Viral Video: ಸಹೋದರಿಯ ಹುಟ್ಟುಹಬ್ಬಕ್ಕೆ 4 ಕಿಗ್ರಾಂ ಟೊಮ್ಯಾಟೋ ಉಡುಗೊರೆ
Tomato : ಇನ್ನೇನು ಇವರ ಮನೆಯಲ್ಲಿ ಟೊಮ್ಯಾಟೋ ರಸಂ, ಟೊಮ್ಯಾಟೋ ಬಾತ್, ಟೊಮ್ಯಾಟೋ ಸಾರು, ಟೊಮ್ಯಾಟೋ ಸೂಪ್, ಟೊಮ್ಯಾಟೋ ಚಾಟ್... ಎಂದು ನೆಟ್ಟಿಗರು ಟೊಮ್ಯಾಟೋ ಜಪ ಮಾಡುತ್ತ ಕುಳಿತಿ್ದ್ದಾರೆ. ನೀವು?
Maharashtra : ಟೊಮ್ಯಾಟೋ ಸುತ್ತ ಮೀಮ್, ಜೋಕ್, ರೀಲ್ಗಳ ಓಡಾಟ ಇದೀಗ ಇನ್ನೂ ಹೆಚ್ಚಾಗಿದೆ. ಇದರರ್ಥ ಟೊಮ್ಯಾಟೋ ((Tomato) ಬೆಲೆ ಇನ್ನೂ ಇಳಿದಿಲ್ಲ. ಇದೀಗ ಮಹಾರಾಷ್ಟ್ರದಲ್ಲಿ ಸೋದರನೊಬ್ಬ ಸೋದರಿಯ ಹುಟ್ಟುಹಬ್ಬಕ್ಕೆ ಟೊಮ್ಯಾಟೋಗಳನ್ನು ಉಡುಗೊರೆಯಾಗಿ ಕೊಟ್ಟು ಆಕೆಯಲ್ಲಿ ಅಚ್ಚರಿ ಮತ್ತು ಸಂಭ್ರಮ ಮೂಡಲು ಕಾರಣನಾಗಿದ್ದಾನೆ. ಕಲ್ಯಾಣದ ಕೊಚಾಡಿಯಲ್ಲಿ ಜು. 5ರಂದು ಈ ಘಟನೆ ನಡೆದಿದೆ. ಸೋನಮ್ ಬೋರ್ಸೆ ತನ್ನ ಸಹೋದರ ಮತ್ತು ಚಿಕ್ಕಮ್ಮ ಚಿಕ್ಕಪ್ಪರಿಂದ ನಾಲ್ಕು ಕಿ.ಗ್ರಾಂ ನಷ್ಟು ಟೊಮ್ಯಾಟೋಗಳನ್ನು ಉಡುಗೊರೆಯಾಗಿ ಪಡೆದಿದ್ದಾರೆ.
ದೇಶಾದ್ಯಂತ ಜನರು ಟೊಮ್ಯಾಟೋ ಬೆಲೆ ಏರಿದ್ದನ್ನು ನೋಡಿ, ಟೊಮ್ಯಾಟೋ ತರುವುದನ್ನೇ ನಿಲ್ಲಿಸಿದ್ದಾರೆ. ಹೀಗಿದ್ದಾಗ ಒಟ್ಟಿಗೆ ನಾಲ್ಕು ಕಿ. ಗ್ರಾಂ ಟೊಮ್ಯಾಟೋ ಕಣ್ಣೆದುರಿಗಿದ್ದರೆ ಹೇಗಾಗಬೇಡ? ಮಹಾರಾಷ್ಟ್ರದಲ್ಲಿ ಒಂದು ಕೇಜಿಗೆ ರೂ. 140ರಿಂದ 180. ಸೋನಮ್, ‘ನನ್ನ ಹುಟ್ಟುಹಬ್ಬಕ್ಕೆ ಏನೆಲ್ಲಾ ಉಡುಗೊರೆಗಳನ್ನು ಪಡೆದಿದ್ದೇನೆ. ಆದರೆ ಈವತ್ತಿನ ಈ ಉಡುಗೊರೆ ಮರೆಯಲಾರದಂಥದ್ದು, ನಾನು ತುಂಬಾ ಖುಷಿಗೊಂಡಿದ್ದೇನೆ’ ಎಂದಿದ್ದಾರೆ.
ಇದನ್ನೂ ಓದಿ : Viral Video: ಸ್ವಾಮಿ ವಿವೇಕಾನಂದರನ್ನು ಗೇಲಿ ಮಾಡಿದ ಅಮೋಘ ಲೀಲಾ ದಾಸ್; ಇಸ್ಕಾನ್ ಖಂಡನೆ
ಈ ವಿಡಿಯೋ ನೋಡಿದ ನೆಟ್ಟಿಗರು, ಎಂಥಾ ಭಾಗ್ಯವಂತೆ ಈ ಹೆಣ್ಣುಮಗಳು ಎಂದು ನಗುತ್ತಲೇ ಪ್ರತಿಕ್ರಿಯಿಸುತ್ತಿದ್ದಾರೆ. ಇನ್ನೇನು ಬರ್ತಡೇ ಸ್ಪೆಷಲ್, ಟೊಮ್ಯಾಟೋ ಸೂಪ್, ಟೊಮ್ಯಾಟೋ ರೈಸ್, ಟೊಮ್ಯಾಟೋ ಆಮ್ಲೇಟ್, ಟೊಮ್ಯಾಟೋ ಸಾರು…? ಎಂದೊಬ್ಬರು ಕೇಳಿದ್ದಾರೆ. ಇಲ್ಲ ಇಲ್ಲ, ನಾಲ್ಕು ಕೇಜಿ ಟೊಮ್ಯಾಟೋ ಅನ್ನು ಎರಡು ತಿಂಗಳಾದರೂ ಕಾಪಾಡಿಕೊಳ್ಳಬೇಕು ಎಂದ ಮತ್ತೊಬ್ಬರು ಕಾಲೆಳೆದಿದ್ದಾರೆ.
ಇದನ್ನೂ ಓದಿ : Viral Video: ಭಕ್ತಕಳ್ಳ; ಹನುಮಾನ್ ಚಾಲೀಸಾ ಪಠಿಸಿ ಕಾಣಿಕೆ ಡಬ್ಬಿಯಿಂದ ರೂ. 5,000 ಕದ್ದ ಕಳ್ಳ
ಮಹಾರಾಷ್ಟ್ರದಾದ್ಯಂತ ನಾಸಿಕ್, ಜುನ್ನಾರ್ ಮತ್ತು ಪುಣೆಯಿಂದ ಟೊಮ್ಯಾಟೋಗಳನ್ನು ಮಾರಾಟಕ್ಕೆ ಸಾಗಿಸಲಾಗುತ್ತಿದೆ. ಅಕಾಲಿಕ ಮಳೆ, ಚಂಡಮಾರುತದಿಂದಾಗಿ ಸಾಕಷ್ಟು ಜಿಲ್ಲೆಗಳಲ್ಲಿ ಬೆಳೆದ ಟೊಮ್ಯಾಟೋ ನಾಶವಾಗಿದೆ. ಹಾಗಾಗಿ ಇಲ್ಲಿಯೂ ಬೆಲೆ ಏರಿಕೆಯಾಗಿದೆ.
ಈ ರೀತಿಯ ಹುಟ್ಟುಹಬ್ಬವನ್ನು ನೀವು ಎಂದಾದರೂ ಆಚರಿಸಿಕೊಂಡಿದ್ದಿರಾ? ಅಥವಾ ಯಾರಿಗಾದರೂ ಇಂಥ ಸಮಯೋಚಿತ ಉಡುಗೊರೆಯನ್ನು ನೀವು ಕೊಟ್ಟಿದ್ದಿದೆಯೇ? ಪ್ರತಿಕ್ರಿಯಿಸಿ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ