Viral Video: ಸಂಪ್ರದಾಯವನ್ನು ಸೀರೆಯುಟ್ಟೇ ಮುರಿದಿದ್ದಾರೆ ಈ ಪಂಚರತ್ನೆಯರು

Unconventional : ಸೀರೆಯುಟ್ಟುಕೊಂಡೇ ಇವರು ವರ್ಕೌಟ್​, ಯೋಗನೃತ್ಯ, ಫುಟ್​ಬಾಲ್​, ಜಿಮ್ನಾಸ್ಟಿಕ್​, ಮ್ಯಾರಥಾನ್​ ಪೂರೈಸಿದ್ಧಾರೆ. ಈ ವಿಡಿಯೋಗಳನ್ನು ನೋಡಿದ ಸಾಮಾಜಿಕ ಜಾಲತಾಣಿಗರು ನಿಬ್ಬರಗಾಗಿದ್ದಾರೆ. ನೋಡಿ ನೀವೂ.

Viral Video: ಸಂಪ್ರದಾಯವನ್ನು ಸೀರೆಯುಟ್ಟೇ ಮುರಿದಿದ್ದಾರೆ ಈ ಪಂಚರತ್ನೆಯರು
ವರ್ಕೌಟ್​ನಲ್ಲಿ ರೀನಾ ಸಿಂಗ್​ ಮತ್ತು ಯೋಗನೃತ್ಯದಲ್ಲಿ ರುಕ್ಮಿಣಿ ವಿಜಯಕುಮಾರ್
Follow us
ಶ್ರೀದೇವಿ ಕಳಸದ
|

Updated on:Jun 30, 2023 | 1:10 PM

Saree : ಕೆಲವು ವೃತ್ತಿ, ಕೆಲಸ, ಚಟುವಟಿಕೆಗಳು ನಿರಾಯಾಸವಾಗಿ ಸಾಗಬೇಕೆಂದರೆ ಲಿಂಗಬೇಧವಿಲ್ಲದೆ ನಿರ್ದಿಷ್ಟ  ಉಡುಪುಗಳನ್ನು ಧರಿಸಬೇಕು. ಇದನ್ನು ಸಮಾಜವೂ ಸ್ವೀಕರಿಸಿದೆ. ಅದಕ್ಕೆ ನಮ್ಮ ಕಣ್ಣುಗಳೂ ಹೊಂದಿಕೊಂಡಿವೆ.  ಆದರೆ ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋಗಳನ್ನು ಗಮನಿಸಿ. ಈ ಐದು ನಾರೀಮಣಿಯರು ಸೀರೆಯುಟ್ಟುಕೊಂಡೇ ವ್ಯಾಯಾಮ, ಜಿಮ್ಮ್ಯಾಸ್ಟಿಕ್, ಸೀರೆಯಲ್ಲಿ ಮ್ಯಾರಥಾನ್​ ಮತ್ತು ಫುಟ್​ಬಾಲ್​​ನಲ್ಲಿ  (Marathon) ಯಶಸ್ವಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹೀಗೆ ಟ್ರೆಂಡ್​ ಆಗುತ್ತಿದ್ದಂತೆ ಕೆಲವರು, ಅರೆ! ಹೌದಲ್ಲ, ನಾವ್ಯಾಕೆ ಇದನ್ನು ಪ್ರಯತ್ನಿಸಬಾರದು ಎಂದು ಆಲೋಚಿಸುತ್ತಾರೆ. ಈ ಕೆಳಗಿನ ವಿಡಿಯೋ ನೋಡುತ್ತಿದ್ದಂತೆ ಸಂಪ್ರದಾಯಗಳನ್ನು ಮುರಿಯಲು ನಿಮಗೇನಾದರೂ ಸ್ಫೂರ್ತಿ ಬರುವುದುಂಟೆ?

ಸೀರೆಯಲ್ಲಿ ವ್ಯಾಯಾಮ: ಸೀರೆಯುಟ್ಟರೆ ವ್ಯಾಯಾಮ ಸಾಧ್ಯವೇ ಇಲ್ಲ ಎನ್ನುವರು ಹೆಚ್ಚು. ಆದರೆ ರೀನಾ ಸಿಂಗ್ ((Reena Singh) ಈ ನಂಬಿಕೆಯನ್ನು ಸೀರೆಯುಟ್ಟೇ ವ್ಯಾಯಾಮ ಮಾಡಿ ಮುರಿದಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಪ್ರೇರಣೆಗೊಂಡಿದ್ದಾರೆ. ಸೀರೆ ಬಿಟ್ಟರೆ ಬೇರೆ ದಿರಿಸುಗಳನ್ನು ಧರಿಸುವುದಿಲ್ಲ ಎಂದು ನಿರ್ಧರಿಸಿದವರಿಗೂ ರೀನಾ ಮಾದರಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸೀರೆಯಲ್ಲಿ ಜಿಮ್ನಾಸ್ಟಿಕ್ಸ್ : 24 ವರ್ಷದ ಜಿಮ್ನಾಸ್ಟಿಕ್​ ಪರಿಣಿತೆ (Gymnastics) ಪಾರೂಲ್ ಅರೋರಾ (Parul Arora) ಸೀರೆಯಲ್ಲಿ ಬ್ಯಾಕ್‌ಫ್ಲಿಪ್ ಮಾಡಿದ ಕ್ಷಣಗಳು ನಿಮ್ಮ ಮೈನವಿರೇಳಿಸುತ್ತವೆ. ಜಿಮ್ಯಾಸ್ಟಿಕ್​ನ ಉಡುಗೆಯಂತೆ ಸೀರೆ ಧರಿಸಿದಾಗಲೂ ಸರಾಗವಾಗಿ ಪ್ರದರ್ಶನ ನೀಡಿದ್ದಾರೆ. ಇದೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಜನಮನಸೂರೆಗೊಂಡು ವೈರಲ್ ಆಗಿದೆ.

ಸೀರೆಯಲ್ಲಿ ಓಟ : ಒಡಿಶಾ ಮೂಲದ ಶಿಕ್ಷಕಿ ಮಧುಸ್ಮಿತಾ ಜೆನಾ (Madhusmita Jena) ಕೆಂಪು ಬಣ್ಣದ ಖಂಡುವಾ ಪಟ ಸೀರೆಯನ್ನು ಉಟ್ಟುಕೊಂಡು 2023ರ ಮ್ಯಾಂಚೆಸ್ಟರ್ ಮ್ಯಾರಥಾನ್​ನಲ್ಲಿ ಪಾಲ್ಗೊಂಡಿದ್ದರು. 41 ವರ್ಷದ ಈಕೆ 5 ಗಂಟೆಗಳಲ್ಲಿ 42.5 ಕಿಮೀ ನಷ್ಟು ದೂರವನ್ನು ಯಾವುದೇ ಅಡೆತಡೆಗಳಿಲ್ಲದೆ ಓಡಿ ತಲುಪಿದರು.

View this post on Instagram

A post shared by Pure Odisha (@pure_odisha)

ಸೀರೆಯಲ್ಲಿ ಯೋಗನೃತ್ಯ: ನರ್ತಕಿ ರುಕ್ಮಿಣಿ ವಿಜಯಕುಮಾರ್ (Rukmini Vijayakumar) ಕಚ್ಚೆ ಸೀರೆಯುಟ್ಟು ಯೋಗ ಮತ್ತು ಸಾಹಸದಿಂದ ಮಿಳಿತಗೊಂಡ ನಮಾಮಿ ಯೋಗ ವಿದ್ಯೆ ಎಂಬ ನೃತ್ಯ ಪ್ರದರ್ಶನವನ್ನು ಮಾಡಿದ್ದಾರೆ. ಇದು ಅನೇಕರನ್ನು ಬೆರಗುಗೊಳಿಸಿದೆ. ಸರಿಯಾಗಿ ಸೀರೆ ಉಟ್ಟುಕೊಂಡರೆ ಏನೆಲ್ಲವನ್ನೂ ಮಾಡಬಹುದು ಎಂಬ ಆತ್ಮವಿಶ್ವಾಸ ಅವರದು.

ಸೀರೆಯಲ್ಲಿ ಫುಟ್‌ಬಾಲ್ : ಸೀರೆ ಉಟ್ಟುಕೊಂಡೂ ಫುಟ್​ಬಾಲ್ ಆಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಈ ಮಹಿಳೆಯರು. ಹೆಚ್ಚಿನ ಜನರು ಕಚ್ಚೆಸೀರೆ ಉಟ್ಟುಕೊಂಡಿದ್ದಾರೆ. ಅಲ್ಲದೆ ಬೂಟುಗಳನ್ನು ಧರಿಸಿ ಯಾವುದೇ ಹಿಂಜರಿಕೆಯಿಲ್ಲದೇ ಪಂದ್ಯವನ್ನು ಪೂರೈಸಿದ್ಧಾರೆ. ಗೋಲ್​ ಇನ್ ಸಾರೀ ಎಂಬ ಶೀರ್ಷಿಕೆ ಈ ಪಂದ್ಯಕ್ಕೆ ಇಡಲಾಗಿತ್ತು. ಇದೂ ಕೂಡ ನೆಟ್ಟಿಗರನ್ನು ಮನಸೂರೆಗೊಂಡಿದೆ.

ನಿಮಗೂ ಈಗ ಸಂಪ್ರದಾಯವನ್ನು ನಿಮ್ಮದೇ ಆದ ಅಸಾಂಪ್ರದಾಯಿಕತೆಯ ಮೂಲಕ ಮುರಿಯುವ ಆಲೋಚನೆ ಬರುತ್ತಿದೆಯೇ? ತಡವ್ಯಾಕೆ ಮತ್ತೆ!

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:09 pm, Fri, 30 June 23

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್