AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನಡೀರಿ ಎಲ್ಲರೂ ಒಟ್ಟಿಗೇ ಮಲಗೋಣ! ವ್ಯಾಖ್ಯಾನಕಾರ್ತಿಯ ಅವಾಂತರ

Interpreter : ಕರೆಂಟ್​ ಅಫೇರ್ಸ್​ ಬಗ್ಗೆ ನನಗೆ ಅರಿವಿದೆ ಎಂದು ಅವನು. ಕರೆಂಟ್ಲಿ ಇವರ ಅಫೇರ್​ ನಡೀತಿದೆ ಎಂದು ಆಕೆ. ನಾನು ಆ್ಯಂಟಿ ಇಂಡಿಯನ್​ ಅಲ್ಲ ಎಂದು ಅವನು, ಇವರ ಆಂಟೀ ಇಂಡಿಯನ್​ ಅಲ್ಲ ಎಂದು ಆಕೆ. ಮುಂದೇನಾಗುತ್ತದೆ ನೋಡಿ.

Viral Video: ನಡೀರಿ ಎಲ್ಲರೂ ಒಟ್ಟಿಗೇ ಮಲಗೋಣ! ವ್ಯಾಖ್ಯಾನಕಾರ್ತಿಯ ಅವಾಂತರ
ಕಲಾವಿದರಾದ ಪ್ರಿನ್ಸಿ ಪಾರೇಖ್​ ಮತ್ತು ಝೆರ್ವಾನ್​ ಜೆ ಬನ್​ಷಾಹ್​
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:Jun 28, 2023 | 10:55 AM

Share

Language : ಭಾರತೀಯರಾದ ನಮಗೆ ಇಂಗ್ಲಿಷ್​ (English) ತುಸು ತುಟ್ಟಿಯೇ. ಒಂದು ಭಾಷೆಯನ್ನು ಅನಿವಾರ್ಯಕ್ಕಾಗಿ ಕಲಿಯುವುದು ಬೇರೆ. ಮಾತೃ ಅಥವಾ ರೂಢಿಗತ ಭಾಷೆಯಂತೆ ಅದು ನಮ್ಮೊಳಗೆ ಹೂತುಹೋಗುವುದು ಬೇರೆ. ಒಟ್ಟಿನಲ್ಲಿ ಭಾಷೆ ಎನ್ನುವುದು ಒಬ್ಬರಿಂದ ಒಬ್ಬರಿಗೆ ತಲುಪಲು ಇರುವ ಮಾರ್ಗ. ಇಬ್ಬರ ನಡುವಿನದು ಮಾತುಕತೆಯಾಗುತ್ತದೆ, ತಂಡದೊಂದಿಗೆ ಚರ್ಚೆ ಎನ್ನಿಸಿಕೊಳ್ಳುತ್ತದೆ, ಸಮೂಹದೊಂದಿಗೆ ಭಾಷಣ ಎನ್ನಿಸಿಕೊಳ್ಳುತ್ತದೆ. ಈ ಭಾಷಣ ಮಾಡುವ ವ್ಯಕ್ತಿ ಅಥವಾ ಪ್ರಭಾವಿ ಭಾಷಾಪ್ರೌಢಿಮೆಯೊಂದಿಗೆ ಜ್ಞಾನವಂತನೂ ಜವಾಬ್ದಾರಿಯುತನೂ ಆಗಿರಬೇಕಾಗುತ್ತದೆ. ಏಕೆಂದರೆ ಇಡೀ ಸಮೂಹವೇ ಸನ್ನಿಗೊಳಗಾದಂತೆ ಅವನ ಒಂದೊಂದು ಮಾತನ್ನು ಲಕ್ಷ್ಯಗೊಟ್ಟು ಕೇಳುತ್ತಿರುತ್ತದೆ. ಅಕಸ್ಮಾತ್​ ಆ ಪ್ರಭಾವಿಗೆ ಸ್ಥಳೀಯ ಭಾಷೆ ಗೊತ್ತಿಲ್ಲವಾದಲ್ಲಿ ಆತ ವ್ಯಾಖ್ಯಾನಕಾರರನ್ನು ಅವಲಂಬಿಸಬೇಕಾಗುತ್ತದೆ. ವ್ಯಾಖ್ಯಾನಕಾರರು ಯಥಾವತ್ ಪ್ರಸ್ತುತಪಡಿಸಿದರೆ ಸರಿ, ಇಲ್ಲವಾದರೆ? ನೋಡಿ ಈ ಕೆಳಗಿನ ವಿಡಿಯೋ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಕಲಾವಿದರಾದ ಪ್ರಿನ್ಸಿ ಪಾರೀಖ್ (Princy Parikh) ಮತ್ತು ಝೆರ್ವಾನ್​ ಜೆ ಬನ್​ಶಾಹ್ (Zervaan J Bunshah) ಹೀಗೊಂದು ರೀಲ್​ ಸೃಷ್ಟಿಸಿದ್ದು ಇದೀಗ ಭಾರೀ ವೈರಲ್ ಆಗುತ್ತಿದೆ. 10 ಮಿಲಿಯನ್​ಗಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. 7 ಲಕ್ಷಕ್ಕಿಂತಲೂ ಹೆಚ್ಚು ಜನ ಈ ವಿಡಿಯೋ ಇಷ್ಟಪಟ್ಟಿದ್ಧಾರೆ. ಇಂಗ್ಲಿಷ್​ನಲ್ಲಿ ಝೆರ್ವಾನ್​ ಹೇಳುವುದನ್ನು ತತ್​ಕ್ಷಣವೇ ಪ್ರಿನ್ಸಿ ಹಿಂದಿಯಲ್ಲಿ ಅನುವಾದಿಸಿ ಹೇಳುತ್ತಿದ್ದಾರೆ. ಏನು ಹೇಳುತ್ತಿದ್ದಾರೆ ಮತ್ತು ಆದ ಯಡವಟ್ಟು ಏನು ಎನ್ನುವುದನ್ನು ನೀವು ಕೇಳಿ ಬಿದ್ದು ಬಿದ್ದು ನಗುತ್ತಿರಬೇಕು. ನೆಟ್ಟಿಗರು ಈ ಬಗ್ಗೆ ಏನೆನ್ನುತ್ತಾರೆ?

ಇದನ್ನೂ ಓದಿ : Viral Video: ಹೀಗೊಂದು ಅಕ್ವೇರಿಯಂ ಟಾಯ್ಲೆಟ್, ಇದೆಲ್ಲಿದೆ ಗೊತ್ತೆ?

ಇಂಗ್ಲಿಷ್​ ಟೀಚರ್​ ಜೊತೆ ಪಿಟಿ ಟೀಚರ್​. ಈ ವಿಡಿಯೋ ಮಾಡುವಾಗ ರಾಹುಲ್​ ಗಾಂಧಿಗೆ ಧಕ್ಕೆಯಾಗಿಲ್ಲ ಎಂದುಕೊಳ್ಳುವೆ. ಆಕೆಯ ಆತ್ಮವಿಶ್ವಾಸ ಮಾತ್ರ ಸಖತ್​. ಟೆಲಿಪ್ರಾಂಪ್ಟರ್​ ಇಲ್ಲದ ಮೋದಿ (Narendra Modi) . ಮತ್ತೆ ಮತ್ತೆ ನೋಡಿ ನಗುತ್ತಿದ್ದೇನೆ. ಎಷ್ಟೇ ತಪ್ಪಾಗಲಿ ಆತ್ಮವಿಶ್ವಾಸ ಮಾತ್ರ ಅಖಂಡವಾಗಿರಬೇಕು. ರಾಹುಲ್​ ಗಾಂಧಿ (Rahul Gandhi) ಮತ್ತು ಸ್ವರಾ ಭಾಸ್ಕರ್… ಹೀಗೆಲ್ಲ ತಮಾಷೆ ಮಾಡುತ್ತಿದ್ದಾರೆ ನೆಟ್ಟಿಗರು.

ನಮ್ಮ ರಾಜಕಾರಣಿಗಳ ಭಾಷೆ, ಭಾಷಣ ಮತ್ತು ಅನುವಾದಕರ ಅಥವಾ ಟೆಲಿಪ್ರಾಂಪ್ಟರ್​ ಸಹಾಯ ಪಡೆಯುವುದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:48 am, Wed, 28 June 23

Follow Us
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ