಔಷಧ ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ರಾಜಿ ಇಲ್ಲ ಎಂದ ಮಾಂಡವೀಯ

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನಸುಖ್ ಮಾಂಡವೀಯ ಮಂಗಳವಾರದಂದು ಎಂಎಸ್​ಎಂಇ ವಲಯದ ಫಾರ್ಮಾ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸುತ್ತಾ, ಔಷಧ ಉತ್ಪಾದನೆಯಲ್ಲಿ ಗುಣಮಟ್ಟ ಖಾತ್ರಿಪಡಿಸುವಂತೆ ಕರೆ ನೀಡಿದರು. ಫಾರ್ಮಾ ಕಂಪನಿಗಳು ಸ್ವಯಂ ಕಟ್ಟಳೆ ಮೂಲಕ ಉತ್ತಮ ಉತ್ಪಾದನಾ ಪ್ರಕ್ರಿಯೆ (ಜಿಎಂಪಿ) ಅಳವಡಿಸಿಕೊಳ್ಳಬೇಕು ಎಂದೂ ಕರೆ ನೀಡಿದರು.

‘ಫಾರ್ಮಾ ವಲಯದಲ್ಲಿ ನಮ್ಮ ಜಾಗತಿಕ ಸ್ಥಾನಮಾನವು ನಮ್ಮ ಉತ್ಪನ್ನಗಳ ಗುಣಮಟ್ಟದ ಮೇಲೆ ಸಿದ್ಧವಾಗುತ್ತದೆ. ಔಷಧದ ಗುಣಮಟ್ಟ ಮತ್ತು ಮೌಲ್ಯದ ವಿಚಾರದಲ್ಲಿ ಭಾರತದ ಸ್ಥಾನಮಾನ ಗಟ್ಟಿಗೊಳಿಸಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ನಾನು ತೆಗೆದುಕೊಳ್ಳಬೇಕು. ಆದ್ದರಿಂದ ಸೆಲ್ಫ್ ರೆಗ್ಯುಲೇಶನ್ ಬಹಳ ಮುಖ್ಯವಾಗುತ್ತದೆ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರೂ ಆದ ಮಾಂಡವೀಯ ಹೇಳಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ