Viral Video: ದೀರ್ಘಚುಂಬನ ಸ್ಪರ್ಧೆಯನ್ನು ಗಿನ್ನೀಸ್ ವಿಶ್ವದಾಖಲೆ ಕೈಬಿಟ್ಟಿದ್ದೇಕೆ?

Long Kiss : ಈ ಸ್ಪರ್ಧೆಯ ನಿಯಮಗಳು ಎಷ್ಟು ಕಠಿಣವಿದ್ದವು, ಎಂತೆಂಥ ಅಪಾಯವನ್ನು ಈತನಕದ ಸ್ಪರ್ಧಾಳುಗಳು ಮತ್ತು ವಿಜೇತರು ಅನುಭವಿಸಿದರು ಮತ್ತು ಪರಿಣಾಮವೇನಾಯಿತು ಎನ್ನುವುದನ್ನು ಗಿನ್ನೀಸ್​ ವಿಶ್ವದಾಖಲೆ ಉಲ್ಲೇಖಿಸಿದೆ.

Viral Video: ದೀರ್ಘಚುಂಬನ ಸ್ಪರ್ಧೆಯನ್ನು ಗಿನ್ನೀಸ್ ವಿಶ್ವದಾಖಲೆ ಕೈಬಿಟ್ಟಿದ್ದೇಕೆ?
ಸೌಜನ್ಯ : ಅಂತರ್ಜಾಲ
Follow us
ಶ್ರೀದೇವಿ ಕಳಸದ
|

Updated on:Jul 08, 2023 | 12:47 PM

GWR : 2013ರ ದೀರ್ಘಚುಂಬನ (Longest Kiss World Record) ಗಿನ್ನೀಸ್ ವಿಶ್ವದಾಖಲೆಯ ಕೊನೆಯ ಥಾಯ್​ ಜೋಡಿ ಎಕ್ಕಾಚಾಯ್ ಮತ್ತು ಲಕ್ಷನಾ ತಿರಾನರತ್. ಇವರು 58 ಗಂಟೆ 35 ನಿಮಿಷಗಳ ಕಾಲ ಸತತವಾಗಿ ಚುಂಬಿಸಿ ವಿಶ್ವದಾಖಲೆ ನಿರ್ಮಿಸಿದ್ದರು. ಆದರೆ ಈ ಸ್ಪರ್ಧೆಯು ಅಪಾಯಕಾರಿಯಾಗಿದ್ದು, ನಿಯಮಗಳು ಗೊಂದಲಕಾರಿಯೂ ಮತ್ತು ವ್ಯತಿರಿಕ್ತತೆಯಿಂದಲೂ ಕೂಡಿವೆ ಎಂಬ ಕಾರಣ ಮತ್ತು ಸಾಕ್ಷ್ಯಾಧಾರಗಳನ್ನು ನೀಡಿ ಗಿನ್ನೀಸ್​ ವಿಶ್ವದಾಖಲೆಯು ಈ ಸ್ಪರ್ಧೆಯನ್ನು ತನ್ನ ಸ್ಪರ್ಧಾಪಟ್ಟಿಯಿಂದ ಸ್ವತಃ ತೆಗೆಯಿತು. ಗಿನ್ನೀಸ್​ ವಿಶ್ವದಾಖಲೆ ಉಲ್ಲೇಖಿಸಿದ ಕೆಲವು ಅಂಶಗಳನ್ನು ಈ ಕೆಳಗಿನಂತಿವೆ.

ಇದನ್ನೂ ಓದಿ : Viral: ಬಾರ್ಬಿರೇಖಾ; ”ಇಲ್ಲಿ ನೋಡಿ ಸರ್”; ಅಮಿತಾಬ್​ರನ್ನು ಟ್ಯಾಗ್​ ಮಾಡುತ್ತಿರುವ ನೆಟ್ಟಿಗರು

ಈ ಸ್ಪರ್ಧೆಯಲ್ಲಿ ಜೋಡಿಯು ನಿರಂತರವಾಗಿ ಚುಂಬಿಸುತ್ತಿರಬೇಕು. ಉದ್ದಕ್ಕೂ ಪರಸ್ಪರರ ತುಟಿಗಳು ಅಂಟಿಕೊಂಡೇ ಇರಬೇಕು, ಅರೆಕ್ಷಣವೂ ತುಟಿಗಳನ್ನು ಬಿಡಬಾರದು. ಹಾಗೆ ಮಾಡಿದರೆ ಆ ಜೋಡಿ ಅನರ್ಹ ಎಂದು ತೀರ್ಮಾನಿಸಲಾಗುತ್ತದೆ. ಸ್ಪರ್ಧಾರ್ಥಿಗಳು ಸ್ಟ್ರಾ ಮೂಲಕ ದ್ರವಾಹಾರ ಸೇವಿಸಬಹುದು. ಆದರೆ ಈ ಸಂದರ್ಭದಲ್ಲಿಯೂ ಇಬ್ಬರ ತುಟಿಗಳೂ ಬೇರ್ಪಡಬಾರದು. ಇಷ್ಟೇ ಅಲ್ಲ, ಜೋಡಿಯೂ ಸ್ಪರ್ಧೆಯುದ್ದಕ್ಕೂ ಎಚ್ಚರವಾಗಿಯೇ ಇರಬೇಕು ಮತ್ತು ನಿಂತುಕೊಂಡೇ ಚುಂಬಿಸಬೇಕು. ವಿಶ್ರಾಂತಿ ಮತ್ತು ಬಿಡುವಿಗೆ ಅನುಮತಿಯಂತೂ ಇಲ್ಲವೇ ಇಲ್ಲ. ಅಲ್ಲದೆ ಅಡಲ್ಟ್​ ಡೈಪರ್​, ಪ್ಯಾಡ್​​ಗಳನ್ನು ಧರಿಸುವಂತಿಲ್ಲ. ಶೌಚಾಲಯಕ್ಕೆ ಹೋಗಬೇಕಾದ ಸಂದರ್ಭ ಬಂದರೂ ಜೋಡಿಗಳು ಪರಸ್ಪರರ ತುಟಿಗಳನ್ನು ಬಿಡುವಂತಿಲ್ಲ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ಹೈಸ್ಕೂಲ್​ ಕ್ರಷ್​; 60 ವರ್ಷಗಳ ನಂತರ ಪ್ರೇಮ ನಿವೇದನೆ ​

ಇಷ್ಟೊಂದು ಕಠಿಣ ನಿಯಮಗಳಿರುವಾಗ ಜೋಡಿಯು ಸಹಜವಾಗಿ ಸೋಲಿಗೆ ಶರಣಾಗುತ್ತದೆ. ಅಲ್ಲದೆ, ಅನೇಕರು ನಿದ್ರಾಹೀನತೆಗೆ ಸಂಬಂಧಿಸಿದ ಅಪಾಯ ಮತ್ತು ಮನೋರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ ಎಂದು ಗಿನ್ನೇಸ್​ ಹೇಳಿದೆ. 1999ರಲ್ಲಿ ಇಸ್ರೇಲ್‌ನ ಕರ್ಮಿತ್ ಟ್ಜುಬೆರಾ ಮತ್ತು ಡ್ರೊರ್ ಒರ್ಪಾಜ್ ಅವರು 30 ಗಂಟೆಗಳ 45 ನಿಮಿಷಗಳ ಕಾಲ ಚುಂಬಿಸಿ ದಾಖಲೆ ಮಾಡಿದ್ದರು. ಆದರೆ ಅರೆಪ್ರಜ್ಞಾವಸ್ಥೆಯಲ್ಲಿದ್ದ ಕಾರಣ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಯಿತು. ನಂತರ ಚಿಕಿತ್ಸೆಯಿಂದ ಅವರು ಚೇತರಿಸಿಕೊಂಡರಲ್ಲದೆ ರೂ. 2,06,775 ನಗದು ಬಹುಮಾನವನ್ನು ಗೆದ್ದರು.

ಇದನ್ನೂ ಓದಿ : Viral: ಕಾಂಡೋಮ್​ ಆರ್ಡರ್​ ಮಾಡುವಾಗ ಡೆಲಿವರಿ ಅಡ್ರೆಸ್ ಬದಲಾಯಿಸಲು ಅವನು ಮರೆತ

2004ರ ಸ್ಪರ್ಧೆಯಲ್ಲಿ ಗೆದ್ದ ಇಟಲಿಯ 37 ವರ್ಷದ ಆ್ಯಂಡ್ರಿಯಾ ಸರ್ಟಿ ಥಾಯ್ಲೆಂಡಿನ ತನ್ನ ಗೆಳತಿ ಅನ್ನಾ ಚೆನ್​ ಅವರನ್ನು 31 ಗಂಟೆ 18 ನಿಮಿಷಗಳ ಕಾಲ ಚುಂಬಿಸಿದ್ದರು. ಉಸಿರಾಟದ ತೊಂದರೆಯಿಂದಾಗಿ ಅವರಿಗೆ ಆಮ್ಲಜನಕವನ್ನು ಪೂರೈಸಬೇಕಾಯಿತು. 2011 ರಲ್ಲಿ, ಒಬ್ಬ ಮಹಿಳೆ ಸ್ಪರ್ಧೆ ಶುರುವಾಗಿ 30 ನಿಮಿಷಗಳ ನಂತರ ಪ್ರಜ್ಞಾಹೀನ ಸ್ಥಿತಿಗೆ ತಲುಪಿದರು. 2013 ರಲ್ಲಿ ಥಾಯ್ ದಂಪತಿಗಳಾದ ಎಕ್ಕಾಚಾಯ್ ಮತ್ತು ಲಕ್ಷನಾ ತಿರಾನರತ್ ಅವರು ಸುದೀರ್ಘವಾಗಿ ಚುಂಬಿಸಿ  ವಿಶ್ವದಾಖಲೆ ಸ್ಥಾಪಿಸಿದರು. ಅವರು 58 ಗಂಟೆ 35 ನಿಮಿಷಗಳ ಕಾಲ ಚುಂಬಿಸಿದ್ದರು. ಹಿಂದೆ 2011 ರಲ್ಲಿ ದಾಖಲೆಯನ್ನು ಗೆದ್ದ ಜೋಡಿ ರೂ. 23,465 ಮತ್ತು ರೂ. 2,34,650 ಮೌಲ್ಯದ ಎರಡು ವಜ್ರದ ಉಂಗುರಗಳನ್ನು ಬಹುಮಾನವಾಗಿ ಪಡೆದುಕೊಂಡಿದ್ದರು.

ಹೇಗಿದೆ ವಿಶ್ವದಾಖಲೆಗಾಗಿ ಚುಂಬನ ಸ್ಪರ್ಧೆಯಲ್ಲಿ ಭಾಗವಹಿಸಿದವರ ಕಥೆ ಮತ್ತು ವ್ಯಥೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:43 pm, Sat, 8 July 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್