Viral Video: ಲಿಸಾ; ಕುತೂಹಲ ಕೆರಳಿಸಿರುವ ಒಡಿಶಾದ ಮೊದಲ ಎಐ ನ್ಯೂಸ್ ಆ್ಯಂಕರ್
AI Anchor : ಮಾಧ್ಯಮದಲ್ಲಿ ಕ್ರಾಂತಿ ಮೂಡಿಸಲೆಂದೇ ಈ ಆ್ಯಂಕರ್ ಲಿಸಾ ಬಂದಿದ್ದಾಳೆ. ಇಂಗ್ಲಿಷ್, ಒಡಿಶಾದೊಂದಿಗೆ ಬಹುಭಾಷೆಗಳೂ ಈಕೆಗೆ ಗೊತ್ತು. ಅಲ್ಲದೆ, ಮುಂದಿನ ದಿನಗಳಲ್ಲಿ ಇತರರೊಡನೆ ಸಮಾಲೋಚನೆಯನ್ನೂ ಈಕೆ ನಡೆಸಲಿದ್ದಾಳೆ.
Artificial Intelligent : ಸುದ್ದಿಯಲ್ಲಿರುವ ಸೆಲೆಬ್ರಿಟಿಗಳು, ರಾಜಕಾರಣಿಗಳು, ಸಿನೆಮಾ ನಟನಟಿಯರನ್ನು ಎಐ ಕಲಾವಿದರು ನಿತ್ಯವೂ ತಮ್ಮ ಕಲ್ಪನಾ ಶಕ್ತಿಯಲ್ಲಿ ಅರಳಿಸುತ್ತಿರುವುದನ್ನು ನೋಡುತ್ತಿದ್ದೀರಿ. ಇದೀಗ ಒಡಿಶಾದ ಭುವನೇಶ್ವರದ OTV (Odisha Television Network) ಯ ಲಿಸಾ (AI News Anchor) ಭಾರೀ ಸುದ್ದಿಯಲ್ಲಿದ್ದಾರೆ. ಏಕೆಂದರೆ ಇವರು ಒಡಿಶಾದ ಮೊದಲ ಎಐ ನ್ಯೂಸ್ ಆ್ಯಂಕರ್. ಈಕೆ ಮೊದಲ ಸಲ ವಾರ್ತೆಗಳನ್ನು ಪ್ರಸ್ತುಪಡಿಸಿದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ನೆಟ್ಟಿಗರಲ್ಲಿ ಸಂಚಲನ ಮೂಡಿಸುತ್ತಿದೆ.
OTV’s AI news anchor Lisa has the capability to speak in multiple languages. She will seamlessly present news in Odia apart from English for OTV and its digital platforms.#AIAnchorLisa #Lisa #Odisha #OTVNews #OTVAnchorLisa pic.twitter.com/8Q0t3m6NEE
ಇದನ್ನೂ ಓದಿ— OTV (@otvnews) July 9, 2023
ಭಾನುವಾರದಂದು ಒಡಿಯಾ ಇಂಡಿಯನ್ ಕೇಬಲ್ ಟೆಲಿವಿಷನ್ ಸ್ಟೇಷನ್ ತನ್ನ ಟ್ವಿಟರ್ ಖಾತೆಯ ಮೂಲಕ ಎಐ ಆ್ಯಂಕರ್ ಲಿಸಾಳನ್ನು ಇಡೀ ವಿಶ್ವಕ್ಕೆ ಪರಿಚಯಿಸಿದೆ. ರೇಡಿಯೋ, ಟೆಲಿವಿಷನ್, ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕ್ರಾಂತಿ ಮಾಡಲೆಂದೇ ಈ ಲಿಸಾಳನ್ನು ಸೃಷ್ಟಿಸಲಾಗಿದೆ. ಈಕೆ ಒಡಿಯಾ ಇಂಗ್ಲಿಷ್ ಮತ್ತು ಬಹುಭಾಷೆಗಳಲ್ಲಿ ಮಾತನಾಡುವ ಸಾಮರ್ಥ್ಯವನ್ನೂ ಹೊಂದಿದ್ದಾಳೆ. ಮುಂದಿನ ದಿನಗಳಲ್ಲಿ ಒಟಿವಿಯ ಡಿಜಿಟಲ್ ಪ್ಲ್ಯಾಟ್ಫಾರ್ಮ್ನಲ್ಲಿ ಇಂಗ್ಲಿಷ್ ಮತ್ತು ಒಡಿಯಾದಲ್ಲಿ ಸುದ್ದಿಯನ್ನು ಪ್ರಸ್ತುತಪಡಿಸಲಿದ್ದಾರೆ ಎಂದು ಒಟಿವಿ ಟ್ವೀಟ್ ಮಾಡಿದೆ.
ಇದನ್ನೂ ಓದಿ : Viral Video: ಸಾಕ್ಷರ ನಾಯಿ: ಇನ್ನೇನು ಶಾಲೆಗೆ ಅಡ್ಮಿಷನ್ ಒಂದು ಬಾಕಿ
‘ಲಿಸಾಗೆ ಒಡಿಯಾದಲ್ಲಿ ಮಾತನಾಡಲು ತರಬೇತಿ ಕೊಡುವುದೇ ಒಂದು ದೊಡ್ಡ ಸಾಹಸವಾಗಿತ್ತು. ಅಂತೂ ಅದನ್ನು ಒಂದು ಹಂತದಲ್ಲಿ ಸಾಧಿಸಿದೆವು. ಆದರೆ ಇನ್ನೂ ಈ ವಿಷಯವಾಗಿ ಕೆಲಸ ಮಾಡುತ್ತಿದ್ದೇವೆ. ಆಕೆ ಇತರರೊಂದಿಗೆ ಸುಲಲಿತವಾಗಿ ಸಂವಹನ ನಡೆಸುವ ಮಟ್ಟಕ್ಕೆ ಅವಳನ್ನು ತರಬೇತಿಗೆ ಒಳಪಡಿಸಬೇಕೆಂಬುದು ನಮ್ಮ ಆಶಯವಾಗಿದೆ’ ಎಂದು ಒಟಿವಿಯ ಡಿಜಿಟಲ್ ಬಿಸಿನೆಸ್ ಹೆಡ್ ಲಿತಿಶಾ ಮಂಗತ್ ಪಾಂಡಾ ಈ ವಿಷಯವನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : Viral: ಶಂಕರ್ ಮಹಾದೇವನ್ ಬ್ರೆಥ್ಲೆಸ್ ಸಾಂಗ್; ಎಜಾಝ್ ಮತ್ತು ಪ್ರಿನ್ಸಿ ವರ್ಷನ್
ಒಡಿಶಾ ಟೆಲಿವಿಷನ್, ಒಡಿಶಾದ ಮೊದಲ ಖಾಸಗಿ ಎಲೆಕ್ಟ್ರಾನಿಕ್ ಮಾಧ್ಯಮ. 1997 ರಲ್ಲಿ ಭುವನೇಶ್ವರ ಮತ್ತು ಕಟಕ್‌ನಲ್ಲಿ ಪ್ರಾರಂಭಿಸಲಾಯಿತು. ನಂತರ ಕ್ರಮೇಣ ರಾಜ್ಯದ ಎಲ್ಲಾ ಪ್ರಮುಖ ನಗರಗಳಲ್ಲಿ ಚಾಲನೆ ನೀಡಲಾಯಿತು. ಡಿಸೆಂಬರ್ 2006ರಲ್ಲಿ ಕೇಬಲ್ ಟಿವಿಯಿಂದ ಸ್ಯಾಟಲೈಟ್ ಚಾನೆಲ್ಗೆ ಮಾರ್ಪಾಡುಗೊಳಿಸಲಾಯಿತು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:57 am, Mon, 10 July 23