Viral Video: ಫ್ರೀಸ್ಟೈಲ್​ ಫುಟ್​ಬಾಲ್​ನಲ್ಲಿ ಲಿವ್​ ಕುಕ್​ ಗಿನ್ನೀಸ್ ವಿಶ್ವ​ ದಾಖಲೆ

GWR : 'ಏಳು ತಿಂಗಳ ಕಾಲ ಬೆನ್ನಿಗಾದ ಗಾಯದಿಂದ ಬಳಲಿದೆ. ಆಗ ಫುಟ್​ಬಾಲ್​ ಕ್ರೀಡೆಯಿಂದ ದೂರ ಉಳಿದೆ. ಕ್ರಮೇಣ ನನ್ನ ಗಾರ್ಡನ್​ನಲ್ಲಿ ಈ ಅಭ್ಯಾಸ ಮಾಡುತ್ತಾ ಹೋದೆ. ಆಗ ಇದು ಫ್ರೀಸ್ಟೈಲ್​ ಫುಟ್​ಬಾಲ್​ ಎಂದು ನನಗರಿವಿರಲ್ಲ' ಲಿವ್ ಕುಕ್​

Viral Video: ಫ್ರೀಸ್ಟೈಲ್​ ಫುಟ್​ಬಾಲ್​ನಲ್ಲಿ ಲಿವ್​ ಕುಕ್​ ಗಿನ್ನೀಸ್ ವಿಶ್ವ​ ದಾಖಲೆ
ಫ್ರೀಸ್ಟೈಲ್​ ಫುಟ್​ಬಾಲ್​ ಆಟಗಾರ್ತಿ ಲಿವ್​ ಕುಕ್​
Follow us
ಶ್ರೀದೇವಿ ಕಳಸದ
|

Updated on:Jul 11, 2023 | 10:45 AM

Football : ನಿನ್ನೆಯಷ್ಟೇ ರಾಜಸ್ಥಾನದ ಅಮಿತ ಸುತಾರ್  ಏಕಕಾಲಕ್ಕೆ ಏಳು ಫುಟ್​ಬಾಲ್​​ಗಳನ್ನು ಪೆನ್ಸಿಲ್ ತುದಿಯ​ ಮೇಲೆ ತಿರುಗಿಸುವ ಕೌಶಲವನ್ನು ನೋಡಿದಿರಿ. ಇದೀಗ ಫ್ರೀಸ್ಟೈಲ್​ ಫುಟ್​ಬಾಲ್​ ಆಟಗಾರ್ತಿ ಲಿವ್​ ಕುಕ್​ (Liv Cooke) ಬಾರ್ಸಿಲೋನಾದಲ್ಲಿ ಫುಟ್​ಬಾಲ್​ ಕೌಶಲ ಪ್ರದರ್ಶನದಿಂದ ಗಿನ್ನೀಸ್​ ವಿಶ್ವ ದಾಖಲೆ (GWR) ಮಾಡಿರುವ ವಿಡಿಯೋ ನೋಡಿ. ಬ್ರಿಟಿಷ್ ಮೂಲದ ಈಕೆ 30 ಸೆಕೆಂಡುಗಳಲ್ಲಿ ಮಹಿಳೆಯರ ವಿಭಾಗದಲ್ಲಿ ಸಿಟ್​ಡೌನ್​ 76 ಕ್ರಾಸ್ಓವರ್​​ಗಳನ್ನು ಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Guinness World Records (@guinnessworldrecords)

ಬಾರ್ಸಿಲೋನಾದ ಡಿಆರ್​ವಿ ಪಿಎನ್​ಕೆ (DRV PNK) ಸ್ಟೇಡಿಯಂನಲ್ಲಿ 2021ರಲ್ಲಿ ವೆನೆಜುವೆಲಾದ ಲಾರಾ ಬಯೊಂಡೋ ಮಾಡಿದ 62 ಸಿಟ್​ಡೌನ್​ ಕ್ರಾಸ್ಓವರ್ ದಾಖಲೆಯನ್ನು ಲಿವ್ ಮುರಿದಿದ್ದಾರೆ. ಲಿವ್​, ‘ಇಡೀ ಜಗತ್ತಿನಲ್ಲಿ ನಾನು ಅತ್ಯುತ್ತಮ ಫ್ರೀಸ್ಟೈಲ್​ ಫುಟ್ಬಾಲ್ ಆಟಗಾರಳೆಂದು ನನಗೆ ಗೊತ್ತಿದೆ. ಕೇವಲ ಹೆಣ್ಣುಮಕ್ಕಳ ವಿಭಾಗದಲ್ಲಿ ನಾನು ದಾಖಲೆ ನಿರ್ಮಿಸದೆ ಒಟ್ಟಾರೆಯಾಗಿ ವಿಶ್ವದಾಖಲೆ ನಿರ್ಮಿಸಲು ಬಯಸುತ್ತೇನೆ’ ಎಂದು ಆಕೆ ಹೇಳಿದ್ದಾರೆ.

ಇದನ್ನೂ ಓದಿ : Viral Video: ‘ಲೈಕ್ಸ್​, ಶೇರ್​, ಕಮೆಂಟ್​ಗಾಗಿ ಇಷ್ಟೊಂದು ಅಪಾಯಕ್ಕೆ ಒಡ್ಡಿಕೊಳ್ಳಬೇಡ’ ನೆಟ್ಟಿಗರ ಮನವಿ

‘ಬೆನ್ನಿಗಾದ ಗಾಯದಿಂದಾಗಿ ಏಳು ತಿಂಗಳ ಕಾಲ ನಾನು ಫುಟ್​ಬಾಲ್​ ಕ್ರೀಡೆಯಿಂದ ದೂರ ಉಳಿಯಬೇಕಾಯಿತು.  ಆಗ ಗಾರ್ಡನ್​ನಲ್ಲಿಯೇ ಕುಳಿತು, ಬೆನ್ನಿಗೆ ನೋವಾಗದಂತೆ ಫ್ರೀಸ್ಟೈಲ್ ಫುಟ್​ಬಾಲ್​ನಲ್ಲಿ ತೊಡಗಿಕೊಂಡೆ. ಹೀಗೆ ನನ್ನ ಈ ಪ್ರಯಾಣ ಶುರುವಾಯಿತು. ಅಚ್ಚರಿ ಎಂದರೆ ಆಗ ನಾನು ಫ್ರೀಸ್ಟೈಲ್​ ಫುಟ್​ಬಾಲ್​ ಆಟವಾಡುತ್ತಿದ್ದೇನೆ ಎಂದು ನನಗೇ ತಿಳಿದಿರಲಿಲ್ಲ. ಫುಟ್​ಬಾಲ್​ ನನಗೆ ಗೀಳು, ಹಾಗಾಗಿ ಬೇಗ ಆಟಕ್ಕೆ ಮರಳಬೇಕು ಎಂದುಕೊಳ್ಳುತ್ತಿದ್ದೆ. ಆದರೆ ಫ್ರೀಸ್ಟೈಲ್​ ಪ್ರ್ಯಾಕ್ಟೀಸ್ ಮಾಡುತ್ತಾ ನಾನು ಸಂಪೂರ್ಣ ಫುಟ್​ಬಾಲ್​ನೊಂದಿಗೆ ಪ್ರೀತಿಯಲ್ಲಿ ಬಿದ್ದೆ’ ಎಂದಿದ್ಧಾರೆ ಲಿವ್.

ಇದನ್ನೂ ಓದಿ : Viral Video: ಮಹಾರಾಷ್ಟ್ರ; 45 ದಿನಗಳ ಮರಿಚಿರತೆ ಮರಳಿ ಅಮ್ಮನ ಮಡಿಲು ಸೇರಿದಾಗ

ನಾಲ್ಕು ದಿನಗಳ ಹಿಂದೆ ಹಂಚಿಕೊಂಡ ಈ ಇನ್​​ಸ್ಟಾ ಪೋಸ್ಟ್ ಅನ್ನು ಈತನಕ 8 ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ. ಸುಮಾರು 60,000 ಜನ ಇದನ್ನು ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ಲಿವ್​ ಸಾಧನೆಯನ್ನು ಮೆಚ್ಚಿ ಪ್ರೋತ್ಸಾಹಿಸಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:41 am, Tue, 11 July 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ