Viral: ತನ್ನ ಹುಟ್ಟುಹಬ್ಬಕ್ಕೆ ಪ್ರತೀ ಗ್ರಾಹಕರಿಗೂ ಚಾಕೋಲೇಟ್ ಕೊಟ್ಟ ಝೊಮ್ಯಾಟೋ ಉದ್ಯೋಗಿ

Zomato: ಕರಣ್​ ಫೇಸ್​ಬುಕ್​ನಲ್ಲಿ ಈ ವಿಷಯವನ್ನು ಹಂಚಿಕೊಳ್ಳುತ್ತಿದ್ದಂತೆ ಸಾವಿರಾರು ಜನರು ಶುಭಹಾರೈಸಿದ್ದಾರೆ. ಕೆಲವರು ಝೊಮ್ಯಾಟೋಗೆ ಟ್ಯಾಗ್​ ಮಾಡಿ, ಕರಣ್​ಗೆ ಉಡುಗೊರೆಯನ್ನು ಕೊಡಬೇಕೆಂದು ಒತ್ತಾಯಿಸಿದ್ದಾರೆ.

Viral: ತನ್ನ ಹುಟ್ಟುಹಬ್ಬಕ್ಕೆ ಪ್ರತೀ ಗ್ರಾಹಕರಿಗೂ ಚಾಕೋಲೇಟ್ ಕೊಟ್ಟ ಝೊಮ್ಯಾಟೋ ಉದ್ಯೋಗಿ
ಝೊಮ್ಯಾಟೋ ಡೆಲಿವರಿ ಎಕ್ಸಿಕ್ಯೂಟಿವ್​ ಕರಣ್ ತನ್ನ ಹುಟ್ಟುಹಬ್ಬದ ದಿನ ಗ್ರಾಹಕರ ಬಾಕ್ಸ್​​ಗಳಿಗೆ ಚಾಕೋಲೇಟ್ ಅಂಟಿಸಿರುವುದು
Follow us
ಶ್ರೀದೇವಿ ಕಳಸದ
|

Updated on: Jun 30, 2023 | 2:54 PM

Birthday: ಹುಟ್ಟುಹಬ್ಬ! ಪ್ರತಿಯೊಬ್ಬರೂ ಒಂದೊಂದು ಪುಟವನ್ನು ಹಿಂದಿಕ್ಕಿ ಹೊಸ ಪುಟಕ್ಕೆ ಕಾಲಿಡುವ ವಿಶೇಷ ದಿನ. ದೊಡ್ಡವರಾಗುತ್ತಿದ್ದಂತೆ ಆಚರಣೆ ಸೀಮಿತವಾಗುತ್ತದೆ, ಕೆಲವೊಮ್ಮೆ ನಿಂತೇ ಹೋಗುತ್ತದೆ. ಕೊನೆಗೆ ಶುಭಹಾರೈಕೆಗಳೊಂದಿಗೆ ಮುಂದುವರಿಯುತ್ತಾ ಹೋಗುತ್ತದೆ. ಆದರೂ ಒಳಮನಸ್ಸು ನಮಗರಿವಿಲ್ಲದೆಯೇ ನಮ್ಮ ಪ್ರೀತಿಪಾತ್ರರಿಂದ ಆಪ್ತಹಾರೈಕೆಯನ್ನು ನಿರೀಕ್ಷಿಸುತ್ತಿರುತ್ತದೆ. ಸಂಕೋಚದ ಮನಸ್ಸು ಮುದುಡಿ ಸುಮ್ಮನಾಗುತ್ತದೆ. ಸಂಭ್ರವನ್ನು ನಿರೀಕ್ಷಿಸುವ ಮನಸ್ಸು ತಾನಾಗಿಯೇ ತೆರೆದುಕೊಳ್ಳುತ್ತದೆ. ಇದೀಗ ವೈರಲ್ ಆದ ಈ ಚಿತ್ರವನ್ನು ನೋಡಿ. ಝೊಮ್ಯಾಟೋ ಡೆಲಿವರಿ ಎಕ್ಸಿಕ್ಯೂಟಿವ್ (Zomato Delivery executive) ಅತ್ಯಂತ ವಿಭಿನ್ನ ರೀತಿಯಲ್ಲಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಕರಣ್ ಆಪ್ಟೆ ಎನ್ನುವ ಡೆಲಿವರಿ ಎಕ್ಸಿಕ್ಯೂಟಿವ್​ ಇತ್ತೀಚೆಗೆ ತಮ್ಮ 30ನೇ ಹುಟ್ಟುಹಬ್ಬದ ಆಚರಣೆಗಾಗಿ ರಜೆ ಹಾಕಲಿಲ್ಲ. ತನ್ನವರಿಂದ ಉಡುಗೊರೆಗಳನ್ನು ನಿರೀಕ್ಷಿಸಲಿಲ್ಲ ಅಥವಾ ಕೆಲಸದಲ್ಲಿದ್ದೂ ತಮ್ಮಷ್ಟಕ್ಕೆ ತಾವು ಉಳಿಯಲಿಲ್ಲ. ಬದಲಾಗಿ ಹೊಸ ಶರ್ಟ್​ ಧರಿಸಿ, ಡೆಲಿವರಿ ಬಾಕ್ಸ್​ಗಳ ಮೇಲೆ ಒಂದೊಂದು ಚಾಕೊಲೇಟ್​ ಅಂಟಿಸಿ ಗಾಡಿಯೇರಿ ಹೊರಟಿದ್ದಾರೆ. ಇಡೀ ದಿನ ತನ್ನ ಗ್ರಾಹಕರಿಗೆ ಚಾಕೋಲೇಟ್​​ ಹಂಚಿ ಖುಷಿಪಡಿಸಿದ್ದಾರೆ ತಾವೂ ಖುಷಿಗೊಂಡಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಕರಣ್​ ಫೇಸ್​ಬುಕ್​ನಲ್ಲಿ ಈ ವಿಷಯವನ್ನು ಹಂಚಿಕೊಳ್ಳುತ್ತಿದ್ದಂತೆ ಸಾವಿರಾರು ಜನರು ಶುಭಹಾರೈಸಿದ್ದಾರೆ. ಕೆಲವರು ಝೊಮ್ಯಾಟೋಗೆ ಟ್ಯಾಗ್​ ಮಾಡಿ, ಕರಣ್​ಗೆ ಉಡುಗೊರೆಯನ್ನು ಕೊಡಬೇಕೆಂದು ಒತ್ತಾಯಿಸಿದ್ದಾರೆ. ನಂತರ ಝೊಮ್ಯಾಟೋ ಅಹವಾಲಿಗೆ ಸ್ಪಂದಿಸಿ ಕರಣ್​ಗೆ ಕೇಕ್​ ಕಳುಹಿಸಿದೆ. ಇದಕ್ಕೆ ಪ್ರತಿಯಾಗಿ ಕಂಪೆನಿಗೆ ಮತ್ತು ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ ಕರಣ್.

ಇದನ್ನೂ ಓದಿ: Viral Video: ಹಲಸಿನಹಣ್ಣಿನ ವ್ಯಾಪಾರಿಯ ಜೀವನಪಾಠವನ್ನು ಒಪ್ಪದ ನೆಟ್ಟಿಗರು

ಕರಣ್​ನ ಮೊದಲ ಪೋಸ್ಟ್​ ಅನ್ನು ಈತನಕ ಸುಮಾರು 3,500ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ಧಾರೆ. 270 ಜನರು ಪ್ರತಿಕ್ರಿಯಿಸಿದ್ದಾರೆ. 1,700ಕ್ಕೂ ಹೆಚ್ಚು ಜನರು ಇದನ್ನು ಹಂಚಿಕೊಂಡಿದ್ದಾರೆ. ಏನೇ ಆಗಲಿ ಜಗತ್ತು ನಿಮ್ಮೊಂದಿಗೆ ಎನ್ನುವ ಆತ್ಮವಿಶ್ವಾಸದ ಮುಂದೆ ಬೇರೆ ಇನ್ನೇನಿದೆ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ