Viral Video: ಎರಡೂ ಕಡೆಯಿಂದಲೂ ಗುಂಡಿನ ದಾಳಿ ಪ್ರತಿ ದಾಳಿ, ಮಧ್ಯೆ ಕುಳಿತು ಏನೂ ಆಗಿಲ್ಲವೆಂಬಂತೆ ಸ್ಯಾಂಡ್‌ವಿಚ್ ತಿನ್ನುತ್ತಿರುವ ವ್ಯಕ್ತಿ
ಎಷ್ಟೇ ಹಸಿವಾಗಿರಲು ಗುಂಡಿನ ದಾಳಿ ನಡೆಯುತ್ತಿದೆ ಎಂದಾಗ ಎಂಥವರೂ ಜೀವ ಉಳಿಸಿಕೊಳ್ಳುವುದು ಹೇಗೆ ಎಂಬುದನ್ನು ನೋಡುತ್ತಾರೆ
ಎಷ್ಟೇ ಹಸಿವಾಗಿರಲು ಗುಂಡಿನ ದಾಳಿ ನಡೆಯುತ್ತಿದೆ ಎಂದಾಗ ಎಂಥವರೂ ಜೀವ ಉಳಿಸಿಕೊಳ್ಳುವುದು ಹೇಗೆ ಎಂಬುದನ್ನು ನೋಡುತ್ತಾರೆ. ಆದರೆ ಎರಡೂ ಕಡೆಯಿಂದಲೂ ಗುಂಡಿನ ದಾಳಿ, ಪ್ರತಿ ದಾಳಿ ನಡೆಯುತ್ತಿದ್ದರೂ ವ್ಯಕ್ತಿಯೊಬ್ಬ ಯಾವುದೇ ಭಯವಿಲ್ಲದೆ ಸ್ಯಾಂಡ್‌ವಿಚ್ ತಿನ್ನುತ್ತಿದ್ದ ವಿಡಿಯೋ ವೈರಲ್ ಆಗಿದೆ. ಪೊಲೀಸರು ಮತ್ತು ಗಲಭೆಕೋರರ ನಡುವಿನ ಎನ್‌ಕೌಂಟರ್ ಮಧ್ಯೆ, ಒಬ್ಬ ವ್ಯಕ್ತಿ ನಿರಾತಂಕವಾಗಿ ಸ್ಯಾಂಡ್‌ವಿಚ್ ತಿನ್ನುತ್ತಿರುವುದನ್ನು ಕಾಣಬಹುದು. ಎರಡೂ ಕಡೆಯಿಂದ ತೀವ್ರ ಘರ್ಷಣೆ ನಡೆಯುತ್ತಿರುವುದರಿಂದ ಈ ವಿಡಿಯೋ ನೋಡಿ ಯಾರಿಗಾದರೂ ಭಯ ಆಗದೇ ಇರದು.
ಈ ಟ್ವೀಟ್ ಮಾಡಿದ ವೀಡಿಯೊವನ್ನು ಫ್ರಾನ್ಸ್‌ನಲ್ಲಿರುವ ನಾಂಟೆರ್ರೆ ಎಂದು ಹೇಳಲಾಗುತ್ತಿದೆ. ಅಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದೆ. ಒಂದು ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ್ ಇದ್ದು, ಇನ್ನೊಂದು ಕಡೆ ಜನರ ಗುಂಪು ಇರುವುದು ವಿಡಿಯೋದಲ್ಲಿ ಗೋಚರಿಸುತ್ತಿದೆ.
ಜನರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದು, ಗುಂಡಿನ ಸದ್ದು ಕೂಡ ಕೇಳಿ ಬರುತ್ತಿದೆ. ಬೆಂಕಿ ಹಚ್ಚಿರುವುದು ವಿಡಿಯೋದಲ್ಲಿ ಗೋಚರಿಸುತ್ತಿದೆ. ಈ ಅಪಾಯಕಾರಿ ವಾತಾವರಣದ ನಡುವೆ ಗಾಜಿನಿಂದ ಮಾಡಿದ ಆಕೃತಿಯ ಬಳಿ ಕುಳಿತುಕೊಂಡು ವ್ಯಕ್ತಿಯೊಬ್ಬರು ಏನನ್ನೋ ತಿನ್ನುತ್ತಿರುವುದು ಕಾಣಬಹುದು, ಈ ವ್ಯಕ್ತಿಗೆ ಜೀವಕ್ಕಿಂತ ಆಹಾರವೇ ಹೆಚ್ಚು ಎಂದೆನಿಸುತ್ತದೆ.
ಮತ್ತಷ್ಟು ಓದಿ: Viral Post: ಕಾರನ್ನು ಇಲ್ಲಿ ನಿಲ್ಲಿಸಬೇಡಿ ಎಂದು ಕಾರಿನ ಗ್ಲಾಸ್ಗೆ ಅಂಟಿಸಿದ ಪತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಬೆಂಗಳೂರಿನ ಜನ
ಆ ಸ್ಥಳವನ್ನು ನೋಡಿದಾಗ, ಯಾವಾಗ ಬೇಕಾದರೂ ಪ್ರಾಣ ಹೋಗಬಹುದು ಎನ್ನುವ ಸನ್ನಿವೇಶವಿದೆ. ಆದರೂ ಈ ವ್ಯಕ್ತಿಯು ನಿರಾತಂಕವಾಗಿ ತನ್ನ ಆಹಾರವನ್ನು ಮುಗಿಸುವಲ್ಲಿ ನಿರತನಾಗಿರುತ್ತಾನೆ. ಘರ್ಷಣೆಯ ನಡುವೆ ವ್ಯಕ್ತಿಯೊಬ್ಬರು ಆಹಾರ ಸೇವಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಜನರು ಕಮೆಂಟ್ ಮಾಡುತ್ತಿದ್ದಾರೆ. ಇಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ 17 ವರ್ಷದ ಯುವಕನೊಬ್ಬ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.
Be that Man- Man continues to eat his sandwich as rioters and police clash in Nanterre, France.pic.twitter.com/vHrmLiAAmK
— Prof.N John Camm (@njohncamm) June 30, 2023
ಈ ಘಟನೆಯ ನಂತರ, ಫ್ರಾನ್ಸ್‌ನ ಅನೇಕ ಭಾಗಗಳಲ್ಲಿ ಪೊಲೀಸರ ಕಲ್ಲು ತೂರಾಟ ನಡೆಸಲಾಯಿತು. ಅಷ್ಟೇ ಅಲ್ಲ ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ