Viral: ’70 ವರ್ಷದ ನನ್ನ ತಾಯಿ ನನಗಾಗಿ ಹಾಸಿಗೆ ಅಣಿಗೊಳಿಸುತ್ತಾರೆ’; ಕ್ಲಾಸ್ ತೆಗೆದುಕೊಂಡ ನೆಟ್ಟಿಗರು

Woman and Religion : ಇದು ಧರ್ಮವಲ್ಲ, ಧರ್ಮದ ಹೆಸರಿನಲ್ಲಿ ತಾಯಿಯನ್ನು ಶೋಷಿಸುತ್ತಿದ್ದೀರಿ ಎಂದಿದ್ದಾರೆ ಹಲವರು. ಆಕೆ ಪ್ರೀತಿಯಿಂದ ಮಾಡಿದರೆ ಮಾಡಲಿ ಬಿಡಿ ಎಂದು ಕೆಲವರಷ್ಟೇ ಈ ವ್ಯಕ್ತಿಯನ್ನು ಬೆಂಬಲಿಸಿದ್ದಾರೆ. ನೀವೇನಂತೀರಿ?

Viral: '70 ವರ್ಷದ ನನ್ನ ತಾಯಿ ನನಗಾಗಿ ಹಾಸಿಗೆ ಅಣಿಗೊಳಿಸುತ್ತಾರೆ'; ಕ್ಲಾಸ್ ತೆಗೆದುಕೊಂಡ ನೆಟ್ಟಿಗರು
70 ವರ್ಷದ ತಾಯಿ ಮಗನಿಗಾಗಿ ಹಾಸಿಗೆ ಅಣಿಗೊಳಿಸಿಟ್ಟಿರುವುದು.
Follow us
ಶ್ರೀದೇವಿ ಕಳಸದ
|

Updated on:Jul 11, 2023 | 2:55 PM

Mother : ಕಿಶೋರ್ ಕೆ. ಸ್ವಾಮಿ ಎಂಬ ವ್ಯಕ್ತಿ ಈ ಫೋಟೋ ಟ್ವೀಟ್ ಮಾಡಿ, ‘ನಾನು ಮನೆಗೆ ಹೋಗುವುದರೊಳಗೆ ನನ್ನ 70 ವರ್ಷದ ನನ್ನ ತಾಯಿ ನನ್ನ ಹಾಸಿಗೆಯನ್ನು ಅಣಿಗೊಳಿಸಿರುತ್ತಾರೆ. ಗೃಹಿಣಿಯ ಶಕ್ತಿ ಎಂದರೆ ಇದು. ಹಾಗಂತ ಆಕೆ ಇದನ್ನು ಕಡ್ಡಾಯವಾಗಿ ಮಾಡಲೇಬೇಕೆಂದೇನೂ ಇಲ್ಲ. ಆದರೆ ಇದನ್ನಾಕೆ ಪ್ರೀತಿಯಿಂದ ಮಾಡುತ್ತಾರೆ. ನಮ್ಮ ಧರ್ಮವು ರೂಢಿಸಿಕೊಂಡಿರುವ ಇಂಥ ಮೌಲ್ಯವ್ಯವಸ್ಥೆಯಿಂದಾಗಿಯೇ ಸಮಾಜವು ರಕ್ಷಿಸಲ್ಪಡುತ್ತದೆ’ ಹೀಗೆಂದು ನೋಟ್​ ಬರೆದಿದ್ದಾರೆ. ಇವರ ಈ ನಡೆವಳಿಕೆ ಮತ್ತು ಆಲೋಚನಾ ವಿಧಾನದಿಂದ ನೆಟ್ಟಿಗರು ಕಿಶೋರ್ ಎಂಬುವವರನ್ನು ತರಾಟೆಗೆ ತೆರೆದುಕೊಂಡಿದ್ದಾರೆ.

ಸುಮಾರು 73,000 ಜನರು ಈ ಟ್ವೀಟ್ ನೋಡಿದ್ದಾರೆ. ಸುಮಾರು 500 ಜನರು ಕೋಟ್ ಮಾಡಿದ್ದಾರೆ. ಸುಮಾರು 40 ಜನರು ರೀಟ್ವೀಟ್ ಮಾಡಿದ್ದಾರೆ. ಇದು ಧರ್ಮವಲ್ಲ, ಧರ್ಮದ ಹೆಸರಲ್ಲಿ ನೀವು ಹಿರಿಯರನ್ನು ಶೋಷಿಸುತ್ತಿದ್ದೀರಿ ಎಂದಿದ್ದಾರೆ ಕೆಲವರು. ಈ ವಯಸ್ಸಿನಲ್ಲಿ ನೀವು ನಿಮ್ಮ ತಾಯಿಯ ಹಾಸಿಗೆಯನ್ನು ಅಣಿಗೊಳಿಸಬೇಕೇ ವಿನಾ ಅವರಿಂದ ಇದೆಲ್ಲವನ್ನು ನಿರೀಕ್ಷಿಸಬಾರದು. ಇದು ನಾಚಿಕೆ ತರುವಂಥ ವಿಷಯ, ಆದರೆ ಇದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೀರಿ, ಛೆ… ಎಂದು ಝಾಡಿಸಿದ್ದಾರೆ ಒಬ್ಬರು.

ಇದನ್ನೂ ಓದಿ : Viral Video: ಭಾರತದ ಉಕ್ಕಿನ ಮಹಿಳೆ; ಈಕೆಯ ಸಾಹಸಕ್ಕೆ ದಂಗಾಗಿರುವ ನೆಟ್ಟಿಗರು

ತಾಯ್ತನವನ್ನೇ ಅರ್ಥ ಮಾಡಿಕೊಳ್ಳದ ಕೆಲ ಹೆಣ್ಣುಮಕ್ಕಳು ಹೀಗೆ ಪ್ರತಿಕ್ರಿಯಿಸಿದ್ದು ಅಚ್ಚರಿ ತಂದಿದೆ. ನಿಮ್ಮ ತಾಯಿಯೂ ನಿಮಗೂ ಹೀಗೆ ಮಾಡಿದರೆ ಖಂಡಿತ ನೀವೂ ಸಂತೋಷಪಡುತ್ತೀರಿ. ಆಕೆಗೆ ಹೀಗೆಲ್ಲ ಮಾಡಬೇಡ ಎಂದು ನೀವು ಹೇಳಬೇಡಿ. ಅದು ಆಕೆಯ ಸಂತೋಷ ಎಂದಿದ್ದಾರೆ ಒಬ್ಬರು. ಅವರಾಗಿಯೇ ಅದನ್ನು ಖುಷಿಯಿಂದ ಮಾಡುವಾಗ ಯಾಕೆ ಬೇಡ ಎನ್ನಬೇಕು ಎಂದು ಕೆಲವರಷ್ಟೇ ಪ್ರಶ್ನಿಸಿದ್ದಾರೆ. ಆದರೆ ಅನೇಕರು ಚೆನ್ನಾಗಿ ಬೈದಿದ್ದಾರೆ.

ನೀವೇನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 2:52 pm, Tue, 11 July 23

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು