AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕೋಯೀ ಲಡ್ಕೀ ಹೈ; ಅಜ್ಜನ ಡ್ಯಾನ್ಸ್​ ಗೆ ನೆಟ್ಟಿಗರ ಚಪ್ಪಾಳೆ

Dil To Pagal Hai : ಕುಣಿಯಬೇಕೆನ್ನಿಸಿದರೆ ಕುಣಿದು ಬಿಡಬೇಕು, ಅದು ಯಾವ ಹಾಡಿಗೂ ಮತ್ತು ಎಲ್ಲಿಯೂ, ಯಾರೆದುರೂ. ಈ ಅಜ್ಜ 'ದಿಲ್​ ತೋ ಪಾಗಲ್​ ಹೈ' ಸಿನೆಮಾಗೆ ಲಿಪ್​ ಸಿಂಕ್ ಮಾಡುತ್ತ ಡ್ಯಾನ್ಸ್​ ಮಾಡಿದ್ದಾರೆ. ಇವರ ಉತ್ಸಾಹ ನೋಡಿ.

Viral Video: ಕೋಯೀ ಲಡ್ಕೀ ಹೈ; ಅಜ್ಜನ ಡ್ಯಾನ್ಸ್​ ಗೆ ನೆಟ್ಟಿಗರ ಚಪ್ಪಾಳೆ
ಸ್ನೇಹಿತರೆದುರು ನರ್ತಿಸುತ್ತಿರುವ ವಿಜಯ್ ಖತೋಠೆ
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:Jul 15, 2023 | 12:17 PM

Share

Senior Citizen : ಶಾರುಖ್ ಖಾನ್​, ಮಾಧುರಿ ದಿಕ್ಷಿತ್ (Madhuri Dixit) ಮತ್ತು ಕರೀಷ್ಮಾ ಕಪೂರ್​​ ನಟಿಸಿರುವ ದಿಲ್ ತೋ ಪಾಗಲ್​ ಹೈ  ಯಾರಿಗೆ ತಾನೆ ಮರೆಯಲು ಸಾಧ್ಯ? ಮಕ್ಕಳಿಂದ ಮುದುಕರವರೆಗೂ ಈ ಸಿನೆಮಾದ ಹಾಡುಗಳು ಗುಂಗು ಹಿಡಿಸಿವೆ. ಉದಿತ್ ನಾರಾಯಣ ಮತ್ತು ಲತಾ ಮಂಗೇಶ್ಕರ್ ಹಾಡಿರುವ ‘ಕೋಯೀ ಲಡ್ಕೀ ಹೈ’ ಅಂತೂ ಎಂಥವರನ್ನು ಕುಣಿಯುವಂತೆ ಮಾಡುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ವೃದ್ಧರೊಬ್ಬರು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನೆಟ್ಟಿಗರೆಲ್ಲ ಈ ಉತ್ಸಾಹ ಮತ್ತುಸಂತೋಷ ನಿಮ್ಮಲ್ಲಿ ಹೀಗೆಯೇ ಇರಲಿ ಎಂದು ಹಾರೈಸುತ್ತಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Vijay Kharote (@kharotevijay)

ಈ ವಿಡಿಯೋದಲ್ಲಿ ನರ್ತಿಸಿರುವವರು ವಿಜಯ್ ಖರೋಠೆ. ತಮ್ಮ ಸ್ನೇಹಿತರೆದುರು ಈ ಹಾಡಿಗೆ ಲಿಪ್​ ಸಿಂಕ್​ ಮಾಡಿ ಡ್ಯಾನ್ಸ್ ಮಾಡಿದ್ದಾರೆ. ಅಂಕಲ್, ನಿಮ್ಮ ಡ್ಯಾನ್ಸ್​ ನೋಡಿ ನಮಗೂ ಕುಣಿಯಬೇಕು ಎನ್ನಿಸುತ್ತಿದೆ, ನಿಮ್ಮ ಈ ಸಂತೋಷವನ್ನು ಯಾವತ್ತೂ ಕಾಯ್ದುಕೊಳ್ಳಿ ಎನ್ನುತ್ತಿದ್ದಾರೆ ನೆಟ್ಟಿಗರು. ನಿಮ್ಮನ್ನು ಮತ್ತು ನಿಮ್ಮ ಸ್ನೇಹಿತರನ್ನು ನೋಡಿ ಮನಸ್ಸು ತುಂಬಿ ಬರುತ್ತಿದೆ, ನಿಮ್ಮ ಗುಂಪಿನೊಳಗೆ ನಾನೂ ಇರಬೇಕಿತ್ತು ಎಂದು ಮತ್ತೊಬ್ಬರು ಹೇಳಿದ್ದಾರೆ. ಇವರು ನಮ್ಮ ಏರಿಯಾದಲ್ಲಿಯೇ ಇರುತ್ತಾರೆ. ಇವರನ್ನು ನೋಡಿ ಬಹಳ ಖುಷಿ ಆಯಿತು ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ :Viral: ದರೋಡೆಕೋರ ಮೀನು; ಸಮುದ್ರದಾಳದಲ್ಲಿಯೂ ಕಳ್ಳರಿದ್ದಾರೆ ಎಚ್ಚರಿಕೆ!

ಜು. 1 ರಂದು ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. 4.5 ಲಕ್ಷಕ್ಕೂ ಹೆಚ್ಚು ಜನ ಇದನ್ನು ಲೈಕ್ ಮಾಡಿದ್ದಾರೆ. ಎಂಟು ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. ಸಾವಿರಾರು ಜನರು ತಮ್ಮ ಪ್ರತಿಕ್ರಿಯೆಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲರೊಳಗೂ ಮಗುತನ ಇರುತ್ತದೆ. ಅದಕ್ಕೂ ಕುಣಿಯಬೇಕು, ಖುಷಿಯಿಂದ ಇರಬೇಕು ಎಂದು ಬಯಸುತ್ತಿರುತ್ತದೆ. ಸಿಕ್ಕ ಅವಕಾಶದಲ್ಲಿ ಅದು ಸಂತೋಷಿಸುತ್ತದೆ. ಹಾಗೆಯೇ ನಿಮ್ಮೊಳಗಿರುವ ಪುಟ್ಟ ಮಗುವನ್ನೂ ಕಾಪಾಡಿಕೊಳ್ಳಬೇಕೆಂದರೆ, ನಿಮಗೆ ಖುಷಿ ಎನ್ನಿಸುವ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:16 pm, Sat, 15 July 23

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ