Tata iPhone Deal: ಕೋಲಾರದಲ್ಲಿ ವಿಸ್ಟ್ರಾನ್ ಐಫೋನ್ ಘಟಕ ಖರೀದಿ: ಮುಂದಿನ ತಿಂಗಳೇ ಟಾಟಾ ಡೀಲ್?

Kolar Wistron Unit: ಕೋಲಾರದಲ್ಲಿ ವಿಸ್ಟ್ರಾನ್​ನಿಂದ ಸ್ಥಾಪನೆಯಾಗಿರುವ ಐಫೋನ್ ಅಸೆಂಬ್ಲಿಂಗ್ ಘಟಕ ಖರೀದಿಸಲು ಟಾಟಾ ಗ್ರೂಪ್ ಆಗಸ್ಟ್ ತಿಂಗಳಲ್ಲಿ ಒಪ್ಪಂದಕ್ಕೆ ಸಹಿಹಾಕಲಿದೆ. ಈ ಘಟಕದಲ್ಲಿ ಐಫೋನ್14 ಮೊಬೈಲ್​ನ ಅಸೆಂಬ್ಲಿಂಗ್ ನಡೆಯುತ್ತದೆ.

Tata iPhone Deal: ಕೋಲಾರದಲ್ಲಿ ವಿಸ್ಟ್ರಾನ್ ಐಫೋನ್ ಘಟಕ ಖರೀದಿ: ಮುಂದಿನ ತಿಂಗಳೇ ಟಾಟಾ ಡೀಲ್?
ವಿಸ್ಟ್ರಾನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 11, 2023 | 2:55 PM

ಬೆಂಗಳೂರು: ಕೋಲಾರದಲ್ಲಿರುವ ವಿಸ್ಟ್ರಾನ್ ಕಂಪನಿಯ ಐಫೋನ್ ಅಸೆಂಬ್ಲಿಂಗ್ ಘಟಕವನ್ನು (iPhone assembling unit) ಖರೀದಿಸಲಿರುವ ಟಾಟಾ ಸಂಸ್ಥೆ, ಮುಂದಿನ ತಿಂಗಳೇ ಒಪ್ಪಂದಕ್ಕೆ ಸಹಿಹಾಕುವ ಸಾಧ್ಯತೆ ಇದೆ. ಬ್ಲೂಮ್​ಬರ್ಗ್​ನಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ ಆಗಸ್ಟ್ ತಿಂಗಳಲ್ಲಿ ವಿಸ್ಟ್ರಾನ್ ಐಫೋನ್ ಫ್ಯಾಕ್ಟರಿ (Wistron iPhone Unit) ಖರೀದಿಸುವ ಒಪ್ಪಂದಕ್ಕೆ ಟಾಟಾ ಸಹಿ ಹಾಕುವ ನಿರೀಕ್ಷೆ ಇದೆ. ಅಂದಾಜು 5,000 ಕೋಟಿ ರೂ ಮೌಲ್ಯದ ಈ ಘಟಕದಲ್ಲಿ 10,000ಕ್ಕೂ ಹೆಚ್ಚು ಉದ್ಯೋಗಿಗಳಿದ್ದು ಐಫೋನ್14 ಮಾಡೆಲ್​ನ ಫೋನ್​ಗಳ ಅಸೆಂಬ್ಲಿಂಗ್ ಕೆಲಸ ಇಲ್ಲಿ ನಡೆಯುತ್ತದೆ. ಈ ಘಟಕವನ್ನು ಖರೀದಿಸಿದ ಬಳಿಕ ಟಾಟಾ ಸಂಸ್ಥೆ ಐಫೋನ್ ತಯಾರಿಕೆಯ ಕೆಲಸ ಮುಂದುವರಿಸಿಕೊಂಡು ಹೋಗುತ್ತದೆ. ಈ ಒಪ್ಪಂದ ಯಶಸ್ವಿಯಾದರೆ ಐಫೋನ್ ತಯಾರಿಸುವ ಮೊದಲ ಭಾರತೀಯ ಕಂಪನಿ ಎಂಬ ಶ್ರೇಯಸ್ಸು ಟಾಟಾ ಸಂಸ್ಥೆಯದ್ದಾಗುತ್ತದೆ.

ವಿಸ್ಟ್ರಾನ್​ನ ಈ ಐಫೋನ್ ಘಟಕದಲ್ಲಿ ಸದ್ಯ 10,000ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ಉದ್ಯೋಗಿಗಳ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸಲು ವಿಸ್ಟ್ರಾನ್ ನಿಶ್ಚಯಿಸಿತ್ತು. ಹಾಗೆಯೇ, ಈ ಘಟಕದಿಂದ 1.8 ಬಿಲಿಯನ್ ಡಾಲರ್ (ಸುಮಾರು 15,000 ಕೋಟಿ ರೂ) ಮೌಲ್ಯದ ಐಫೋನ್​ಗಳನ್ನು ಸರಬರಾಜು ಮಾಡುವ ಗುರಿ ಇಡಲಾಗಿದೆ. ಹೀಗಾಗಿ, ಈ ಐಫೋನ್ ಯೋಜನೆ ಟಾಟಾಗೆ ಬಹಳ ಮುಖ್ಯ ಎನಿಸಬಹುದು.

ಇದನ್ನೂ ಓದಿFoxconn: ಫಾಕ್ಸ್​ಕಾನ್ ಮತ್ತು ವೇದಾಂತ ಬೇರ್ಪಟ್ಟಿದ್ದು ಸಕಾರಾತ್ಮಕ ಬೆಳವಣಿಗೆಯಾ? ಹೆಚ್ಚುವರಿ ಸೆಮಿಕಂಡಕ್ಟರ್ ಘಟಕ ಶುರುವಾಗುತ್ತಾ?

ಆ್ಯಪಲ್ ಕಂಪನಿಯ ಐಫೋನ್ ಮತ್ತಿತರ ಉತ್ಪನ್ನಗಳು ಬಹುತೇಕ ಚೀನಾದಲ್ಲೇ ತಯಾರಾಗುತ್ತವೆ. ವಿಸ್ಟ್ರಾನ್, ಫಾಕ್ಸ್​ಕಾನ್ ಮತ್ತು ಪೆಗಾಟ್ರಾನ್ ಸಂಸ್ಥೆಗಳು ಆ್ಯಪಲ್​ಗಾಗಿ ಐಫೋನ್ ಮತ್ತಿತರ ಉತ್ಪನ್ನಗಳನ್ನು ಅಸೆಂಬ್ಲಿಂಗ್ ಮಾಡಿಕೊಡುತ್ತವೆ. ಇದರಲ್ಲಿ ಫಾಕ್ಸ್​ಕಾನ್ ಮತ್ತು ಪೆಗಾಟ್ರಾನ್ ಅತಿಹೆಚ್ಚು ಐಫೋನ್ ತಯಾರಿಸುತ್ತವೆ. ಇವೆರಡೂ ಕಂಪನಿಗಳು ಭಾರತದಲ್ಲಿ ಘಟಕಗಳನ್ನು ಹೊಂದಿವೆ. ಅ್ಯಪಲ್ ಕಂಪನಿ ತನ್ನ ಐಫೋನ್ ಉತ್ಪಾದನೆಯ ಒಂದಷ್ಟು ಭಾಗವನ್ನು ಚೀನಾದಿಂದ ಹೊರಗೆ ವರ್ಗಾಯಿಸುತ್ತಿದೆ. ಈ ನಿಟ್ಟಿನಲ್ಲಿ ಟಾಟಾ ಸಂಸ್ಥೆಗೆ ಇನ್ನಷ್ಟು ಹೊಣೆಗಾರಿಕೆ ಮತ್ತು ಒಪ್ಪಂದಗಳು ಸಿಗುವ ನಿರೀಕ್ಷೆ ಇದೆ.

ಮೇ ತಿಂಗಳಲ್ಲಿ ಆ್ಯಪಲ್ ಕಂಪನಿಯ 10,000 ಕೋಟಿ ರೂ ಮೌಲ್ಯದ ಐಫೋನ್​ಗಳು ಭಾರತದಿಂದ ರಫ್ತಾಗಿದ್ದವು. ಏಪ್ರಿಲ್ ಮತ್ತು ಮೇ ಈ ಎರಡು ತಿಂಗಳಲ್ಲಿ 20,000 ಕೋಟಿ ರೂ ಮೌಲ್ಯದ ಐಫೋನ್ ರಫ್ತಾಗಿದ್ದವು. ಹಿಂದಿನ ವರ್ಷದ (2022) ಏಪ್ರಿಲ್, ಮೇ ತಿಂಗಳುಗಳಲ್ಲಿ ಐಫೋನ್ ರಫ್ತು 9,066 ಕೋಟಿ ರೂನಷ್ಟಿತ್ತು. ಕಳೆದ ಒಂದು ವರ್ಷದಲ್ಲಿ ಐಫೋನ್ ಉತ್ಪಾದನೆ ಗಣನೀಯವಾಗಿ ಹೆಚ್ಚಾಗಿದೆ. 2022ರ ಏಪ್ರಿಲ್ ತಿಂಗಳಲ್ಲಿ ಚೆನ್ನೈನಲ್ಲಿ ಪೆಗಾಟ್ರಾನ್ ಐಫೋನ್ ಅಸೆಂಬ್ಲಿಂಗ್ ಕಾರ್ಯ ಆರಂಭಿಸಿತ್ತು. ಹೀಗಾಗಿ, ಕಳೆದ ಒಂದು ವರ್ಷದಲ್ಲಿ ಭಾರತದಲ್ಲಿ ಐಫೋನ್ ಉತ್ಪಾದನೆ ಬಹಳ ಹೆಚ್ಚಳ ಕಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ