Viral: ಶಂಕರ್​ ಮಹಾದೇವನ್ ಬ್ರೆಥ್​ಲೆಸ್​ ಸಾಂಗ್;​ ಎಜಾಝ್​ ಮತ್ತು ಪ್ರಿನ್ಸಿ ವರ್ಷನ್​

Breathless Song : ಶಂಕರ್​ ಮಹಾದೇವನ್​ ಹೇಗೆ ಹಾಡಿದ್ದಾರೋ ಹಾಗೆಯೇ ಎಜಾಝ್ ಇದನ್ನು ಪ್ರಸ್ತುತಪಡಿಸಿದ್ಧಾರೆ. ಇನ್ನು ಹೋಟೆಲ್​ಗೆ ಹೋದರೆ ವೇಟರ್​ ಈ ಹಾಡನ್ನು ಹೇಗೆ ಹಾಡಬಹುದು ಎಂಬುದನ್ನು ಪ್ರಿನ್ಸಿ ಹಾಡಿದ್ಧಾರೆ.

Viral: ಶಂಕರ್​ ಮಹಾದೇವನ್ ಬ್ರೆಥ್​ಲೆಸ್​ ಸಾಂಗ್;​ ಎಜಾಝ್​ ಮತ್ತು ಪ್ರಿನ್ಸಿ ವರ್ಷನ್​
ಎಜಾಝ್​ ಹೈದರ್​, ಶಂಕರ್ ಮಹಾದೇವನ್ ಮತ್ತು ಪ್ರಿನ್ಸಿ ಪಾರೀಖ್
Follow us
ಶ್ರೀದೇವಿ ಕಳಸದ
|

Updated on:Jul 10, 2023 | 10:41 AM

Shankar Mahadevan : Breathless song ಇಂದಿಗೂ ಜೀವಂತವಾಗಿದೆ ಎನ್ನುವುದಕ್ಕೆ ಸಾಕ್ಷಿ ಇದೀಗ ವೈರಲ್ ಆಗಿರುವ ಇನ್​ಸ್ಟಾಗ್ರಾಂನ ರೀಲ್​​ಗಳು. 1998ರಲ್ಲಿ ಈ ಆಲ್ಬಮ್​ ಬಿಡುಗಡೆಯಾಗಿತ್ತು. ಜಾವೇದ್ ಅಖ್ತರ್ (Javed Akhtar)​ ಸಾಹಿತ್ಯ ಮತ್ತು ಶಂಕರ್ ಮಹಾದೇವನ್ ಸ್ವತಃ ಸಂಗೀತ ಸಂಯೋಜನೆ ಮಾಡಿ ಹಾಡಿದ್ದರು. ಒಂದೇ ಉಸಿರಿನಲ್ಲಿ ಈ ಇಡೀ ಹಾಡು ಸಂಗೀತಪ್ರೇಮಿಗಳನ್ನು ದಂಗುಬಡಿಸಿತ್ತು. ಎಷ್ಟೋ ವರ್ಷ ಈ ಹಾಡಿನ ಗುಂಗು ಹಿಡಿಸಿತ್ತು. ಇದೀಗ ಈ ಹಾಡನ್ನು ನೆನಪಿಸಿದ್ಧಾರೆ ಇನ್​ಸ್ಟಾಗ್ರಾಂನ ಗಾಯಕ ಎಜಾಝ್​ ಹೈದರ್ ಮತ್ತು ಕಲಾವಿದೆ ಪ್ರಿನ್ಸಿ ಪಾರೀಖ್​.

View this post on Instagram
ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

A post shared by Ejaz Haider (@ejazhaidermusic)

ಎಜಾಝ್ ಅವರ ಈ ರೀಲ್​ ಅನ್ನು ಈತನಕ ಸುಮಾರು 11 ಮಿಲಿಯನ್​ ಜನರು ನೋಡಿದ್ದಾರೆ. ಸುಮಾರು 2 ಮಿಲಿಯನ್​ ಜನರು ಇಷ್ಟಪಟ್ಟಿದ್ದಾರೆ. ರೆಸ್ಪೆಕ್ಟ್ ಬಟನ್​ ಎಲ್ಲಿದೆ? ಎಂದು ಕೇಳಿದ್ಧಾರೆ ಅನೇಕರು. ನೀವು ನಮ್ಮೆಲ್ಲರ ಹೃದಯವನ್ನು ಗೆದ್ದಿದ್ದೀರಿ ಸರ್​ ಎಂದು ಹಲವರು ಮನದುಂಬಿ ಹೇಳಿದ್ದಾರೆ. ನಿಮ್ಮ ಹಾಡಿನಿಂದ ಭೂಮಿಯ ಮೇಲೆ ಆಮ್ಲಜನಕದ ಮಟ್ಟ ಹೆಚ್ಚಿದೆ, ಗ್ರೇಟ್​! ಎಂದಿದ್ದಾರೆ ಮತ್ತೊಬ್ಬರು. ಇನ್ನು ಕಲಾವಿದೆ ಪ್ರಿನ್ಸಿ ಪಾರೀಖ್​, ಹೋಟೆಲ್​ನಲ್ಲಿ ವೇಟರ್​ ಈ ಹಾಡನ್ನು ಹಾಡಿದರೆ ಹೇಗಿರುತ್ತದೆ ಎನ್ನುವುದನ್ನು ಪ್ರಸ್ತುಪಡಿಸಿದ್ದಾರೆ. ಈ ಕೆಳಗಿನ ವಿಡಿಯೋದಲ್ಲಿ ಕೇಳಿ, ನೋಡಿ.

ಹೋಟೆಲ್​ನಲ್ಲಿಯ ತಿಂಡಿತಿನಿಸುಗಳನ್ನು ಈ ಗತಿಯಲ್ಲಿ ವೇಟರ್​ ಪ್ರಸ್ತುತ ಪಡಿಸಿದರೆ ಕೊನೆಯಲ್ಲಿ ಪ್ರಿನ್ಸಿ ಬರೀ ಒಂದು ಗ್ಲಾಸ್​ ನೀರು ಕೇಳಿಬಿಡುತ್ತಾರೆ! ಈ ವಿಡಿಯೋ ಅನ್ನು ಸುಮಾರು 1.5 ಲಕ್ಷ ಜನರು ಮೆಚ್ಚಿದ್ದಾರೆ. ನೀವು ವೇಟರ್​ ಬದಲಾಗಿ ಲಾಯರ್ ಥರ ಕಾಣುತ್ತಿದ್ದೀರಿ ಎಂದು ಹೇಳಿದ್ಧಾರೆ ಒಬ್ಬರು. ಈ ಹಾಡು ನನ್ನ ಫೇವರಿಟ್​. ಈಗಲೂ ಈ ಹಾಡನ್ನು ನಾನು ಕೇಳುತ್ತೇನೆ ಎಂದು ಕೆಲವರು ಹೇಳಿದ್ದಾರೆ. ನೀವೇನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:37 am, Mon, 10 July 23