Viral Video: ಉಚಿತ ಬಸ್ ಪ್ರಯಾಣಕ್ಕಾಗಿ ಬುರ್ಖಾ ಧರಿಸಿದ ಪುರುಷ
Dharwad : ಉಚಿತ ಬಸ್ ಪ್ರಯಾಣಕ್ಕಾಗಿ ಧಾರವಾಡದ ಬಸ್ ಸ್ಟ್ಯಾಂಡಿನಲ್ಲಿ ಬಸ್ಸಿಗಾಗಿ ಕಾಯ್ದು ಕುಳಿತಾಗ, ಸ್ಥಳೀಯರ ಕೈಗೆ ಸಿಕ್ಕಿಬಿದ್ದು ಇವನ ನಾಟಕ ಬಯಲಾಗಿದೆ. ಆದರೆ ತಾನು ಬುರ್ಖಾ ಧರಿಸಿದ್ದ ಉದ್ದೇಶವೇ ಬೇರೆ ಎಂದಿದ್ದಾನೆ ಈತ!
Free Bus Ride : ರಾಜ್ಯಾದ್ಯಂತ ಮಹಿಳೆಯರು ಉಚಿತ ಬಸ್ಗಳಲ್ಲಿ ಪ್ರಯಾಣಿಸುತ್ತಾ ತಮ್ಮ ತಮ್ಮ ಕೆಲಸಕಾರ್ಯಗಳಲ್ಲಿ ಮುಳುಗಿದ್ದಾರೆ. ಪುರುಷರು ಅವಕಾಶ ಸಿಕ್ಕಲ್ಲೆಲ್ಲಾ ಆ ಬಗ್ಗೆ ಟೀಕೆ ಟಿಪ್ಪಣಿ ತಕರಾರುಗಳನ್ನು ತೆಗೆದದ್ದೂ ಆಯಿತು. ಸಾಮಾಜಿಕ ಜಾಲತಾಣಗಳಲ್ಲಿ ಅವುಗಳು ವೈರಲ್ಲೂ ಆದವು. ತದನಂತರ ಎಲ್ಲವೂ ಸುಸೂತ್ರವಾಗಿ ಸಾಗುತ್ತಿದೆ ಎನ್ನುವಾಗಲೇ ವಿಚಿತ್ರ ಘಟನೆಯೊಂದು ನಡೆದಿದೆ. ಪುರುಷನೊಬ್ಬ ಬುರ್ಖಾ ಧರಿಸಿ ಉಚಿತ ಬಸ್ ಪ್ರಯಾಣ ಮಾಡಲು ಪ್ರಯತ್ನ ನಡೆಸುತ್ತಿರುವಾಗ ಸ್ಥಳೀಯರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ.
ಕೆಎಸ್ಆರ್ಟಿಸಿ ಬಸ್ನಲ್ಲಿ ಉಚಿತ ಪ್ರಯಾಣಕ್ಕಾಗಿ ಬುರ್ಖಾ ಧರಿಸಿ ಪ್ರಯಾಣ ಮಾಡಿದ ವಿಜಯಪುರದ ವೀರಭದ್ರಯ್ಯ. ಆದ್ರೆ, ಬುರ್ಖಾ ಧರಿಸಿದ್ದ ಉದ್ದೇಶವೇ ಬೇರೆ ಎಂದ..#Karnataka #ShaktiScheme #Congressguarantee #FreeBusTravel #ManwearingBurqa #Burqa pic.twitter.com/yWy5NvcNEH
ಇದನ್ನೂ ಓದಿ— ಸತೀಶ್ ಕಂದಗಲ್ ಪುರ (@sathisho2555) July 6, 2023
ಈ ವ್ಯಕ್ತಿಯನ್ನು ವಿಜಯಪುರದ ವೀರಭದ್ರಯ್ಯ ಮಠಪತಿ (Vijayapura) ಎಂದು ಗುರುತಿಸಲಾಗಿದೆ. ಗುರುವಾರದಂದು ಇವನು ಧಾರವಾಡದಿಂದ (Dharwad) ಉಚಿತವಾಗಿ ಪ್ರಯಾಣಿಸಲು ಇಲ್ಲಿಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತ ಕುಳಿತಿದ್ದಾನೆ. ಬುರ್ಖಾ ಧರಿಸಿ, ಮಹಿಳೆಯಂತೆ ನಟಿಸುತ್ತಿರುವಾಗ ಅಕ್ಕಪಕ್ಕದವರಿಗೆ ಅನುಮಾನ ಬಂದಿದೆ.
ಇದನ್ನೂ ಓದಿ : Viral Video: ಹಿಮಾಲಯದಲ್ಲಿಯೂ ಕುಡಿಯುವ ನೀರಿಗೆ ತತ್ವಾರ; ಈ ಉಪಾಯವೇ ಆಧಾರ
ನಂತರ ಕೆಲವರು ಅವನೊಂದಿಗೆ ಮಾತಿಗಿಳಿದಾಗ ತಾನು ಉಚಿತ ಬಸ್ ಪ್ರಯಾಣಕ್ಕಾಗಿ ಕಾದು ಕುಳಿತಿಲ್ಲ, ಭಿಕ್ಷೆ ಬೇಡಲು ಹೀಗೆ ವೇಷ ಹಾಕಿದ್ದೇನೆ ಎಂದಿದ್ದಾನೆ. ಆದರೆ ಅವನ ಬಳಿ ನಕಲಿ ಆಧಾರ್ ಕಾರ್ಡ್ ಪತ್ತೆಯಾಗಿದೆ. ಇದೆಲ್ಲವನ್ನು ಗಮನಿಸಿದಾಗ ಅಲ್ಲಿದ್ದವರಿಗೆ ಅವನು ಉಚಿತ ಬಸ್ ಪ್ರಯಾಣಕ್ಕೆ ಸಂಚು ಹೂಡಿದ್ದುದು ಖಾತ್ರಿಯಾಗಿದೆ.
ಇದನ್ನೂ ಓದಿ : Viral Video: ತಮಿಳಿನ ”ಟಮ್ ಟಮ್” ಧಾಟಿಯಲ್ಲಿ ಟೊಮ್ಯಾಟೋ ಗೀತೆ
ಈ ಟ್ವೀಟ್ ಅನ್ನು ಸತೀಶ್ ಕಂದಗಲ್ಪುರ್ ಎನ್ನುವವರು ಟ್ವೀಟ್ ಮಾಡಿದ್ದಾರೆ. ಇಂಡಿಯಾ ಟುಡೇ ಇದನ್ನು ವರದಿ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿಯ ಮೀಮ್ಗಳಲ್ಲಿಯ ಪಾತ್ರವೊಂದು ಹೀಗೊಂದು ದಿನ ಎದ್ದು ಬರಬಹುದು ಎಂಬ ಕಲ್ಪನೆಯೇ ಇರಲಿಲ್ಲ ಅಲ್ಲವೆ? ಏನಂತೀರಿ ಈ ವಿಡಿಯೋ ನೋಡಿದ ನೀವು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 6:34 pm, Sat, 8 July 23