Viral: ಲೂಯೀಸ್ ವ್ಯೂಟ್ಟನ್; ಅಕ್ಕಿಕಾಳಿಗಿಂತಲೂ ಚಿಕ್ಕ ಚೀಲ, ರೂ. 51 ಲಕ್ಷಕ್ಕೆ ಮಾರಾಟ

Bag : ಈ ಬ್ಯಾಗ್ ಅನ್ನು ಅರ್ಧ ಕೋಟಿ ಕೊಟ್ಟು ಖರೀದಿಸುವುದಲ್ಲದೆ ಜೊತೆಗೆ ಮೈಕ್ರೋಸ್ಕೋಪ್​ ಅನ್ನು ಹೊತ್ತುಕೊಂಡು ಓಡಾಡಬೇಕಲ್ಲ! ಫ್ರೀ ಕೊಟ್ಟರೂ ನೀವು ಈ ಬ್ಯಾಗ್​ ಬೇಡ ಎನ್ನುತ್ತೀರೇ?

Viral: ಲೂಯೀಸ್ ವ್ಯೂಟ್ಟನ್; ಅಕ್ಕಿಕಾಳಿಗಿಂತಲೂ ಚಿಕ್ಕ ಚೀಲ, ರೂ. 51 ಲಕ್ಷಕ್ಕೆ ಮಾರಾಟ
ಮೈಕ್ರೋಸ್ಕೋಪಿಕ್​ ಬ್ಯಾಗ್​​
Follow us
|

Updated on:Jun 30, 2023 | 11:06 AM

Microscopic Handbag : ಶೀರ್ಷಿಕೆ ಓದಿ ಅಚ್ಚರಿಯಾಗಿರಬೇಕಲ್ಲ? ಹೌದು ಇದನ್ನು ಮೈಕ್ರೋಸ್ಕೋಪಿಕ್​ ಹ್ಯಾಂಡ್​ಬ್ಯಾಗ್​ ಎಂದು ಕರೆದಿದೆ ಇದನ್ನು ತಯಾರಿಸಿದ ಲೂಯೀಸ್​ ವ್ಯೂಟ್ಟನ್​ (Louis Vuitton) ಕಂಪೆನಿ. ಫ್ಲೋರೋಸೆಂಟ್​ ಹಸಿರು ಮತ್ತು ಹಳದೀ ಬಣ್ಣದಿಂದ ಕೂಡಿರುವ ಈ ಚೀಲ ಅಕ್ಕಿಕಾಳಿಗಿಂತಲೂ ಚಿಕ್ಕ ಗಾತ್ರದಲ್ಲಿದೆ. ಆನ್​​​ಲೈನ್​ನಲ್ಲಿ ಹರಾಜಿಗೆ ಹಾಕಿದಾಗ ಇದು ರೂ. 51 ಲಕ್ಷಕ್ಕೆ ಮಾರಾಟವಾಗಿದೆ. ಬ್ರೂಕ್ಲಿನ್ ಕಲೆ ಮತ್ತು ಜಾಹೀರಾತು (Advertisement) ಸಮೂಹವು (MSCHF) ಸಂಬಂಧಿಸಿದ ಚಿತ್ರಗಳನ್ನು ಇನ್​ಸ್ಟಾನಲ್ಲಿ ಹಂಚಿಕೊಂಡಾಗಿನಿಂದ ಅಂತರ್ಜಾಲದಲ್ಲಿ ಸಂಚಲನ ಮೂಡಿದೆ. ನೆಟ್ಟಿಗರು ಉತ್ಸುಕತೆಯಿಂದ ಪ್ರತಿಕ್ರಿಯಿಸುತ್ತಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by MSCHF (@mschf)

ಇದರ ಗಾತ್ರದ ಬಗ್ಗೆ ಇನ್ನಷ್ಟು ನಿಖರವಾಗಿ ಹೇಳಬೇಕೆಂದರೆ, ಸಮುದ್ರದ ಉಪ್ಪಿನ ಕಣಕ್ಕಿಂತ ಮತ್ತು ಸೂಜಿಯ ಕಣ್ಣಿನೊಳಗಿಂದ ಹಾಯ್ದು ಹೋಗುವಷ್ಟು ಚಿಕ್ಕದು. ಈ ಮೈಕ್ರೋಸ್ಕೋಪಿಕ್ ಚೀಲವನ್ನು ಸೂಕ್ಷ್ಮದರ್ಶಕ ಯಂತ್ರದ ಮೂಲಕವಷ್ಟೇ ನೋಡಲು ಸಾಧ್ಯ. ಜುಪಿಟರ್​ ಎಂಬ ಆನ್​ಲೈನ್​ ಹರಾಜು ಕಂಪೆನಿಯ ವೆಬ್​ಸೈಟ್​ ಇದರ ಬಗ್ಗೆ ಮಾಹಿತಿ ಮತ್ತು ವಿವರಗಳನ್ನು ಹಂಚಿಕೊಂಡಿದೆ. ಈ ಬ್ಯಾಗ್​ ಅನ್ನು 2 ಫೋಟಾನ್​ ಪಾಲಿಮರ್​ ಮುದ್ರಣ ವಿಧಾನದಿಂದ ರೂಪಿಸಲಾಗಿದೆ. ಡಿಜಿಟಲ್​ ಡಿಸ್ಪ್ಲೇ ಕೂಡ ಇದೆ.

ಇದನ್ನೂ ಓದಿ : Viral Video: ಟೀಚರ್​ ಡ್ರೆಸ್​ ಮೇಲೆ ಮಕ್ಕಳ ಡ್ರಾಯಿಂಗ್​; ಹೀಗೊಂದು ಮಧುರ ಬೀಳ್ಕೊಡುಗೆ

ನಾನು ಈ ಚೀಲವನ್ನು ಕದ್ದು ತಿಂದುಬಿಡುತ್ತೇನೆ, ಆಗ ಇದು ಯಾರಿಗೂ ದಕ್ಕಲಾರದು ಎಂದಿದ್ದಾರೆ ಒಬ್ಬರು. ಅದಕ್ಕೆ ಪ್ರತಿಯಾಗಿ, ಈ ಪ್ರತಿಕ್ರಿಯೆಗೆ ಸಾವಿರ ಲೈಕ್​ಗಳು. ನಾನು ಈ ಚೀಲವನ್ನು ತಿಂದುಮುಗಿಸುತ್ತೇನೆ ಎಂದಿದ್ಧಾರೆ ಇನ್ನೊಬ್ಬರು. ಸ್ಪಿರಿಟ್ ಏರ್​​ಲೈನ್ಸ್ (Spirit Airlines) ಇದನ್ನು ಹೇಗೆ ತಪಾಸಣೆ ಮಾಡಬಹುದು ಎಂಬ ಕುತೂಹಲ ಎಂದು ಮತ್ತೊಬ್ಬರು ಹೇಳಿದ್ದಾರೆ. ಇದೂ ಅತ್ಯುತ್ತಮವಾದ ಪ್ರತಿಕ್ರಿಯೆ ಎಂದಿದ್ದಾರೆ ನೆಟ್ಟಿಗರು. ಇದನ್ನು ಖರೀದಿಸಿದರೆ ಮೈಕ್ರೋಸ್ಕೋಪ್​ ಉಚಿತವೇ? ಎಂದು ಕೆಲವರು ಕೇಳಿದ್ದಾರೆ. ಒಟ್ಟಾರೆಯಾಗಿ ಈ ಉತ್ಪನ್ನವು ನೆಟ್ಟಿಗರೊಳಗಿನ ಸೃಜನಶೀಲತೆಯನ್ನು ಬಡಿದೆಬ್ಬಿಸಿದೆ!

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

Published On - 11:04 am, Fri, 30 June 23

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ