Viral Optical Illusion: ಈ ಚಿತ್ರದಲ್ಲಿ ಅಡಗಿರುವ ಸಂಖ್ಯೆಯನ್ನು ಕಂಡುಹಿಡಿಯಬಹುದೆ?

Black and White : ''ಕೇಬಲ್​ನವರು ಟಿವಿಗೆ ಕನೆಕ್ಷನ್​ ಕೊಡುವಾಗ ನಿಮ್ಮ ಟಿವಿ ಹೀಗೇ ಕಾಣುತ್ತದಲ್ಲವೆ? ನನಗಂತೂ ತಲೆನೋವೇ ಬಂತು. ನನ್ನ ತಲೆನೋವು ಹೆಚ್ಚಾಗಿ ಹೋಯ್ತು? 2 ಅಥವಾ 8?'' ನೆಟ್ಟಿಗರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ನೀವು?

Viral Optical Illusion: ಈ ಚಿತ್ರದಲ್ಲಿ ಅಡಗಿರುವ ಸಂಖ್ಯೆಯನ್ನು ಕಂಡುಹಿಡಿಯಬಹುದೆ?
ಯಾವ ಅಂಕಿ ಕಾಣಿಸುತ್ತಿದೆ?
Follow us
ಶ್ರೀದೇವಿ ಕಳಸದ
|

Updated on:Jul 11, 2023 | 1:26 PM

Brain Teaser : ಈ ಭ್ರಮಾತ್ಮಕ ಚಿತ್ರಗಳ ವೈಶಿಷ್ಟ್ಯವೇ ಇದು, ನಮ್ಮ ಕಣ್ಣುಗಳನ್ನು ಮತ್ತು ನಮ್ಮ ಬುದ್ಧಿಯನ್ನು ನಾವೇ ನಂಬಲಾರದಂಥ ಸ್ಥಿತಿ ಮತ್ತು ಸವಾಲನ್ನು ತಂದು ಒಡ್ಡುತ್ತವೆ. ಇದೀಗ ಮತ್ತೊಂದು ಹೊಸ ಭ್ರಮಾತ್ಮಕ ಚಿತ್ರ ಇದೀಗ ನಿಮ್ಮೆದುರಿಗಿದೆ. ಇಲ್ಲಿರುವ ಕಪ್ಪು ಬಿಳುಪಿನ ಈ ಚಿತ್ರದಲ್ಲಿ ಸಂಖ್ಯೆಯೊಂದನ್ನು ಅಡಗಿ ಕುಳಿತಿದೆ. ಕೆಲವರಿಗೆ ಮೊದಲ ಸಲಕ್ಕೇ ಚಿತ್ರ ಕಂಡಿದೆ. ಇನ್ನೂ ಕೆಲವರಿಗೆ ಎರಡು ಮೂರು ಸಲ ನೋಡಿದಾಗ ಸಂಖ್ಯೆ ಇರುವುದು ಗೊತ್ತಾಗಿದೆ ಆದರೆ ಯಾವ ಸಂಖ್ಯೆ ಎಂದು ಗುರುತಿಸಲು ಸಾಧ್ಯವಾಗಿಲ್ಲ. ಮತ್ತೂ ಕೆಲವರಿಗೆ ಸಂಖ್ಯೆಯೇ ಕಂಡಿಲ್ಲ. ಎಷ್ಟೋ ಜನಕ್ಕೆ ಬೇರೆ ಬೇರೆ ಸಂಖ್ಯೆಗಳು ಕಂಡಿವೆ. ನಿಮಗೆ?

ಈ ಟ್ವೀಟ್​ ಅನ್ನು ಜು.10ರಂದು ಮಾಡಲಾಗಿದೆ. 28,000 ಕ್ಕೂ ಹೆಚ್ಚು ಜನರು ಇದನ್ನು ನೋಡಿದ್ದಾರೆ. ಹಲವಾರು ಜನ ನಕ್ಷತ್ರಗಳು ಮಾತ್ರ ಈ ಚಿತ್ರದಲ್ಲಿ ಕಾಣುತ್ತಿವೆ ಎಂದಿದ್ದಾರೆ. ಅಯ್ಯೋ ಈ ಚಿತ್ರ ನೋಡಿದ ನನಗೆ ಮೈಗ್ರೇನ್​ ಅನ್ನು ಹೆಚ್ಚು ಮಾಡುತ್ತಿದೆ ಎಂದು ಒಬ್ಬರು, ನನ್ನ ತಲೆಯೇ ಸಿಡಿದು ಹೋಗುತ್ತಿದೆ ಎಂದು ಇನ್ನೊಬ್ಬರು ಹಾಸ್ಯ ಮಾಡಿದ್ದಾರೆ.

ಇದನ್ನೂ ಓದಿ : Viral Video: Viral Video: ‘ಬ್ರ್ಯಾಂಡ್​’ ಭ್ರಮೆಯ ಭಾವಿಗೆ ನಿಮ್ಮ ಮಕ್ಕಳನ್ನು ತಳ್ಳುತ್ತಿದ್ದೀರೇ? ಎಚ್ಚರವಿರಲಿ

ಹೌದು ಹೌದು ಬಿಂದುಗಳಂತಿರುವ ಈ ಚಿತ್ರವನ್ನು ನೋಡುತ್ತಿದ್ದರೆ ತಲೆನೋವೇ ಬರುತ್ತಿದೆ ಎಂದು ಕೆಲವರು ಗಂಭೀರವಾಗಿ ಹೇಳಿದ್ದಾರೆ. ಬಹಳಷ್ಟು ಜನ ನನಗೆ 2 ಕಂಡಿತು ಎಂದಿದ್ದಾರೆ. ಕೆಲವರು 2 ಮತ್ತು 8 ಕಾಣುತ್ತಿವೆ ಎಂದಿದ್ದಾರೆ. ಕೇಬಲ್​ನವರು ನೆಟ್​ವರ್ಕ್​ ಕನೆಕ್ಟ್ ಮಾಡುವ ಮೊದಲು ನಿಮ್ಮ ಟಿವಿ ಹೀಗೇ ಕಾಣುತ್ತಿರುತ್ತದೆ ಅಲ್ಲವೆ? ಆದರೂ ನನಗೆ ಇದರಲ್ಲಿ 2 ಕಾಣುತ್ತಿದೆ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : Viral Video: ಫ್ರೀಸ್ಟೈಲ್​ ಫುಟ್​ಬಾಲ್​ನಲ್ಲಿ ಲಿವ್​ ಕುಕ್​ ಗಿನ್ನೀಸ್ ವಿಶ್ವ​ ದಾಖಲೆ 

ಇದೀಗ ಈ ಚಿತ್ರವನ್ನು ನೋಡುತ್ತಿದ್ದಂತೆ ನಿಮಗೆ ಯಾವೆಲ್ಲ ರೀತಿಯ ಅನುಭವ ಉಂಟಾಯಿತು? ಯಾವೆಲ್ಲ ಅಂಕಿ ಸಂಖ್ಯೆಗಳು ನಿಮ್ಮ ಕಣ್ಣಿಗೆ ಬಿದ್ದವು.  ಹೇಳಬಹುದೆ?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:09 pm, Tue, 11 July 23