Viral Video: ಸ್ಪ್ರಿಂಗ್​​ರಾಣಿ: ಹಾವಿನಂತೆ ಸರಿಯುವ, ಕಪ್ಪೆಯಂತೆ ಜಿಗಿಯುವ ಸುಂದರಿ ನೀ ಯಾರೆ?

Adventure : ಈ ವಿಡಿಯೋದಲ್ಲಿರುವ ಯುವತಿ ಯಾವ ದೇಶದವಳು ಎಂದು ಗೊತ್ತಿಲ್ಲ, ನೆಟ್ಟಿಗರ ಪ್ರತಿಕ್ರಿಯೆಗಳೂ ಆಕೆಗೆ ತಲುಪುವುದಿಲ್ಲ. ಆದರೂ ಪುಕ್ಕಟೆ ಹಿತವಚನ ಹೇಳುವುದರಲ್ಲಿ ಮತ್ತು ಕೊಂಕಾಡಿ ಎದೆಗುಂದಿಸುವಲ್ಲಿ ಕೆಲವರು ಎತ್ತಿದ ಕೈ.

Viral Video: ಸ್ಪ್ರಿಂಗ್​​ರಾಣಿ: ಹಾವಿನಂತೆ ಸರಿಯುವ, ಕಪ್ಪೆಯಂತೆ ಜಿಗಿಯುವ ಸುಂದರಿ ನೀ ಯಾರೆ?
ಹಾವಿನಂತೆ ಸರಿಯುವ, ಕಪ್ಪೆಯಂತೆ ಜಿಗಿಯುವ ಸುಂದರಿ ನೀ ಯಾರೆ?
Follow us
ಶ್ರೀದೇವಿ ಕಳಸದ
|

Updated on:Jul 11, 2023 | 6:02 PM

Talent : ಮನುಷ್ಯ ಎಂದರೆ ಹೀಗೇ ಇರಬೇಕು, ಇಂಥದ್ದಷ್ಟೇ ಮಾಡಬೇಕು, ಇಂಥದ್ದಷ್ಟೇ ತಿನ್ನಬೇಕು, ಇಂಥದ್ದಷ್ಟೇ ಪ್ರದರ್ಶಿಸಬೇಕು ಅಂತೆಲ್ಲ ಏನೇನೆಲ್ಲ ಮಾನಗಳೂ ಮತ್ತು ದಂಡಗಳೂ ಇದ್ದವೋ ಅವೆಲ್ಲವನ್ನೂ ಬದಿಗೆ ಸರಿಸಿ ಯಾರೆಲ್ಲರ ಪ್ರತಿಭೆ, ಸಾಹಸ, ಅಭಿವ್ಯಕ್ತಿಗೆ ಅವಕಾಶ ಮಾಡಿಕೊಟ್ಟಿವೆ ಸಾಮಾಜಿಕ ಜಾಲತಾಣಗಳು. ಅಷ್ಟೇ ಅಲ್ಲ ಅವರೆಲ್ಲರಿಗೂ ಒಂದು ಐಡೆಂಟಿಟಿಯನ್ನು (Identity) ಸೃಷ್ಟಿಸಿಕೊಟ್ಟಿವೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಈಕೆ ಯಾವುದಾದರೂ ಹಾವನ್ನು ನುಂಗಿದ್ದಾಳೊ? ಅಥವಾ ಕಪ್ಪೆ, ಹಾವುರಾಣಿ ಅಥವಾ ಇನ್ನ್ಯಾವುದಾದರೂ ಸರಿಸೃಪ ಜಾತಿಗೆ ಸೇರಿದ ಪ್ರಾಣಿಗಳನ್ನು?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Earth.brains (@earth.brains)

ಈ ವಿಡಿಯೋ ಅನ್ನು ಈತನಕ ನಾಲ್ಕು ಮಿಲಿಯನ್ ಜನರು ನೋಡಿದ್ದಾರೆ. 1.3 ಲಕ್ಷ ಜನರು ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ತಾಯೀ ನಿನ್ನ ದೇಹದ ಭಾಗಗಳು ಮತ್ತು ಜೀವವನ್ನು ಕಾಪಾಡಿಕೋ. ರೀಲಿಗಾಗಿ ಹೀಗೆಲ್ಲ ಹುಚ್ಚಾಟಕ್ಕೆ ಬೀಳಬೇಡ ಎಂದು ನೆಟ್ಟಿಗರು ಬುದ್ಧಿ ಹೇಳುತ್ತಿದ್ದಾರೆ. ಶಭಾಷ್​, ರೀಲಿಗಾಗಿ ಮಾಡದೆ ಇದನ್ನೇ ಸಾಹಸಕಲೆಯಾಗಿ ಅಭ್ಯಾಸ ಮಾಡು, ಸ್ಪರ್ಧೆಗಳಲ್ಲಿ ಭಾಗವಹಿಸು ಎಂದು ಹಿತವಚನ ಹೇಳಿದ್ದಾರೆ ಕೆಲವರು.

ಇದನ್ನೂ ಓದಿ : Viral: 5 ಜೀವಂತ ಹಾವುಗಳನ್ನು ತನ್ನ ಎದೆಯಬಳಿ ಅಡಗಿಸಿಟ್ಟುಕೊಂಡಿದ್ದ ಮಹಿಳೆ

ಹೀಗೆ ಮಾಡುವುದರಿಂದ ಹೊಟ್ಟೆ ತುಂಬುವುದೇ? ಎಂದು ಕೇಳಿದ್ದಾರೆ ಕೆಲವರು. ಇಷ್ಟವಾದರೆ ಒಂದು ಲೈಕ್​ ಹಾಕಿ ಮುಂದೆ ನಡೆಯಿರಿ, ಒಬ್ಬ ವ್ಯಕ್ತಿಯ ಬಗ್ಗೆ ಹಿಂದೆ ಮುಂದೆ ಗೊತ್ತಿಲ್ಲದೆ ಏನಿದು ಹೀಗೆಲ್ಲ ಮಾತನಾಡುವುದು ಎಂದು ಜೋರು ಮಾಡಿದ್ದಾರೆ ಒಬ್ಬರು. ಹಾಗಿದ್ದರೆ ಈ ವಿಡಿಯೋದ ಮೂಲವನ್ನು ಪತ್ತೆಹಚ್ಚಿ ಎಂದು ಸವಾಲು ಹಾಕಿದ್ದಾರೆ ಒಂದಿಷ್ಟು ಜನ.

ಇದನ್ನೂ ಓದಿ : Viral: 70 ವರ್ಷದ ನನ್ನ ತಾಯಿ ನನಗಾಗಿ ಹಾಸಿಗೆ ಅಣಿಗೊಳಿಸುತ್ತಾರೆ; ಕ್ಲಾಸ್ ತೆಗೆದುಕೊಂಡ ನೆಟ್ಟಿಗರು

ಒಬ್ಬೊಬ್ಬರಲ್ಲಿ ಒಂದು ಸಾಮರ್ಥ್ಯ, ಕೌಶಲ ಇರುತ್ತದೆ. ಯಾವ ಕಲೆಯೂ ಏಳುಬೀಳಿಲ್ಲದೆ ಬರುವುದಿಲ್ಲ. ಆದರೆ ಯಾವುದರಲ್ಲಿ ಏನು ಸಾಧಿಸಬೇಕು ಎನ್ನುವುದು ಅವರವರ ವೈಯಕ್ತಿಕ. ಇಷ್ಟವಾಯಿತೋ ನೋಡಿ, ಇಲ್ಲವೋ ಬಿಡಿ. ಅದು ಬಿಟ್ಟು ಕೊಂಕಾಡುವುದು, ಹುಸಿಕಾಳಜಿ ತೋರಿಸುವುದು ಬೇಕೆ? ಏನಂತೀರಿ ನೀವು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 5:59 pm, Tue, 11 July 23