AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ಹುಷಾರ್​! ನಾನು ಟೊಮ್ಯಾಟೋ ಕಾವಲುಗಾರ ನಾಗರಾಜ’

Cobra : ಹೊಲವೊಂದರಲ್ಲಿ ಟೊಮ್ಯಾಟೋ ಕಳ್ಳತನದ ಪ್ರಕರಣ ನಾಗರಾಜನ ಕಿವಿಗೂ ಬಿತ್ತೆ? ತಾನೇ ಸ್ವತಃ ಟೊಮ್ಯಾಟೋ ಕಾಯಲು ಬಂದಿದ್ದಾನೆ. ನೋಡಿ ವೈರಲ್ ಆಗುತ್ತಿರುವ ಈ ವಿಡಿಯೋ.

Viral Video: 'ಹುಷಾರ್​! ನಾನು ಟೊಮ್ಯಾಟೋ ಕಾವಲುಗಾರ ನಾಗರಾಜ'
ಟೊಮ್ಯಾಟೋ ಕಾಯುತ್ತಿದ್ದಾನೆಯೇ ನಾಗರಾಜ?
ಶ್ರೀದೇವಿ ಕಳಸದ
|

Updated on:Jul 15, 2023 | 10:32 AM

Share

Tomato : ಎರಡು ತಿಂಗಳ ಹಿಂದೆಯಷ್ಟೇ ಒಂದು ಕಿ. ಗ್ರಾಂಗೆ ರೂ. 20 ಇದ್ದ ಟೊಮ್ಯಾಟೋ ಇದೀಗ ರೂ. 150 ದಾಟಿದೆ. ಏರಿದ ಬೆಲೆ ಇಳಿಯದ ಕಾರಣ ಹತಾಶೆಗೊಂಡ ಜನರು ಸಾಮಾಜಿಕ ಜಾಲತಾಣದಲ್ಲಿ (Social Media) ಹೆಚ್ಚು ಸೃಜನಶೀಲರಾಗುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಸಹೋದರನೊಬ್ಬ ಸಹೋದರಿಯ ಹುಟ್ಟುಹಬ್ಬಕ್ಕೆ 4 ಕಿ. ಗ್ರಾಂ ಟೊಮ್ಯಾಟೋ ಉಡುಗೊರೆಯಾಗಿ ಕೊಟ್ಟಿದ್ದಾರೆ. ಈ ಎಲ್ಲದರ ಮಧ್ಯೆ ಹೊಲವೊಂದರಲ್ಲಿ ಟೊಮ್ಯಾಟೋ ಕಳ್ಳತನವಾದ ಪ್ರಕರಣವೂ ಬೆಳಕಿಗೆ ಬಂದಿದೆ. ಈ ಸುದ್ದಿ ನಾಗರಾಜನಿಗೂ (Cobra) ತಲುಪಿತೋ ಏನೋ, ಅವನು ಸ್ವತಃ ಟೊಮ್ಯಾಟೊ ಕಾಯಲು ಪಣ ತೊಟ್ಟು ನಿಂತಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Mirza Md Arif (@mirzamdarif1)

ತಟ್ಟೆಗಳಲ್ಲಿ ತುಂಬಿಟ್ಟಿರುವ ಟೊಮ್ಯಾಟೊಗಳ ಹಿಂದೆ ಕುಳಿತಿರುವ ನಾಗರಾಜ ಹೆಡೆಬಿಚ್ಚಿ ಹಿಸ್​ ಹಿಸ್​ ಎನ್ನುತ್ತಿದ್ದಾನೆ. ಈ ವಿಡಿಯೋ ಅನ್ನು ಇನ್​ಸ್ಟಾಗ್ರಾಂನ ಮಿರ್ಜಾ ಎಂಡಿ ಆರೀಫ್​ ಎಂಬ ಖಾತೆದಾರರು ಪೋಸ್ಟ್ ಮಾಡಿದ್ದಾರೆ. ಅನೇಕರು ಈ ವಿಡಿಯೋ ನೋಡಿ ಹಾಸ್ಯದ ಚಟಾಕಿ ಹಾರಿಸುತ್ತಿದ್ದಾರೆ. ಮಾವಿನಕಾಯಿಗಿಂತಲೂ ಟೊಮ್ಯಾಟೋ ತುಟ್ಟಿಯಾಗಿದೆ ಎನ್ನುತ್ತಿದ್ದಾರೆ.

ಇದನ್ನೂ ಓದಿ : Viral Video: ಶಾಂತಿಮಂತ್ರದ ನಂತರವೇ ಊಟಮಾಡುವ ಸನಾತನ ಸಂಸ್ಕಾರದ ಶ್ವಾನ

ನಾಗದೇವರು ನಿಧಿಯನ್ನು ಹೇಗೆ ಕಾಪಾಡುತ್ತಾನೋ ಹಾಗೆ ಇದೀಗ ಬಂಗಾರದಂತಿರುವ ಟೊಮ್ಯಾಟೋವನ್ನು ಕಾಯುತ್ತಿದ್ದಾನೆ ಎಂದು ಒಬ್ಬರು ಹೇಳಿದ್ದಾರೆ. ನಮ್ಮ ಊರಲ್ಲಿ 1 ಕಿ.ಗ್ರಾಂಗೆ ರೂ. 130 ಎಂದಿದ್ದಾರೆ ಮತ್ತೊಬ್ಬರು. ಅಲ್ಲದೆ, ಮಧ್ಯಪ್ರದೇಶದ ಅಶೋಕನಗರದ ಅಂಗಡಿಯೊಂದರಲ್ಲಿ ಮೊಬೈಲ್​ ಖರೀದಿಸಿದರೆ 2 ಕಿ. ಗ್ರಾಂ ಟೊಮ್ಯಾಟೋವನ್ನು ಉಚಿತ ಉಡುಗೊರೆಯಂತೆ ಕೊಡಲಾಗುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ : Viral: ಡೆಲಿವರಿ ಏಜೆಂಟರುಗಳಿಗಾಗಿ ರಿಲ್ಯಾಕ್ಸ್​ ಸ್ಟೇಷನ್​; ನೆಟ್ಟಿಗರ ಹೃದಯಗೆದ್ದ ಯುವಕ

ನಿಮ್ಮೂರಲ್ಲಿ ಟೊಮ್ಯಾಟೋ ಬೆಲೆ ಏನು? ಎಷ್ಟು ದಿನದಿಂದ ನಿಮ್ಮ ಮನೆಗೆ ಟೊಮ್ಯಾಟೋ ತಂದಿಲ್ಲ? ಟೊಮ್ಯಾಟೋ ಇಲ್ಲದ ಅಡುಗೆ ರುಚಿಸುತ್ತಿದೆಯೇ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:27 am, Sat, 15 July 23

ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ