Viral Video: ಜಿಗಿಯಿರಿ ಜಿಗಿಸಿರಿ; ‘ನಾನೇನೆಂಬುದರ ಅರಿವು ನನಗಿದೆ, ಹೊಸ ಕೌಶಲ ಕಲಿಯುತ್ತಿದ್ದೇನಷ್ಟೇ’
Cat : ಬೆಕ್ಕು ಎಂದ ಮಾತ್ರಕ್ಕೆ ಬೆಕ್ಕಿನ ಹಾಗೇ ಇರಬೇಕಾ, ಮೊಲದ ಹಾಗೆ ಜಿಗಿಯುವುದನ್ನು ಕಲಿಯಬೇಡವಾ? ಎಲ್ಲದಕ್ಕೂ ತಕರಾರು ತೆಗೆಯುತ್ತೀರಲ್ಲ? ಬನ್ನಿ ನೀವೂ ನನ್ನ ಜೊತೆ ಜಂಪ್ ಮಾಡಿ!
Animal Lovers : ಮನುಷ್ಯರಿಂದ ಹಿಡಿದು ಪ್ರತೀ ಜೀವಿಯೂ ಅನುಕರಣೆಯ ಮೂಲಕವೇ ಕಲಿಯುತ್ತ ಹೋಗುವುದು. ಆಯಾ ಪ್ರಾಣಿಯ ಮರಿಗಳು ಅವುಗಳನ್ನು ಅನುಕರಿಸುತ್ತ ಬದುಕುವ ರೀತಿಯನ್ನು ಕಲಿಯುತ್ತವೆ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಈ ಬೆಕ್ಕು ತನ್ನೊಂದಿಗಿರುವ ಮೊಲದಂತೆ (Rabbit) ಜಿಗಿಯಲು ಕಲಿತಿದೆ. ನೆಟ್ಟಿಗರು ಹಾಸ್ಯಮಯವಾದ ಪ್ರತಿಕ್ರಿಯೆಗಳನ್ನು ಬರೆಯುತ್ತಿದ್ದಾರೆ. ಕೆಲವರು ಮೊಲವನ್ನು ವಹಿಸಿಕೊಂಡಿದ್ದರೆ ಇನ್ನೂ ಕೆಲವರು ಬೆಕ್ಕನ್ನು ವಹಿಸಿಕೊಂಡಿದ್ದಾರೆ. ಹಲವಾರು ಜನ ಇಬ್ಬರನ್ನೂ ವಹಿಸಿಕೊಂಡಿದ್ದಾರೆ. ನೀವು?
ಇದನ್ನೂ ಓದಿView this post on Instagram
ಈ ವಿಡಿಯೋ ಅನ್ನು ಸುಮಾರು 2 ಲಕ್ಷ ಜನ ನೋಡಿದ್ದಾರೆ. ಸುಮಾರು 43,000 ಜನರು ಲೈಕ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ನಾನು ಇಷ್ಟು ವರ್ಷದಲ್ಲಿ ನೋಡಿದ ಎಲ್ಲಾ ವಿಡಿಯೋಗಿಂತ ಇದು ಬಹಳ ಮುದ್ದಾಗಿದೆ ಎಂದಿದ್ದಾರೆ ಒಬ್ಬರು. ಓಹೋ ಮೊಲವನ್ನ ನೀನು ಅನುಕರಿಸುತ್ತಿದ್ದೀಯಾ? ಎಂದು ಕೇಳಿದ್ದಾರೆ ಒಬ್ಬರು. ಖಂಡಿತ ಇಲ್ಲ! ನಾನು ಹೊಸ ಕೌಶಲ ಕಲಿಯುತ್ತಿದ್ದೇನೆ ಎಂದು ಮತ್ತೊಬ್ಬರು ಇದಕ್ಕೆ ಪ್ರತಿಯಾಗಿ ಉತ್ತರಿಸಿದ್ದಾರೆ.
ಇದನ್ನೂ ಓದಿ : Viral Video: ನಮ್ಮೇಲ್ ನಿಮ್ಗೆ ವಿಶ್ವಾಸ ಇದೆಯಲ್ವಾ?; ಸಿಎಂ ಹಳೆಯ ಭಾಷಣಕ್ಕೆ ಲಿಪ್ಸಿಂಕ್ ಮಾಡಿದ ಯುವಕ
ಓಹೋ ಈಗ ಇನ್ನೊಂದು ಮೊಲದ ಮರಿ ತರಬೇಕು, ಆಗ ಬೆಕ್ಕು ಮತ್ತು ಮೊಲಗಳು ಒಟ್ಟಿಗೆ ಬೆಳಯುತ್ತವೆ ಎಂದಿದ್ದಾರೆ ಮತ್ತೊಬ್ಬರು. ಇದು ಹೀಗೇ ಮೊಲದೊಂದಿಗೆ ಬೆಳೆದರೆ ಕ್ಯಾರೆಟ್, ಹುಲ್ಲು ತಿಂದುಕೊಂಡೇ ಇದ್ದುಬಿಡುತ್ತದೆ ಎಂದಿದ್ದಾರೆ ಮಗದೊಬ್ಬರು.
ಇದನ್ನೂ ಓದಿ : Viral Video: ಜ್ವಾಲಾಮುಖಿಯಲ್ಲಿ ಬೇಯಿಸಿದ ಪಿಝಾ ನಿಮಗೂ ಬೇಕೆ? ಬನ್ನಿ ಗ್ವಾಟಿಮಾಲಾಗೆ
ಬೆಕ್ಕಿನಮರಿ ಕಾಲನ್ನು ಇಟ್ಟುಕೊಂಡು ಕೂತಿರುವುದನ್ನು ನೋಡಿ, ಎಷ್ಟು ಛಂದ ಎಂದಿದ್ದಾರೆ ಹಲವಾರು ಜನ. ಆಹಾ ಎಷ್ಟು ಧ್ಯಾನಸ್ಥನಾಗಿ ಈ ಜಿಗಿತವನ್ನು ಇದು ಅನುಕರಿಸುತ್ತಿದೆ, ನಿನಗೆ ಒಳ್ಳೆಯದಾಗಲಿ ಮಗು ಎಂದಿದ್ದಾರೆ ಅನೇಕರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ ಕ್ಲಿಕ್ ಮಾಡಿ
Published On - 6:52 pm, Sat, 15 July 23