Viral: ಇವನ ರುಂಡವೆಲ್ಲಿ ಹೋಯಿತು? ನೆಟ್ಟಿಗರಂತೂ ಕಂಗಾಲಾಗಿದ್ದಾರೆ

Brain Teaser : ಈ ವ್ಯಕ್ತಿ ಪ್ರಯಾಣಿಸುತ್ತಿದ್ದಾನೆ. ಆದರೆ ಅವನ ರುಂಡವೇ ಕಾಣುತ್ತಿಲ್ಲ. ಇದು ಭ್ರಮಾತ್ಮಕ ಚಿತ್ರವೋ ವಾಮಾಚಾರವೋ ಎನ್ನುತ್ತಿದ್ದಾರೆ ನೆಟ್ಟಿಗರು. ನಿಮಗೇನಾದರೂ ಉತ್ತರ ಹೊಳೆಯುವುದಾ ನೋಡಿ?

Viral: ಇವನ ರುಂಡವೆಲ್ಲಿ ಹೋಯಿತು? ನೆಟ್ಟಿಗರಂತೂ ಕಂಗಾಲಾಗಿದ್ದಾರೆ
ರುಂಡವೆಲ್ಲಿ?
Follow us
ಶ್ರೀದೇವಿ ಕಳಸದ
|

Updated on: Jul 15, 2023 | 3:56 PM

Optical Illusion : ನಿಮ್ಮ ಮೆದುಳನ್ನು ಕಣ್ಣು, ಕಣ್ಣನ್ನು ಮೆದುಳು ನಂಬಲಾರದಂಥ ಸಂದಿಗ್ಧವನ್ನು ಇಂಥ ಭ್ರಮಾತ್ಮಕ ಚಿತ್ರಗಳು ಸೃಷ್ಟಿಸುತ್ತಿರುತ್ತವೆ. ಈ ಪ್ರಕ್ರಿಯೆನ್ನು ಹುಟ್ಟುಹಾಕುವುದೇ ಇವುಗಳ ಗುಣ. ಆದರೂ ನಿಜಾಂಶ ಏನೆಂದು ತಿಳಿದುಕೊಳ್ಳಲು ನಿಮ್ಮನ್ನು ಇಂಥ ಚಿತ್ರಗಳು ಬಲವಾಗಿ ಪ್ರೇರೇಪಿಸುತ್ತವೆ. ಇದೀಗ ಮತ್ತೊಂದು ಆಪ್ಟಿಕಲ್ ಇಲ್ಲ್ಯೂಷನ್​ ವೈರಲ್ ಆಗುತ್ತಿದೆ. ಇದು ಅಪ್ಪಟ ಮನರಂಜನೆಗಾಗಿ ಇರುವ ಚಿತ್ರ. ಒಬ್ಬ ವ್ಯಕ್ತಿ ಇಲ್ಲಿ ಕುಳಿತಿದ್ದಾನೆ. ಆದರೆ ಅವನ ತಲೆಯೇ ಇಲ್ಲ! ನೆಟ್ಟಿಗರೆಲ್ಲ ತಲೆಕೆರೆದುಕೊಳ್ಳುತ್ತಿದ್ದಾರೆ. ನೀವು?

Just a guy wearing a hoodie by u/zaferemre in confusing_perspective

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ರುಂಡವೇ ಇಲ್ಲದ ಈ ವ್ಯಕ್ತಿ ಕಪ್ಪು ಬಟ್ಟೆ ಹಾಕಿಕೊಂಡು ಬಸ್ ಅಥವಾ ಟ್ರೇನ್​ನಲ್ಲಿ ಕುಳಿತಹಾಗಿದೆ. ತನ್ನ ಜಾಕೇಟಿನಲ್ಲಿ ಕೈ ಇಳಿಬಿಟ್ಟುಕೊಂಡು ನೇರವಾಗಿ ಕುಳಿತಿದ್ದಾನೆ. ಯಾವ ಊರಿಗೆ ಹೊರಟಿದ್ದಾನೋ ಏನೋ. ಈ ಚಿತ್ರವನ್ನು ನೋಡಿದ ಅನೇಕ ನೆಟ್ಟಿಗರ ಎದೆಬಡಿತವಂತೂ ಜೋರಾಗಿದೆ. ಆದರೂ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ. ಉತ್ತರ ಕಂಡುಕೊಳ್ಳಲು ನನಗಂತೂ ಬಹಳ ಸಮಯ ತೆಗೆದುಕೊಂಡಿತು ಎಂದಿದ್ದಾರೆ ಅನೇಕರು.

ಇದನ್ನೂ ಓದಿ : Viral: ಒಂಟಿತನ ಕಾಡುತ್ತಿದೆಯೇ?;ಬಾಡಿಗೆ ಗೆಳತಿಯನ್ನು ನೇಮಿಸಿಕೊಳ್ಳಿ!

ಭುಜದ ಮೇಲೆ ಕಾಲರ್​ನಂತೆ ಕಾಣುತ್ತಿರು ಆ ಪಟ್ಟಿಯನ್ನು ನೋಡಿದರೆ ಬಹಳ ಗೊಂದಲ ಉಂಟಾಗುತ್ತಿದೆ ಎಂದು ಹೇಳಿದ್ದಾರೆ ಕೆಲವರು. ಅವನ ತಲೆ ಬಲಕ್ಕೆ ವಾಲಿದೆ ಎನ್ನಿಸುತ್ತಿದೆ ಎಂದು ಒಬ್ಬರು. ಅವನನ್ನು ನಾನು ಕನ್ನಡಿಯಲ್ಲಿ ನೋಡುತ್ತಿದ್ದೇನಾ ಎಂದು ಇನ್ನೊಬ್ಬರು. ನನಗೇನೂ ಅರ್ಥವೇ ಆಗುತ್ತಿಲ್ಲ ಎಂದು ಮತ್ತೊಬ್ಬರು. ಯಾರೋ ವಾಮಾಚಾರ ಮಾಡಿಸಿದಂತೆ ಕಾಣುತ್ತಿದೆ ಎಂದು ಮಗದೊಬ್ಬರು.

ಇದನ್ನೂ ಓದಿ : Viral Video: ಶ್ರೀಮಂತರು ಷೋಕಿಗಾಗಿ ನಾಯಿ ಸಾಕುತ್ತಾರೆ, ಅವರು ಪ್ರೀತಿಸುವುದಿಲ್ಲ; ನೆಟ್ಟಿಗರ ಚರ್ಚೆ

ನಾಲ್ಕು ವರ್ಷಗಳ ಹಿಂದೆ ರೆಡ್ಡಿಟ್​ನಲ್ಲಿ ಹಂಚಿಕೊಂಡ ಈ ಪೋಸ್ಟ್​ ಇದೀಗ ವೈರಲ್ ಆಗುತ್ತಿದೆ. ಈತನಕ ಸುಮಾರು 59,000 ಅಪ್‌ವೋಟ್‌ಗಳನ್ನು ಇದು ಗಳಿಸಿದೆ. ಈ ಚಿತ್ರವನ್ನು ನೋಡಿದ ನಿಮಗೆ ಆತನ ರುಂಡ ಏನಾಯಿತು ಎನ್ನುವುದೇನಾದರೂ ತಿಳಿಯಿತೆ?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ