AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನೀವು ಕೊಟ್ಟ ಮುತ್ತನ್ನು ಅದು ವಾಪಾಸು ಮರಳಿಸಿಬಿಟ್ಟರೆ?

Cobra : ''ನಿಜಕ್ಕೂ ನೀವು ಮೃತ್ಯುವನ್ನು ಆಹ್ವಾನಿಸಿಕೊಳ್ಳುತ್ತಿದ್ದೀರಿ. ಹಾವುಪ್ರಿಯರು ಹಾವಿನಿಂದಲೇ ಮರಣವನ್ನಪ್ಪುತ್ತಾರೆ ಎನ್ನುವ ಸತ್ಯ ನಿಮಗೆ ತಿಳಿದಿದೆಯೇ? ಸುಮ್ಮನೆ ಇಂಥ ಹುಚ್ಚಾಟಕ್ಕೆ ಇಳಿಯಬೇಡಿ ಮತ್ತು ಇತರರನ್ನು ಪ್ರೇರೇಪಿಸಬೇಡಿ.''

Viral Video: ನೀವು ಕೊಟ್ಟ ಮುತ್ತನ್ನು ಅದು ವಾಪಾಸು ಮರಳಿಸಿಬಿಟ್ಟರೆ?
ನಾಗರಹಾವಿನ ನೆತ್ತಿಗೆ ಮುತ್ತಿಡುತ್ತಿರುವ ಹಾವುಪ್ರಿಯ
ಶ್ರೀದೇವಿ ಕಳಸದ
|

Updated on:Jul 15, 2023 | 5:25 PM

Share

Kissing : ಹಾವು ಹಿಡಿಯುವವರು ಅಥವಾ ಹಾವುಪ್ರಿಯರು ಹಾವು ಕಡಿತದಿಂದಲೇ ಸಾಯುತ್ತಾರೆ ಎನ್ನುವ ಸತ್ಯ ನಿಮಗೆ ಗೊತ್ತಿದೆಯೇ? ಏಕೆ ಇಂಥ ಹುಚ್ಚು ಸಾಹಸಗಳಿಗೆ ತೆರೆದುಕೊಳ್ಳುತ್ತಿದ್ದೀರಿ? ಒಂದೊಮ್ಮೆ ಅದು ತಿರುಗಿ ನಿಮಗೆ ಮುತ್ತಿಟ್ಟರೆ ಪರಿಸ್ಥಿತಿ ಏನಾಗಬಹುದು ಎಂದು ಊಹಿಸಿದ್ದೀರಾ? ಚುಂಬಿಸುವ ಪ್ರಯತ್ನದಲ್ಲಿ ಅದೆಷ್ಟು ಬಾರಿ ನಾಗರಹಾವಿನಿಂದ (Cobra) ಕಡಿಸಿಕೊಂಡಿದ್ದೀರೋ ಏನೋ. ಒಟ್ಟಾರೆಯಾಗಿ ಇದು ಭಯಾನಕವಾಗಿದೆ. ದಯವಿಟ್ಟು ಇಂಥವನ್ನೆಲ್ಲ ಪ್ರಯತ್ನಿಸಬೇಡಿ. ಈ ವಿಡಿಯೋ ನೋಡಿದ ಕೆಲವರು ಅನುಕರಿಸಲು ಹೋಗಿ ಜೀವಕ್ಕೆ ಅಪಾಯ ತಂದುಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ನೆಟ್ಟಿಗರು ಬುದ್ಧಿವಾದ ಹೇಳುತ್ತಿದ್ದಾರೆ ಈ ಯುವಕನಿಗೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Animal and Reptile Addict (@nickthewrangler)

ಅಣ್ಣಾ ಈ ವಿಡಿಯೋ ತುಂಬಾ ಸುಂದರವಾಗಿದೆ. ಆದರೆ ಹುಷಾರು, ನಿನ್ನ ಕತ್ತಿನಲ್ಲಿ ನೇತಾಡುತ್ತಿರುವ ಚೈನು ಅದಕ್ಕೆ ತಾಗಿದರೆ ಪರಿಣಾಮ ಏನಾಗಬಹುದೆಂದು ಗೊತ್ತಿದೆಯೇ? ಎಂದಿದ್ದಾರೆ ಒಬ್ಬರು. ಅಯ್ಯೋ ನೀವು ನನ್ನ ಹಳೆಯ ಪ್ರೇಮಿಗೆ ಯಾಕೆ ಚುಂಬಿಸುತ್ತಿದ್ದೀರಿ? ಎಂದು ತಮಾಷೆ ಮಾಡಿದ್ದಾರೆ ಇಬ್ಬೊಬ್ಬರು. ಅಯ್ಯೋ ನೀವು ಚುಂಬಿಸಿದ ರೀತಿಗೆ ಅವನು ಸುಸ್ತಾಗಿರಬೇಕು, ಸ್ವಲ್ಪ ಕಾಯಿರಿ ನಿಮ್ಮನ್ನು ವಾಪಾಸು ಚುಂಬಿಸುತ್ತಾನೆ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral: ಒಂಟಿತನ ಕಾಡುತ್ತಿದೆಯೇ? ಬಾಡಿಗೆ ಗೆಳತಿಯನ್ನು ನೇಮಿಸಿಕೊಳ್ಳಿ!

ವಿಷಪೂರಿತ ಸಂಬಂಧದ ವ್ಯಾಖ್ಯಾನ (Toxic Relationship) ಇದೇ ಅಲ್ಲವೇನೋ ಅಣ್ಣಯ್ಯಾ? ಎಂದಿದ್ದಾರೆ ಮತ್ತೊಬ್ಬರು. ಕಿಸ್ ಆಫ್​ ಡೆಥ್​ ಎಂದರೆ ಇದೇ ಅಲ್ಲವಾ ಎಂದಿದ್ದಾರೆ ಮಗದೊಬ್ಬರು. ಅತ್ಯಂತ ಸ್ಪಷ್ಟವಾಗಿ ಈತ ಸಾವನ್ನು ಆಹ್ವಾನಿಸುತ್ತಿದ್ದಾನೆ ಎಂದಿದ್ದಾರೆ ಇನ್ನೂ ಒಬ್ಬರು.

ಇದನ್ನೂ ಓದಿ : Viral Video: ಶ್ರೀಮಂತರು ಷೋಕಿಗಾಗಿ ನಾಯಿ ಸಾಕುತ್ತಾರೆ, ಅವರು ಪ್ರೀತಿಸುವುದಿಲ್ಲ; ನೆಟ್ಟಿಗರ ಚರ್ಚೆ

ಈತನಕ ಸುಮಾರು 1 ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ. ಸುಮಾರು 14,000 ಜನರು ಲೈಕ್ ಹಾಕಿದ್ದಾರೆ. ನೂರಾರು ಜನರು ಈ ಹಾವುಪ್ರಿಯನಿಗೆ ಜಾಗ್ರತೆಯಾಗಿ ಇರುವಂತೆ ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:25 pm, Sat, 15 July 23

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?