AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ನನ್ನನ್ನು ಪ್ರೋತ್ಸಾಹಿಸಿ’ ರಾಜಸ್ಥಾನದ ಫುಟ್​ಬಾಲ್ ಆಟಗಾರನ ಮನವಿ​

Rajasthan : ಒಂದಿಷ್ಟು ಫುಟ್​​ಬಾಲ್​ ಒಂದಿಷ್ಟು ಪೆನ್ಸಿಲ್​ಗಳು ಮತ್ತು ಒಂದಿಷ್ಟು ಜನರಿದ್ದರೆ ಸಾಕು. ರಾಜಸ್ಥಾನದ ಈ ಕ್ರೀಡಾಳು ತಾನೂ ಜಗತ್ತು ಮರೆಯುತ್ತಾನೆ, ನೋಡುಗರೂ ಜಗತ್ತನ್ನು ಮರೆಯುವಂತೆ ಮಾಡುತ್ತಾನೆ. ನೋಡಿ ಈ ವಿಡಿಯೋ.

Viral Video: 'ನನ್ನನ್ನು ಪ್ರೋತ್ಸಾಹಿಸಿ' ರಾಜಸ್ಥಾನದ ಫುಟ್​ಬಾಲ್ ಆಟಗಾರನ ಮನವಿ​
ರಾಜಸ್ಥಾನದ ಫುಟ್​ಬಾಲ್​ ಕ್ರೀಡಾಳು ಅಮಿತ್ ಸುತಾರ್
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on: Jul 10, 2023 | 4:32 PM

Share

Football : ಫುಟ್​ಬಾಲ್ ಆಟವೆಂದರೆ? ಚೆಂಡನ್ನು ಕಾಲಿನಿಂದ ಒದೆಯುತ್ತ ಗುಂಪಿನಲ್ಲಿ ಆಟವಾಡುವುದು ಎಂಬ ಉತ್ತರ ನಿಮ್ಮಿಂದ ಹೊಮ್ಮುತ್ತದೆ. ಆದರೆ ಫುಟ್​ಬಾಲ್​ ನಿಮ್ಮ ಉಸಿರೇ ಆದರೆ? ಹೀಗೆ ಈ ರಾಜಸ್ಥಾನದ ಯುವಕ್ರೀಡಾಳುವಿನಂತೆ ಕೌಶಲ ಸಾಧಿಸುತ್ತೀರಿ. ಅಮಿತ್ ಸುತಾರ್ (Amith Suthar) ಎಂಬ ವೃತ್ತಿಪರ ಫುಟ್​ಬಾಲ್​ ಆಟಗಾರನಿಗೆ ಇಂಥದ್ದೇ ಜಾಗವಾಗಬೇಕಂತೇನಿಲ್ಲ. ಜನವಿದ್ದರೆ ಮುಗಿಯಿತು, ಅದು ರೈಲ್ವೇ ಸ್ಟೇಷನ್​, ಬಸ್​ಸ್ಟ್ಯಾಂಡ್​, ಮೈದಾನ, ಉದ್ಯಾನ, ಅರಮನೆಯ ಬೀದಿ, ಅರಮನೆಯ ಒಳಾಂಗಣ ಹೀಗೆ ಎಲ್ಲಿ ಬೇಕೆಂದರಲ್ಲಿ ಫುಟ್​ಬಾಲ್​ಗಳ ಚಮತ್ಕಾರಿಕ ಪ್ರದರ್ಶನಕ್ಕೆ ತೊಡಗಿಕೊಳ್ಳುತ್ತಾನೆ. ಈ ಕೆಳಗಿನ ವಿಡಿಯೋ ನೋಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಪ್ರಸ್ತುತ ವಿಡಿಯೋ ಅನ್ನು ಸುಮಾರು 3.5 ಲಕ್ಷಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಆರು ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. ನೂರಾರು ಜನರು ಈತನ ಕೌಶಲದ ಬಗ್ಗೆ ಶ್ಲಾಘಿಸಿದ್ದಾರೆ. ಎಕ್ಸ್ಟ್ರಾ ಲೈಕ್​ ಬಟನ್​ ಎಲ್ಲಿದೆ ಎಂದು ಅನೇಕರು ಹುಡುಕಾಡುತ್ತಿದ್ಧಾರೆ. ಅಬ್ಬಾ ಎಂಥ ಪ್ರತಿಭೆ ನಿಮ್ಮದು ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ ಕೆಲವರು. ನಾ ಜನ್ಮದಲ್ಲಿ ಇಂಥ ಸಾಧನೆ ಮಾಡಲು ಸಾಧ್ಯವೇ ಇಲ್ಲ ಎಂದಿದ್ದಾರೆ ಒಂದಿಷ್ಟು ಮಂದಿ. ಒಂದು ಚೆಂಡನ್ನೇ ನನಗೆ ತಿರುಗಿಸಲು ಬಾರದು ಇನ್ನು ಏಕಕಾಲಕ್ಕೆ ಇಷ್ಟೊಂದು?! ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : Viral: ಶಂಕರ್​ ಮಹಾದೇವನ್ ಬ್ರೆಥ್​ಲೆಸ್​ ಸಾಂಗ್;​ ಎಜಾಝ್​ ಮತ್ತು ಪ್ರಿನ್ಸಿ ವರ್ಷನ್

ಇಂಥ ಪ್ರತಿಭಾವಂತ ಮಕ್ಕಳನ್ನು ಪ್ರತೀ ಪೋಷಕರೂ ಪಡೆಯಬೇಕು ಎಂದಿದ್ದಾರೆ ಮತ್ತೊಬ್ಬರು. ಈ ನಿಮ್ಮ ಹವ್ಯಾಸ ನಿಮ್ಮನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ, ಮಕ್ಕಳಿಗೂ ಇಂಥದನ್ನೆಲ್ಲ ಕಳಿಸಿಕೊಡಿ ಎಂದಿದ್ದಾರೆ ಹಲವಾರು ಜನ. ಇಂಥ ಪ್ರತಿಭೆಗೆ ಪ್ರೋತ್ಸಾಹ ಮತ್ತು ಒಳ್ಳೆಯ ಅವಕಾಶಗಳು ಖಂಡಿತ ಸಿಗುವಂತಾಗಲಿ ಎಂದು ಹಾರೈಸಿದ್ದಾರೆ ನೆಟ್ಟಿಗರು.

ಇದನ್ನೂ ಓದಿ : Viral Video: ಲಿಸಾ; ಕುತೂಹಲ ಕೆರಳಿಸಿರುವ ಒಡಿಶಾದ ಮೊದಲ ಎಐ ನ್ಯೂಸ್ ಆ್ಯಂಕರ್

ಕೌಶಲ ಎನ್ನುವುದು ವ್ಯಕ್ತಿತ್ವಕ್ಕೆ ಮೆರಗು ಕೊಡುತ್ತದೆ. ಹಾಗಾಗಿ ಒಂದು ವೃತ್ತಿಯೊಂದಿಗೆ ಪ್ರವೃತ್ತಿಯಂತೆ ನಿಮಗೆ ಇಷ್ಟವಾದ ಕೌಶಲವನ್ನು ರೂಢಿಸಿಕೊಳ್ಳುವುದು ಅತ್ಯವಶ್ಯ. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
Shridevi Kalasad
Shridevi Kalasad

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!