AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mandya: ಕುಮಾರಸ್ವಾಮಿಯವರಿಗೆ ನನ್ನ ಮೇಲೆ ಪ್ರೀತಿಯೋ, ದ್ವೇಷವೋ ಗೊತ್ತಾಗುತ್ತಿಲ್ಲ: ಎನ್ ಚಲುವರಾಯಸ್ವಾಮಿ, ಸಚಿವ

Mandya: ಕುಮಾರಸ್ವಾಮಿಯವರಿಗೆ ನನ್ನ ಮೇಲೆ ಪ್ರೀತಿಯೋ, ದ್ವೇಷವೋ ಗೊತ್ತಾಗುತ್ತಿಲ್ಲ: ಎನ್ ಚಲುವರಾಯಸ್ವಾಮಿ, ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 15, 2023 | 2:49 PM

2018-19 ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ, ಪತ್ರಿಕೆಯೊಂದು ವರ್ಗಾವಣೆ ದಂಧೆ ಆರೋಪಿಸಿ ರೇಟ್ ಕಾರ್ಡ್ ಪ್ರಕಟಿಸಿದ್ದನ್ನು ಚೆಲುವರಾಯಸ್ವಾಮಿ ಹೇಳಿದ್ದರು.

ಮಂಡ್ಯ: ಕೃಷಿ ಸಚಿವ ಎನ್ ಚಲುವರಾಯಸ್ವಾಮಿ (N Cheluvarayaswamy) ಮತ್ತು ಶಾಸಕ ಹೆಚ್ ಡಿ ಕುಮಾರಸ್ವಾಮಿ (Kumaraswamy) ಹಿಂದೆ ಒಂದೇ ದೋಣಿಯ ಪಯಣಿಕರಾಗಿದ್ದರು ಆದರೆ ಈಗ ದೋಣಿಗಳು ಬೇರೆಯಾಗಿವೆ. ಹಾಗಾಗಿ ಅವರ ನಡುವೆ ಸದನದೊಳಗೆ ಮತ್ತು ಹೊರಗೆ ಅರೋಪ-ಪ್ರತ್ಯಾರೋಪಗಳು ನಡೆಯುತ್ತಿರುತ್ತವೆ. ಮೊನ್ನೆ ಸದನದಲ್ಲಿ ಕುಮಾರಸ್ವಾಮಿ ಸರ್ಕಾರ ವರ್ಗಾವಣೆ ಧಂದೆ (transfer deals) ನಡೆಸುತ್ತಿದೆ ಅಂತ ಆರೋಪಿಸಿ ಒಂದು ರೇಟ್ ಕಾರ್ಡ್ ಅನ್ನು ಪ್ರದರ್ಶಿಸಿದ್ದರು. ಅದಕ್ಕೆ ಪ್ರತಿಯಾಗಿ 2018-19 ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ, ಪತ್ರಿಕೆಯೊಂದು ವರ್ಗಾವಣೆ ದಂಧೆ ಆರೋಪಿಸಿ ರೇಟ್ ಕಾರ್ಡ್ ಪ್ರಕಟಿಸಿದ್ದನ್ನು ಚೆಲುವರಾಯಸ್ವಾಮಿ ಹೇಳಿದ್ದರು. ಕುಮಾರಸ್ವಾಮಿ ಅವರಿಗ್ಯಾಕೆ ಕೃಷಿ ಇಲಾಖೆ ಮತ್ತು ಅದರ ಸಚಿವರ ಹೆಚ್ಚು ಗಮನ ಅಂತ ಮಾಧ್ಯಮದವರು ಕೇಳಿದಾಗ, ಅದು ಅವರ ಪ್ರೀತಿಯೋ ಅಥವಾ ಹಗೆಯೋ ಗೊತ್ತಾಗುತ್ತಿಲ್ಲ, ಪ್ರೀತಿಯಾದರೂ ಸರಿ ದ್ವೇಷವಾದರೂ ಸರಿ ಎಂದು ಚಲುವರಾಯಸ್ವಾಮಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ