AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Love in Jail: ಜೈಲಿನಲ್ಲಿ ಹುಟ್ಟಿತು ಪ್ರೀತಿ; ಪೆರೋಲ್​ನಲ್ಲಿ ಖೈದಿಗಳ ಮದುವೆ

ಜೈಲಿನಲ್ಲಿ ಪರಸ್ಪರ ಪರಿಚಯವಾಗಿ ಸ್ನೇಹ, ಪ್ರೀತಿಗೆ ತಿರುಗಿದ್ದು, ಇದೀಗಾ ಆರೋಪಿಗಳಿಬ್ಬರು ಐದು ದಿನಗಳ ಪೆರೋಲ್‌ನಲ್ಲಿ ಬಿಡುಗಡೆಯಾಗಿ ಬಂದು ಮದುವೆಯಾಗಿದ್ದಾರೆ.

Love in Jail: ಜೈಲಿನಲ್ಲಿ ಹುಟ್ಟಿತು ಪ್ರೀತಿ; ಪೆರೋಲ್​ನಲ್ಲಿ ಖೈದಿಗಳ ಮದುವೆ
ಜೈಲಿನಲ್ಲಿ ಹುಟ್ಟಿತು ಪ್ರೀತಿImage Credit source: India Today
ಅಕ್ಷತಾ ವರ್ಕಾಡಿ
|

Updated on: Jul 16, 2023 | 11:38 AM

Share

ಪಶ್ಚಿಮ ಬಂಗಾಳ: ಪ್ರೀತಿ ಎಂಬ ಮಾಯೆ ಯಾವಾಗ ಹುಟ್ಟಿಕೊಳ್ಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಪ್ರಾರಂಭದಲ್ಲಿ ಮುಗುಳುನಗೆಯಿಂದ ಪ್ರಾರಂಭವಾಗಿ ಮತ್ತೆ ಅವರೇ ಪ್ರಪಂಚವಾಗಿ ಬಿಡುತ್ತಾರೆ. ಇಂತದ್ದೇ ಪ್ರೀತಿಯೊಂದು ಜೈಲಿನಲ್ಲಿ ಇಬ್ಬರು ಖೈದಿಗಳ ಮಧ್ಯೆ ಹುಟ್ಟಿಕೊಂಡಿದೆ. ಪ್ರತ್ಯೇಕ ಕೊಲೆ ಅಪರಾಧದ ಮೇಲೆ ಜೈಲು ಸೇರಿಕೊಂಡಿದ್ದ ಖೈದಿಗಳ ಮಧ್ಯೆ ಪ್ರೀತಿ ಹುಟ್ಟಿಕೊಂಡಿದ್ದು, ಇದೀಗಾ ಆರೋಪಿಗಳಿಬ್ಬರು ಐದು ದಿನಗಳ ಪೆರೋಲ್‌ನಲ್ಲಿ ಬಿಡುಗಡೆಯಾಗಿ ಬಂದು ಮದುವೆಯಾಗಿದ್ದಾರೆ.

ಜೈಲಿನಲ್ಲಿ ಪರಸ್ಪರ ಪರಿಚಯವಾಗಿ ಸ್ನೇಹಿತರಾಗಿದ್ದ ಅಬ್ದುಲ್ ಹಸೀಮ್ ಅಸ್ಸಾಂ ಮತ್ತು ಶಹನಾರಾ ಖಾತುನ್. ಇಬ್ಬರೂ ಬರ್ಧಮಾನ್ ಸೆಂಟ್ರಲ್ ಕರೆಕ್ಷನಲ್ ಹೋಮ್‌ನಲ್ಲಿ ಭೇಟಿಯಾಗಿದ್ದರು. ಅಬ್ದುಲ್ ಹಸೀಮ್ ಅಸ್ಸಾಂನವರು ಮತ್ತು ಶಹನಾರಾ ಖಾತುನ್ ಪಶ್ಚಿಮ ಬಂಗಾಳದವರು. ಹಾಸಿಮ್‌ಗೆ 8 ವರ್ಷ ಮತ್ತು ಶಹನಾರಾಗೆ 6 ವರ್ಷ ಶಿಕ್ಷೆ ವಿಧಿಸಲಾಗಿತ್ತು. ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಇಬ್ಬರಿಗೂ ಆಗಾಗ ಭೇಟಿಯಾಗುತ್ತಿದ್ದರಿಂದ ಸ್ನೇಹ ಬೆಳೆದು, ಅದು ಪ್ರೀತಿಯಾಗಿ ತಿರುಗಿದೆ.

ಇದನ್ನೂ ಓದಿ: ಮಕ್ಕಳ ಬ್ಯಾಗ್​​​​​ ತಲೆಯಡಿಗಿಟ್ಟು ತರಗತಿಯಲ್ಲೇ ನಿದ್ದೆಗೆ ಜಾರಿದ ಶಿಕ್ಷಕ

ಪ್ರೀತಿಯ ಕುರಿತು ಖೈದಿಗಳಿಬ್ಬರು ಕುಟುಂಬಗಳಿಗೆ ತಿಳಿಸಿದ ನಂತರ ಮದುವೆಯಾಗಲು ನಿರ್ಧರಿಸಿದ್ದರು. ಬುಧವಾರ, ಅಬ್ದುಲ್ ಹಾಸಿಮ್ ಮತ್ತು ಶಹನಾರಾ ಖಾತುನ್ ಅವರನ್ನು ಐದು ದಿನಗಳ ಪೆರೋಲ್‌ನಲ್ಲಿ ಬಿಡುಗಡೆ ಮಾಡಲಾಗಿದ್ದು, ಪೂರ್ವ ಬರ್ಧಮಾನ್‌ನ ಮೊಂಟೇಶ್ವರ ಬ್ಲಾಕ್‌ನ ಕುಸುಮ್‌ಗ್ರಾಮ್‌ನಲ್ಲಿ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: