Viral: ಕಾಂಡೋಮ್​ ಆರ್ಡರ್​ ಮಾಡುವಾಗ ಡೆಲಿವರಿ ಅಡ್ರೆಸ್ ಬದಲಾಯಿಸಲು ಅವನು ಮರೆತ

Online Delivery : ಏನಾಗುವುದೆಲ್ಲಾ ಒಂದು ಕ್ಷಣದಲ್ಲಿಯೇ ಆಗುತ್ತದೆ. ಆ ಒಂದು ಕ್ಷಣವನ್ನೇ ಎಚ್ಚರದಿಂದ ನಿರ್ವಹಿಸಬೇಕು. ಇಲ್ಲವಾದರೆ ಇಂಥ ಯಡವಟ್ಟು ಆಗುವ ಸಾಧ್ಯತೆ ಇರುತ್ತದೆ!

Viral: ಕಾಂಡೋಮ್​ ಆರ್ಡರ್​ ಮಾಡುವಾಗ ಡೆಲಿವರಿ ಅಡ್ರೆಸ್ ಬದಲಾಯಿಸಲು ಅವನು ಮರೆತ
ಸೌಜನ್ಯ : ಅಂತರ್ಜಾಲ
Follow us
ಶ್ರೀದೇವಿ ಕಳಸದ
|

Updated on:Jul 08, 2023 | 10:42 AM

Online Order : ಆನ್​ಲೈನ್​ ಪ್ಲ್ಯಾಟ್​ಫಾರ್ಮಗಳ ತ್ವರಿತ ಸೇವೆಯಿಂದಾಗಿ ದಿನಸಿ ಸಾಮಾನು, ಔಷಧಿ, ತಿಂಡಿತಿನಿಸು ಮತ್ತು ದಿನಬಳಕೆ ವಸ್ತುಗಳು ಮನೆಗೇ ತಲುಪುತ್ತವೆಯಾದ್ದರಿಂದ ಜನರಿಗೆ ಇದರಿಂದ ಹೆಚ್ಚು ಅನುಕೂಲವಾಗಿದೆ. ಆದರೆ ಆರ್ಡರ್ ಮಾಡುವಾಗ ಸ್ವಲ್ಪ ಗಮನ ಆಚೀಚೆ ಆಯಿತೋ ಯಡವಟ್ಟು ಕಟ್ಟಿಟ್ಟ ಬುತ್ತಿ! ಇದೀಗ ವೈರಲ್ ಆಗುತ್ತಿರುವ ಈ ಟ್ವೀಟ್ ಗಮನಿಸಿ. ಇಲ್ಲಿ ಆಗಿರುವ ಯಡವಟ್ಟಿಗೆ ಮುಜುಗರವೂ ಸಣ್ಣ ನಗುವೂ ಒಟ್ಟಿಗೇ ಹೊಮ್ಮುತ್ತದೆ. ಎಲೆನಾ ಎಂಬಾಕೆ ತನ್ನ ಸಹೋದರ ಮಾಡಿದ ಈ ಯಡವಟ್ಟನ್ನು ಟ್ವೀಟ್ (Tweet) ಮಾಡಿ ಬಹಿರಂಗಗೊಳಿಸಿದ್ದಾಳೆ.

ಸಾಮಾನ್ಯವಾಗಿ ಸ್ವಿಗ್ಗಿ, ಬ್ಲಿಂಕಿಟ್​, ಅಮೇಝಾನ್​, ಇನ್ಸ್ಟಾಮಾರ್ಟ್​, ಝೆಪ್ಟೋ ಮುಂತಾದ ಆನ್​​ಲೈನ್​ ಪ್ಲ್ಯಾಟ್​ಫಾರ್ಮ್​ನಲ್ಲಿ ನೀವೇ ನಿಮ್ಮ ಮನೆಯ ವಿಳಾಸವನ್ನು ಸೇವ್ ಮಾಡಿರುತ್ತೀರಿ. ಕೆಲವೊಮ್ಮೆ ನಿಮ್ಮ ಆಫೀಸ್​, ಸ್ನೇಹಿತರ ಮನೆಯ ವಿಳಾಸವನ್ನೂ ಸೇವ್ ಮಾಡಿರುತ್ತೀರಿ. ಅಂದರೆ ನೀವು ಎಲ್ಲಿರುತ್ತೀರೋ ಅಲ್ಲಿಗೆ ನಿಮ್ಮ ಆರ್ಡರ್​ ಬಂದು ತಲುಪಲಿ ಎನ್ನುವ ಉದ್ದೇಶದಿಂದ. ಆದರೆ ಎಲೆನಾಳ ಸಹೋದರ ಮನೆಯ ಅಡ್ರೆಸ್ ಬದಲಾಯಿಸದೇ ಕಾಂಡೋಮ್​ ಆರ್ಡರ್ ಮಾಡಿಬಿಟ್ಟಿದ್ದಾನೆ. ಅದು ಆತನ ತಾಯಿಗೆ ತಲುಪಿದೆ!

ಇದನ್ನೂ ಓದಿ : Viral: ಬಾರ್ಬಿರೇಖಾ ”ಇಲ್ಲಿ ನೋಡಿ ಸರ್” ಅಮಿತಾಬ್​ರನ್ನು ಟ್ಯಾಗ್​ ಮಾಡುತ್ತಿರುವ ನೆಟ್ಟಿಗರು 

‘ನನ್ನ ಸಹೋದರ ಆರ್ಡರ್​ ಮಾಡುವಾಗ ವಿಳಾಸವನ್ನು ಬದಲಾಯಿಸುವುದನ್ನು ಮರೆತನೋ ಏನೋ. ಏಕೆಂದರೆ ಆರ್ಡರ್​ ನನ್ನ ತಾಯಿಯನ್ನು ತಲುಪಿದೆ” ಎಂದಿದ್ದಾರೆ ಎಲೆನಾ. ಈ ಪೋಸ್ಟ್​ ಅನ್ನು ಜುಲೈ 4 ರಂದು ಇವರು ಟ್ವೀಟ್ ಮಾಡಿದ್ದಾರೆ. ಸುಮಾರು 7.8 ಲಕ್ಷ ಜನರು ಇದನ್ನು ನೋಡಿದ್ದಾರೆ. 5,500ಕ್ಕೂ ಹೆಚ್ಚು ಜನರು ಇದನ್ನು ಲೈಕ್ ಮಾಡಿದ್ದಾರೆ. ಸುಮಾರು 300 ಜನರು ರೀಟ್ವೀಟ್ ಮಾಡಿದ್ದಾರೆ. ನೂರಾರು ನೆಟ್ಟಿಗರು ಪ್ರತಿಕ್ರಿಯಿಸಿ ಮುಂದೇನಾಯಿತು, ಈ ವಿಷಯವಾಗಿ ನಿಮ್ಮ ಸಹೋದರ ನಿಮ್ಮ ತಾಯಿಗೆ ಏನೆಂದು ಉತ್ತರಿಸಿದರು? ಎಂದು ಕೇಳಿದ್ದಾರೆ.

ಇದೊಂದು ಕೆಟ್ಟ ಕನಸು. ಫೋನ್ ಸ್ವಿಚ್​ಆಫ್ ಮಾಡಿರಬಹುದು. ಜೀವನದಲ್ಲಿ ನನಗೆ ಇಂಥ ಸಮಸ್ಯೆಗಳು ಬೇಕು, ಅಂದರೇನೇ ಮಜಾ… ಅಂತೆಲ್ಲ ಊಹಿಸಿಕೊಂಡು ಪ್ರತಿಕ್ರಿಯಿಸಿದ್ದಾರೆ ನೆಟ್ಟಿಗರು. ನಂತರ ವಾಟ್ಸಪ್​ ಫ್ಯಾಮಿಲಿ ಗ್ರೂಪ್​ನಿಂದ ತಾಯಿ ಮಗನನ್ನು ಹೊರಹಾಕಿದ್ದಾರೆ. ಎಲೆನಾ ತನ್ನ ಸಹೋದರನನ್ನು ಮತ್ತೆ ಸೇರಿಸಿದ್ದಾರೆ. ಮತ್ತೆ ತಾಯಿ ಆತನನ್ನು ಹೊರಹಾಕಿದ್ದಾರೆ. ಈ ಸ್ಕ್ರೀನ್ ಶಾಟ್ ಅನ್ನೂ ಎಲೆನಾ ಟ್ವೀಟ್ ಮಾಡಿದ್ದಾರೆ.

ಆನ್​ಲೈನ್​ ಡೆಲಿವರಿಯ ಅನುಭಗಳು ನಿಮ್ಮ ಬಳಿಯೂ ಇರಬಹುದು, ಹಂಚಿಕೊಳ್ಳಿ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:38 am, Sat, 8 July 23

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ